ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

-ಸಿದ್ದರಾಮಯ್ಯನವರೇ ನುಣಚಿಕೊಳ್ಳುವ ಕೆಲಸ ಮಾಡಬೇಡಿ
ಚಿಕ್ಕಬಳ್ಳಾಪುರ:
ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್‍ಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಅಲ್ಪಸಂಖ್ಯಾತ ಅನ್ನೋದು ಜಮೀರ್ ಖಾನ್ ಅವರಿಗೆ ಐಡಿನಾ ಅಂತ ಪ್ರಶ್ನೆ ಮಾಡಿದರು. ಜಾತಿಯ ಐಡಿ ಇಟ್ಟುಕೊಂಡು ರಕ್ಷಣೆ ಮಾಡಿಕೊಳ್ಳಿಬೇಕಾ? ತಪ್ಪಿತಸ್ಥರು ಯಾರೇ ಜನಾಂಗದವರಿರಲಿ, ಭಾಷಿಕರಿರಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಡವ ಅಥವಾ ಶ್ರೀಮಂತರರಿಲಿ ಪಕ್ಷಾತೀತವಾಗಿ ಕ್ರಮಕೈಗೊಳ್ಳುತ್ತೇವೆ ಎಂದರು.

ಡ್ರಗ್ಸ್ ದಂಧೆ ಸಂಬಂಧ ಕಾಂಗ್ರೆಸ್ ನಾಯಕರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಹೇಳಿಕೆಗಳಿಗೂ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಈ ದಂಧೆಯಲ್ಲಿ ಯಾರೇ ಭಾಗಿಯಾದರೂ ಅವರನ್ನ ರಕ್ಷಣೆ ಮಾಡೋದಿಲ್ಲ. ರಾಜ್ಯ ಸರ್ಕಾರದಿಂದ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ.ಹಿಂದಿನ ಸರ್ಕಾರಗಳಿದ್ದಾಗ ಡ್ರಗ್ಸ್ ದಂಧೆ ಯಾಕೆ ನಿಗ್ರಹ ಮಾಡಿಲ್ಲ?. ನಮ್ಮ ಸರ್ಕಾರ ಯಾವ ಒತ್ತಡಕ್ಕೂ ಮಣಿಯದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನವರು ಡ್ರಗ್ಸ್ ದಂಧೆಯನ್ನ ಲಘುವಾಗಿ ಪರಿಗಣಿಸಿದ್ದಾರೆ. ಇದು ಅಂತಹ ಲಘುವಾದ ಪ್ರಕರಣವಲ್ಲ. ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡೋದು ಡ್ರಗ್ಸ್ ದಂಧೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ಡ್ರಗ್ಸ್ ದಂಧೆ ನಿಗ್ರಹಕ್ಕೆ ಸಹಕಾರ ಕೊಡಿ. ಸಹಕಾರ ನೀಡುವ ಬದಲು ನುಣಚಿಕೊಳ್ಳೋ ಕೆಲಸ ಮಾಡಬೇಡಿ. ಡ್ರಗ್ಸ್ ಧಂದೆಯನ್ನ ಬುಡಸಮೇತ ಕಿತ್ತು ಹಾಕೋಣ. ಕಾಂಗ್ರೆಸ್ ನವರು ಸಹ ಯಾರನ್ನ ರಕ್ಷಣೆ ಮಾಡಲು ಹೋಗಬೇಡಿ ಅಂತ ಕುಟುಕಿದರು.

ತಾಜಾ ಸುದ್ದಿಗಳು