ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 54,736 ಕೇಸ್ ಪತ್ತೆ, 17.5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 37,364 ಮಂದಿ ಬಲಿ

ಭಾರತದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಒಂದೇ ದಿನ 54,736 ಕೇಸ್ ಪತ್ತೆ, 17.5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 37,364 ಮಂದಿ ಬಲಿ

ನವದೆಹಲಿ: ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 54,736 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಇನ್ನು ನಿನ್ನೆ ಒಂದೇ ದಿನ 853 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 37,364ಕ್ಕೆ ಏರಿಕೆಯಾಗಿದೆ.

ಒಂದೇ ದಿನ 54,736 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 17,50,724ಕ್ಕೆ ಏರಿಕೆಯಾಗಿದೆ. 17,50,724 ಮಂದಿ ಸೋಂಕಿತರ ಪೈಕಿ 11,45,630 ಮಂದಿ ಗುಣಮುಖರಾಗಿದ್ದು, ದೇಶದಲ್ಲಿನ್ನೂ 5,67,730 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಇನ್ನು ರಾಜ್ಯವಾರು ಮಹಾರಾಷ್ಟ್ರದಲ್ಲಿ 9,601 ಕೇಸ್, 322 ಸಾವು, ತಮಿಳುನಾಡಿನಲ್ಲಿ 5,879 ಕೇಸ್, 99 ಸಾವು, ದೆಹಲಿಯಲ್ಲಿ 1,117 ಕೇಸ್ 26 ಸಾವು, ಆಂಧ್ರಪ್ರದೇಶದಲ್ಲಿ 9,276 ಕೇಸ್ 68 ಸಾವು, ಕರ್ನಾಟಕದಲ್ಲಿ 5,172 ಕೇಸ್ 98 ಸಾವು ಸಂಭವಿಸಿದೆ.

ಸೋಂಕಿತರ ಸಂಖಅಯೆಯಲ್ಲಿ ಗಣನೀಯ ಏರಿಕೆ ಹೊರತಾಗಿಯೂ ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.2.15ಕ್ಕೆ ಇಳಿದಿದೆ. ಅಂದರೆ 100 ದನ ಸೋಂಕಿತರಲ್ಲಿ ಸರಾಸರಿ 2.15 ಜನರು ಮಾತ್ರವೇ ಸಾವನ್ನಪ್ಪುತ್ತಿದ್ದಾರೆ.

ತಾಜಾ ಸುದ್ದಿಗಳು