ಆಶ್ಲೇಷ ಮಳೆಯ ಆರ್ಭಟಕ್ಕೆ ಕೊಡಗು ತತ್ತರ ರೆಡ್ ಅಲರ್ಟ್ ಘೋಷಣೆ.

ಆಶ್ಲೇಷ ಮಳೆಯ ಆರ್ಭಟಕ್ಕೆ ಕೊಡಗು ತತ್ತರ ರೆಡ್ ಅಲರ್ಟ್ ಘೋಷಣೆ.

ಮಡಿಕೇರಿ:ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಗೆ ಆಗಸ್ಟ್, 05 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್, 06 ರ ಬೆಳಗ್ಗೆಯಿಂದ ಆಗಸ್ಟ್, 07 ರ ಬೆಳಗ್ಗೆವರೆಗೆ ಆರೇಂಜ್ ಮತ್ತು ಆಗಸ್ಟ್, 07 ರ ಬೆಳಗ್ಗೆಯಿಂದ ಆಗಸ್ಟ್, 08 ರ ಬೆಳಗ್ಗೆವರೆಗೆ ಯೆಲ್ಲೋ ಮತ್ತು ಆಗಸ್ಟ್, 08 ರ ಬೆಳಗ್ಗೆಯಿಂದ ಆಗಸ್ಟ್, 10 ರವರೆಗೆ ಆರೇಂಜ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆಯು ಹೆಚ್ಚಾಗುವ ಸಂಭವ ಇದ್ದು, ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ : 24*7 ಕಂಟ್ರೋಲ್ ರೂಂ 08272-221077, ವಾಟ್ಸ್‍ಆಫ್ ನಂ. 8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳು