ಕ್ಷುಲಕ ಕಾರಣಕ್ಕೆ ತಂದೆಯಿಂದಲೇ ಮಗನ ಹತ್ಯೆ

ಕ್ಷುಲಕ ಕಾರಣಕ್ಕೆ ತಂದೆಯಿಂದಲೇ ಮಗನ ಹತ್ಯೆ

ಚಾಮರಾಜನಗರ: ಕ್ಷುಲಕ ಕಾರಣಕ್ಕೆ ತಂದೆಯಿಂದಲೇ ಮಗ ಕೊಲೆಗೀಡಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿಯಲ್ಲಿ ನಡೆದಿದೆ.

ಮಲ್ಲಿಕಾರ್ಜುನಪ್ಪ(48) ಮೃತರು.

ಹೊನ್ನೇಗೌಡನಹಳ್ಳಿಯಲ್ಲಿ ಜಮೀನಿನಲ್ಲಿ ಮರ ಕಡಿಯುವ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ತಂದೆ ಮಹಾದೇವಪ್ಪ ಮಗ ಮಲ್ಲಿಕಾರ್ಜುನಪ್ಪರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಕುಟುಂಬದಿಂದ ಪ್ರತ್ಯೇಕ ವಾಸವಿದ್ದ ಮಲ್ಲಿಕಾರ್ಜುನಪ್ಪ ಒಟ್ಟು ಕುಟುಂಬದ ಜಮೀನಿನಲ್ಲಿ ಮರ ಕಡಿಯಲು ಮುಂದಾಗಿದ್ದರು.

ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀರ್ಮಾನ ಮಾಡಿ ಕೊಡುವ ಸಲಹೆ ಕೇಳಿದ್ದರು.
ತೀರ್ಮಾನವಾಗುವ ಮೊದಲೇ ಮಲ್ಲಿಕಾರ್ಜುನಪ್ಪ ಜೂ.28ರ ಬೆಳಗ್ಗೆ ಮರ ಕಡಿಯಲು ಮುಂದಾಗಿದ್ದರು. ಅಲ್ಲೇ ಇದ್ದ ತಂದೆ ಮಗನನ್ನು ಮರ ಕಡಿಯದಂತೆ ತಡೆಯಲು ಮುಂದಾಗಿದ್ದರು.

ಪರಸ್ಪರ ಗಲಾಟೆ ನಡೆದು ತಂದೆ ಕೊಡಲಿಯಿಂದ ಮಗನಿಗೆ ಹೊಡೆದಿದ್ದಾರೆ. ಪರಿಣಾಮ ಮಲ್ಲಿಕಾರ್ಜುನಪ್ಪ ತೀವ್ರಗಾಯಗೊಂಡು ರಕ್ತಸ್ರಾವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಳು