ಇವತ್ತು ಬರಲ್ಲ, ವಿಚಾರಣೆಗೆ ಸೋಮವಾರ ಬರ್ತಿನಿ: ಅನಾರೋಗ್ಯದ ನೆಪ ಹೇಳಿದ ‘ತುಪ್ಪದ ಬೆಡಗಿ’

ಇವತ್ತು ಬರಲ್ಲ, ವಿಚಾರಣೆಗೆ ಸೋಮವಾರ ಬರ್ತಿನಿ: ಅನಾರೋಗ್ಯದ ನೆಪ ಹೇಳಿದ ‘ತುಪ್ಪದ ಬೆಡಗಿ’

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಶೆಯ ನಂಟಿನ ಆರೋಪದಲ್ಲಿ ನಟಿ ರಾಗಿಣಿ ದ್ವಿವೇದಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನಟಿ ರಾಗಿಣಿ, ನಾನು ಇಂದು ವಿಚಾರಣೆಗೆ ಹಾಜರಾಗುತ್ತಿಲ್ಲ, ಇದನ್ನು ನಾನು ನನ್ನ ವಕೀಲರ ಮೂಲಕ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ, ಜವಾಬ್ದಾರಿಯುತ ನಾಗರಿಕಳಾಗಿ ನಾನು ಕಾನೂನು ಮತ್ತು ಅದರ ಪ್ರಕ್ರಿಯೆಯನ್ನು ಗೌರವಿಸುತ್ತೇನೆ, ನಿನ್ನೆ ನನಗೆ ಬಹಳ ತಡವಾಗಿ ನೋಟಿಸ್ ಸಿಕ್ಕಿತು, ಹೀಗಾಗಿ ಇಂದು ವಿಚಾರಣೆಗೆ ಹಾಜರಾಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು