ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

– ನಮ್ಮ ಅಮ್ಮಗೆ ಏನಾದ್ರೂ ಆದ್ರೆ, ನಾನು ಸತ್ತರೂ ಸಂಬರಗಿಯನ್ನ ಬಿಡಲ್ಲ
– ನಾನು ಚಿಯರ್ ಗರ್ಲ್ ಅಲ್ಲ, ಚಪ್ಪಲಿ ತಕೊಂಡು ಹೊಡಿತ್ತೀನಿ
– ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದೆ ಗೊತ್ತಿಲ್ಲ
ಬೆಂಗಳೂರು:
ನಮ್ಮ ಅಮ್ಮನ ಹಾರ್ಟ್ ವೀಕ್, ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ನಟಿ ಸಂಜನಾ ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಸಂಜನಾ, ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳಿಂದ 200 ಜನ ಪ್ರತಿನಿಧಿಸಿದ್ದರು. ಹೀಗಾಗಿ ಊಹಾಪೋಹಾಗಳನ್ನು ಮಾತನಾಡಬೇಡಿ. ನಮ್ಮ ಅಮ್ಮಗೆ ಎದೆ ನೋವು ಕಾಣಿಸಿಕೊಂಡಿದೆ. ಅವರಿಗೆ ಏನಾದರೂ ಆದರೆ ನಾನು ಬಿಡಲ್ಲ. ನಾನು ಒಂದು ಹೆಣ್ಣು, ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿ ಸಂಜನಾ ಆಕ್ರೋಶ ಹೊರ ಹಾಕಿದರು.

ಜಮೀರ್ ಅವರು ಯಾರು ಅಂತಾನೇ ಗೊತ್ತಿಲ್ಲ. ಜಮೀರ್ ಅಹ್ಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಕಣ್ಣೀರು ಹಾಕಿದರು.

ಮೊದಲಿಗೆ ‘ಗಂಡ-ಹೆಂಡತಿ’ ಸಿನಿಮಾ ಮಾಡಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೇಗೆ ಓಡಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅದು ಈಗ ಮುಚ್ಚಿ ಹೋಗಿದೆ. ಅವರಿಗೆ ಟೈಂ ಪಾಸ್ ಬೇಕು ಅಷ್ಟೇ. ರಾಹುಲ್ ಒಳ್ಳೆಯ ಹುಡುಗ, ಎಫ್ಐಆರ್‌ನಲ್ಲಿ ನನ್ನ ಹೆಸರು ಇಲ್ಲ. ಸಂಜನಾ ಡ್ರಗ್ಸ್ ನಲ್ಲಿದ್ದಾರೆ ಎಂದು ಹೇಳಲು ಯಾರಿಗೂ ಏನು ಅಧಿಕಾರ ಇಲ್ಲ. ಏನು ಸಾಕ್ಷ್ಯ ಇಲ್ಲದೆ ಮಾತನಾಡುತ್ತಿದ್ದಾರೆ. ಆದರೆ ನಾನು ತುಂಬಾ ಕಷ್ಟಪಟ್ಟು ಇಲ್ಲಿಯವರೆಗೂ ಹೆಸರು ಮಾಡಿಕೊಂಡು ಬಂದಿದ್ದೇನೆ. 50 ಸಿನಿಮಾಗಳನ್ನು ಮಾಡಿರುವ ಪಂಚಭಾಷಾ ತಾರೆ ನಾನು. ನನಗೆ ಅಗ್ಗದ ಪ್ರಚಾರ ಬೇಡ ಎಂದರು.

ನನ್ನ ಅಮ್ಮಗೆ ಎದೆನೋವು ಕಾಣಿಸಿಕೊಂಡಿದೆ. ರಾತ್ರಿಯೆಲ್ಲಾ ಅಮ್ಮ ಮಲಗಿಲ್ಲ. ಅಮ್ಮನ ಹಾರ್ಟ್ ವೀಕ್, ಅವರಿಗೆ ಸರಿಯಾಗಿ ರಕ್ತ ಸಂಚಲನ ಆಗುತ್ತಿಲ್ಲ. ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ಸಂಬರಗಿ ವಿರುದ್ಧ ವಾಗ್ದಾಳಿ ಮಾಡಿದರು.

ನಾನು ಚಿಯರ್ ಗರ್ಲ್ ಅಲ್ಲ. ಚಪ್ಪಲಿ ತೆಗೆದುಕೊಂಡು ಹೊಡಿತ್ತೀನಿ. ಪ್ರಶಾಂತ್ ಸಂಬರಗಿ ಯಾರು ಅಂತನೇ ಗೊತ್ತಿಲ್ಲ. ಅವನ ನಂಬರ್ ಕೂಡ ಇಲ್ಲ. ಸುದ್ದಿಯಲ್ಲಿರುವವರ ಬಗ್ಗೆ ಊಹಾಪೋಹ ಮಾತನಾಡುತ್ತಾನೆ. ಅವನು ಇಂಡಸ್ಟ್ರಿಯಲ್ಲಿ ಇಲ್ಲ. ರಾಹುಲ್ ನನ್ನ ಸ್ವಂತ ಅಣ್ಣನ ತರ, ಅವನು ಒಳ್ಳೆಯ ಹುಡುಗ. ರಾಹುಲ್ ಆಚೆ ಬಂದರೆ ಸಾಕು. ಪೊಲೀಸ್ ಅವರು ಬಂದರೆ ನಾನೇ ಗೌರವ ಕೊಟ್ಟು ಹೋಗುತ್ತೇನೆ. ನನಗೆ ಭಾರತದ ಕಾನೂನಿನ ಮೇಲೆ ಗೌರವ ಇದೆ ಎಂದು ಸಂಜನಾ ಹೇಳಿದರು.

ತಾಜಾ ಸುದ್ದಿಗಳು