ಪತ್ರಕರ್ತರಿಗೆ ಕೋವಿಡ್ ವಿಮಾ ಪರಿಹಾರ: ಸಿಎಂ ಭರವಸೆ

ಪತ್ರಕರ್ತರಿಗೆ ಕೋವಿಡ್ ವಿಮಾ ಪರಿಹಾರ: ಸಿಎಂ ಭರವಸೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಸಂಪಾದಕರ ಗಿಲ್ಡ್ ನ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪತ್ರಕರ್ತರನ್ನು ಕೋವಿಡ್-19 ವಿಮಾ ಪ್ಯಾಕೇಜ್ ನಲ್ಲಿ ಸೇರಿಸುವಂತೆ ಮನವಿ ಮಾಡಿದ್ದಾರೆ.

ಅಸ್ಸಾಂ ಸರ್ಕಾರ ಪತ್ರಕರ್ತರಿಗೆ 50 ಲಕ್ಷ ರೂಪಾಯಿ ಕೋವಿಡ್ ವಿಮೆ ಘೋಷಣೆ ಮಾಡಿರುವುದು ಸೇರಿದಂತೆ ಹರಿಯಾಣ, ದೆಹಲಿ, ಕೇರಳ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳನ್ನು ಸಿಎಂ ಗಮನಕ್ಕೆ ತಂದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ನಿಟ್ಟಿನಲ್ಲಿ ಪತ್ರಕರ್ತರಿಗೂ ಕೋವಿಡ್ ಸಂದರ್ಭದಲ್ಲಿ ವಿಮೆ ಪರಿಹಾರ ಜಾರಿಗೆ ತರುವಂತೆ ಸಿಎಂ ಸೂಚಿಸಿದ್ದಾರೆ.

5 ಲಕ್ಷ ರೂ ಪರಿಹಾರ:ಇತ್ತೀಚೆಗೆ ಮೃತಪಟ್ಟ ವಿಜಯ‌ ಕರ್ನಾಟಕ ಪತ್ರಿಕೆಯ ಪತ್ರಕರ್ತ ಗೌರಿಪುರ ಚಂದ್ರು (ಜಿ.ಪಿ.ಚಂದ್ರಶೇಖರ) ಮತ್ತು ಬೇಲೂರು ಪ್ರಜಾವಾಣಿ ವರದಿಗಾರ ಬಿ.ಎಂ.ರವೀಶ್ ಅವರ ಕುಟುಂಬಕ್ಕೆ ಇದೇ ಸಂದರ್ಭದಲ್ಲಿ ತಲಾ 5 ಲಕ್ಷ ರೂ ಪರಿಹಾರವನ್ನು ಸಿಎಂ ಮಂಜೂರು ಮಾಡಿದ್ದಾರೆ.

ತಾಜಾ ಸುದ್ದಿಗಳು