ಕೊಡಗಿನಲ್ಲಿ ವಾರದ ಬಳಿಕ ಉತ್ತಮ ಮಳೆ

ಕೊಡಗಿನಲ್ಲಿ ವಾರದ ಬಳಿಕ ಉತ್ತಮ ಮಳೆ

ಮಡಿಕೇರಿ: ಕಳೆದೊಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣ ಕೊಡಗು ಜಿಲ್ಲೆಯಲ್ಲಿ ಇಂದು ಬಿರುಸು ಪಡೆದಿದ್ದು, ಮಧ್ಯಾಹ್ನ ನಂತರ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದೆ.

ಒಂದು ವಾರದಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮಧ್ಯಾಹ್ನದ ನಂತರ ಬಿರುಸು ಪಡೆದಿದೆ. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನದ ಬಳಿಕ ಎಡಬಿಡದೆ ಅಬ್ಬರಿಸುತ್ತಿದೆ.

ರಾಜ್ಯ ಹವಾಮಾನ ಇಲಾಖೆ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ತಲಕಾವೇರಿ, ಬ್ರಹ್ಮಗಿರಿ, ಭಾಗಮಂಡಲ, ವಿರಾಜಪೇಟೆ, ನಾಪೋಕ್ಲು ಸೇರಿದಂತೆ ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದ್ದು, ಹಾರಂಗಿ ಜಲಾಶಯದ ನೀರಿನ ಒಳ ಹರಿವಿನಲ್ಲೂ ಹೆಚ್ಚಳವಾಗುತ್ತಿದೆ.

ತಾಜಾ ಸುದ್ದಿಗಳು