ಕ್ರಿಕೆಟ್‌ಗಾಗಿ ನೀವು ಮಾಡಿರುವ ಎಲ್ಲಕ್ಕೂ ಎಂದಿಗೂ ಕೃತಜ್ಞರಾಗಿರಬೇಕು: ಎಂಎಸ್ ಧೋನಿಗೆ ಪಿಎಂ ಮೋದಿ ಪತ್ರ

ಕ್ರಿಕೆಟ್‌ಗಾಗಿ ನೀವು ಮಾಡಿರುವ ಎಲ್ಲಕ್ಕೂ ಎಂದಿಗೂ ಕೃತಜ್ಞರಾಗಿರಬೇಕು: ಎಂಎಸ್ ಧೋನಿಗೆ ಪಿಎಂ ಮೋದಿ ಪತ್ರ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗಾಗಿ ಪಿಎಂ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

“ನಿಮ್ಮ ಹೆಜ್ಜೆಗುರುತುಗಳು ದಿಟ್ಟವೂ, ಧೈರ್ಯದಿಂದಲೂ ಕೂಡಿದೆ,ನೀವು ಇಡೀ ರಾಷ್ಟ್ರಮಟ್ಟದಲ್ಲಿ ಚರ್ಚೆಯ ಕೇಂದ್ರವಾಗಲು ನೀವು ಹಂಚಿಕೊಂಡ ಆ ವಿಡಿಯೋ ಸಾಕು, . 130 ಕೋಟಿ ಭಾರತೀಯರು ನಿಮ್ಮ ನಿವೃತ್ತಿ ಸುದ್ದಿಯಿಂದ ನಿರಾಶೆಗೊಂಡರು ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿದ ಎಲ್ಲಾ ಕೆಲಸಗಳಿಗೆ ನಾವೆಲ್ಲರೂ ಎಂದೆಂದಿಗೂ ಕೃತಜ್ಞರಾಗಿರಬೇಕು” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಆಗಸ್ಟ್ 15 ರಂದು ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

“ಧನ್ಯವಾದಗಳು, ನಿಮ್ಮ ಪ್ರೀತಿಗಾಗಿ, ಬೆಂಬಲಕ್ಕಾಗಿ ಬಹಳ ಬಹಳ ಧನ್ಯವಾದಗಳು, 1929 ಗಂಟೆಯಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ” ಎಂದು ಅವರು ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.


2007 ರಲ್ಲಿ ವಿಶ್ವ ಟಿ 20 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಟೀಂ ಇಂಡಿಯಾಗೆ ಹಲವಾರು ಪ್ರಶಸ್ತಿಗಳ ಗೆದ್ದು ಕೊಡುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಧೋನಿ ಅವರನ್ನು ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಳು