ಜುಲೈ 2 ರಿಂದ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶ

ಜುಲೈ 2 ರಿಂದ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಅವಕಾಶ

– ಗರ್ಭಗುಡಿಗೆ ಪ್ರವೇಶವಿಲ್ಲ, ಹರಕೆ ತೀರಿಸುವಂತಿಲ್ಲ
ರಾಯಚೂರು:
90 ದಿನಗಳಿಂದ ಬಾಗಿಲು ಹಾಕಿದ್ದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠದ ಪ್ರವೇಶಕ್ಕೆ ಕೊನೆಗೂ ಅವಕಾಶ ಮಾಡಿಕೊಡಲಾಗಿದೆ. ಜುಲೈ 2 ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಮಠದಲ್ಲಿ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದ್ದು, ಜುಲೈ 2 ರಿಂದ ಮುಂಜಾನೆ 8 ರಿಂದ ಮಧ್ಯಾಹ್ನ 2 ಗಂಟೆ, ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರಿಗೆ ಶ್ರೀಸುಯತೀಂದ್ರ ವಿಶ್ರಾಂತಿ ನಿಲಯದಲ್ಲಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ. ದಿನ ಬಿಟ್ಟು ದಿನ ಒಂದೊಂದು ಮಹಡಿಯಲ್ಲಿ ಸರಿ, ಬೆಸ ಸಂಖ್ಯೆಯಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಒಂದು ರೂಂಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಬರುವ ಭಕ್ತರಿಗೆ ಆಧಾರ ಕಾರ್ಡ್ ,ಮೊಬೈಲ್ ಸಂಖ್ಯೆ ನೀಡುವುದು ಕಡ್ಡಾಯ ಮಾಡಲಾಗಿದೆ. 10 ವರ್ಷಕ್ಕಿಂತ ಕೆಳಗಿನ, 65 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ ಪ್ರವೇಶವಿಲ್ಲ. ಸೋಂಕಿನ ಲಕ್ಷಣವಿದ್ದವರಿಗೆ, ಕಂಟೈನ್‍ಮೆಂಟ್ ಝೋನ್ ನಿಂದ ಬರುವವರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಸದ್ಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಗರ್ಭಗುಡಿಯಲ್ಲಿ ಭಕ್ತರಿಗೆ ಪ್ರವೇಶವಿಲ್ಲ.

ತಪ್ತ ಮುದ್ರಾ, ಪಂಚಾಮೃತ,ತೀರ್ಥ ಪ್ರಸಾದ ಸೇವೆ ಇಲ್ಲ. ದೇವಸ್ಥಾನದ ಹತ್ತಿರದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ ಅಂತ ಮಠದ ವ್ಯವಸ್ಥಾಪಕ ವೆಂಕಟೇಶ ಜೋಷಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು