ಮಾಜಿ ಸಚಿವ ಸಾ.ರಾ ಮಹೇಶ್ ಕ್ವಾರಂಟೈನ್

ಮಾಜಿ ಸಚಿವ ಸಾ.ರಾ ಮಹೇಶ್ ಕ್ವಾರಂಟೈನ್

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಹೌದು. ಮೈಸೂರಿನಲ್ಲಿ ತಾಲೂಕುಗಳೀಗೂ ಮಾಹಾಮಾರಿ ವ್ಯಾಪಿಸಿದೆ. ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್‍ಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ ಮಹೇಶ್‍ಗೆ ಆತಂಕ ಹೆಚ್ಚಾಗಿದೆ.

ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸೀಲ್‍ಡೌನ್ ಪ್ರದೇಶಗಳಿಗೆ ಭೇಟಿ ಭೇಟಿ ನೀಡಿದ್ದರು. ಬ್ರಾಹ್ಮಣರ ಬೀದಿ ಮತ್ತು ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬದವರಿಗೆ ಅಗತ್ಯ ವಸ್ತುಗಳು ಹಾಗೂ ಪಡಿತರ ದಿನಸಿ ಪದಾರ್ಥ ಔಷಧಿಗಳನ್ನು ವಿತರಿಸಿದ್ದರು. ಇದೀಗ ತಹಶೀಲ್ದಾರ್‍ಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು ಕ್ವಾರಂಟೈನ್ ಮಾಡಲಾಗಿದೆ.

ತಾಜಾ ಸುದ್ದಿಗಳು