ಹಾಸನ – ವರದಕ್ಷಿಣೆ ಕಿರುಕುಳ ಪತಿ ಮನೆಯವರಿಂದ ಪತ್ನಿ ಹತ್ಯೆ

ಹಾಸನ – ವರದಕ್ಷಿಣೆ ಕಿರುಕುಳ ಪತಿ ಮನೆಯವರಿಂದ ಪತ್ನಿ ಹತ್ಯೆ


ಆಲೂರು :
ಹೊಸದಾಗಿ ಮದುವೆಯಾಗಿದ್ದ ೨೩ ವರ್ಷದ ಮಹಿಳೆಯೊಬ್ಬರನ್ನು ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳಕೊಟ್ಟು ಸಾಯಿಸಿ ನೇಣು ಬಿಗಿದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಘಟನೆಯ ವಿವರ :
ಮೃತ ಮಹಿಳೆ ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯ ಅಲಿಯಾಸ್ ಪ್ರಿಯಾಂಕಾ (೨೩) ಎಂದು ತಿಳಿದಿದ್ದು ಈಕೆ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ, ಪುರಬೈರವನಹಳ್ಳಿ ಗ್ರಾಮದ ಕಿರಣ್ ಬಿನ್ ಲೋಕೇಶ್ ಎಂಬುವರನ್ನು ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು ಎಂದು ಆಕೆಯ ತಂದೆ ಪೊಲೀಸ್ ದೂರು ನೀಡಿದ್ದು. ತಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ ಮಾವ ವರದಕ್ಷಿಣೆ ತಂದುಕೊಡು ಎಂದು ಕಿರುಕುಳ ನೀಡುತ್ತಿದ್ದರು ಆ೦೫ ರ ಮಧ್ಯಾಹ್ನ ೦೨:೦೦ ಗಂಟೆ ಸಮಯದಲ್ಲಿ ನಮ್ಮ ಮಗಳನ್ನು ಸಾಯಿಸಿ ಅವಳೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ನೇಣು ಬಿಗಿದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಲೂರು ಪೊಲೀಸರು ಪ್ರಿಯಾ ಅಲಿಯಾಸ್ ಪ್ರಿಯಾಂಕಾಳ ಪತಿ ಕಿರಣ್, ಆತನ ತಂದೆ ಲೋಕೇಶ್ ಹಾಗೂ ತಾಯಿ ರುಕ್ಮಿಣಿಯ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

ವರದಿ ಸತೀಶ್ ಚಿಕ್ಕಕಣಗಾಲ್

ತಾಜಾ ಸುದ್ದಿಗಳು