ಕೊಡಗು: ಸೋಮವಾರ ಬೆಳಗ್ಗೆ ಹೊಸದಾಗಿ 12 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ..

ಕೊಡಗು: ಸೋಮವಾರ ಬೆಳಗ್ಗೆ ಹೊಸದಾಗಿ 12 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ..

ಮಡಿಕೇರಿ:ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮ ಗಂಟೆ ವೇಳೆಗೆ ೧೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ.
ವಿರಾಜಪೇಟೆ ಕೆದಮುಳ್ಳೂರು ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ೫೦ ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಐಗೂರು ಅಂಚೆಯ ಕಾಜೂರು ಗ್ರಾಮದ ೩೨ ವರ್ಷದ ಪುರುಷ.
ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ ಸರ್ಕಾರಿ ಶಾಲೆ ಸಮೀಪದ ೫೬ ವರ್ಷದ ಪುರುಷ.
ಸೋಮವಾರಪೇಟೆ ಬಾಳಗುಂದ ಗ್ರಾಮ ಮತ್ತು ಅಂಚೆಯ ೩೦ ವರ್ಷದ ಮಹಿಳೆ.
ವಿರಾಜಪೇಟೆ ಪಾಲಿಬೆಟ್ಟದ ವಿ.ಎಸ್.ಎಸ್.ಎನ್ ಸೊಸೈಟಿ ಸಮೀಪದ ೬೦ ವರ್ಷದ ಮಹಿಳೆ.
ಸೋಮವಾರಪೇಟೆ ಶಾಂತಳ್ಳಿ ಗ್ರಾಮ ಮತ್ತು ಅಂಚೆಯ ೬೦ ವರ್ಷದ ಪುರುಷ.
ಮಡಿಕೇರಿ ಚೈನ್ ಗೇಟ್ ಸಮೀಪದ ೪೩ ವರ್ಷದ ಪುರುಷ.
ಮಡಿಕೇರಿ ಕರ್ಣಂಗೇರಿ ವಸತಿಗೃಹದ ೨೫ ವರ್ಷದ ಪುರುಷ.
ಮಡಿಕೇರಿ ಅಪ್ಪಂಗಳದ ಎರವನಾಡುವಿನ ಪಳ್ಳಿಂಡರ ಮನೆಯ ೪೯ ವರ್ಷದ ಮಹಿಳೆ.
ವಿರಾಜಪೇಟೆ ಪೊಲೀಸ್ ವಸತಿಗೃಹದ ೫೪ ವರ್ಷದ ಪುರುಷ.
ಮಡಿಕೇರಿ ಚೈನ್ ಗೇಟ್ ಸಮೀಪದ ೪೦ ವರ್ಷದ ಮಹಿಳೆ.
ವಿರಾಜಪೇಟೆ ಬಾಳಗೋಡುವಿನ ಕೊಡವ ಸಮಾಜ ಕಟ್ಟಡ ಸಮೀಪದ ೧೯ ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೨೦೦೬ ಆಗಿದ್ದು, ೧೬೪೦ ಮಂದಿ ಗುಣಮುಖರಾಗಿದ್ದಾರೆ. ೩೩೯ ಸಕ್ರಿಯ ಪ್ರಕರಣಗಳಿದ್ದು, ೨೭ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೩೩೮ ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳು