ಹುಂಡಿ ಗ್ರಾಮ‌‌ ಸೀಲ್ ಡೌನ್: 250ಕ್ಕೂ ಹೆಚ್ಚು ಜನರ ಗೋಳು ಕೇಳೋರಿಲ್ಲ:ಆಹಾರ ವ್ಯವಸ್ಥೆ ಒದಗಿಸದ ಜಿಲ್ಲಾಡಳಿತ, ಜನರ ಆಕ್ರೋಶ

ಹುಂಡಿ ಗ್ರಾಮ‌‌ ಸೀಲ್ ಡೌನ್: 250ಕ್ಕೂ ಹೆಚ್ಚು ಜನರ ಗೋಳು ಕೇಳೋರಿಲ್ಲ:ಆಹಾರ ವ್ಯವಸ್ಥೆ ಒದಗಿಸದ ಜಿಲ್ಲಾಡಳಿತ, ಜನರ ಆಕ್ರೋಶ

ಮಡಿಕೇರಿ:ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಹುಂಡಿ ಪೈಸಾರಿ ಗ್ರಾಮದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಸೀಲ್ ಡೌನ್ ಆಗಿದೆ.

ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಸೀಲ್ ಡೌನ್ ಹಿನ್ನೆಲೆ,ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ದಿನನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.
50 ಕ್ಕೊ ಹೆಚ್ಚು ಕುಟುಂಬಗಳಿರುವ ಪ್ರದೇಶದಲ್ಲಿ 250ಕ್ಕೊ ಹೆಚ್ಚು ಮಂದಿ ವಾಸಮಾಡುತ್ತಿದ್ದಾರೆ.
ಆಹಾರ ಕಿಟ್ ಒದಗಿಸುವಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ವಿಫಲವಾಗಿದ್ದು,
ಕೂಡಲೇ ಆಹಾರ ಕಿಟ್ ಒದಗಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ,
ಮಾಲ್ದಾರೆ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಸಜಿ ಥೋಮಸ್ ಹೇಳಿದರು.
ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು