ಮ.ಬೆಟ್ಟದ ಗೋಲಕಗಳ ಎಣಿಕೆ ; 96 ಲಕ್ಷ ಸಂಗ್ರಹ

ಮ.ಬೆಟ್ಟದ ಗೋಲಕಗಳ ಎಣಿಕೆ ; 96 ಲಕ್ಷ ಸಂಗ್ರಹ

ಚಾಮರಾಜನಗರ: ಬರೋಬ್ಬರಿ 4 ತಿಂಗಳ ಬಳಿಕ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ನಡೆದಿದ್ದು, 96 ಲಕ್ಷ ರೂ. ಸಂಗ್ರಹವಾಗಿದೆ.

ಯುಗಾದಿ ಜಾತ್ರೆ ಬಳಿಕ ಹುಂಡಿ ಹಣ ಏಣಿಕೆಯಾಗಬೇಕಿತ್ತು. ಆದರೆ, ಕೊರೊನಾ ಲಾಕ್​ಡೌನ್​ನಿಂದ ಜಾತ್ರೆ ರದ್ದಾಗಿ ದೇಗುಲವೇ ಬಂದ್​ ಆಗಿದ್ದರಿಂದ ಹಣ ಎಣಿಕೆ ನಡೆದಿರಲಿಲ್ಲ.‌

ಈಗ ಸಂಗ್ರಹವಾಗಿರುವ 96, 27, 988 ರೂ.ನಲ್ಲಿ ಶೇ. 90 ರಷ್ಟು ಹಣ ಮಾರ್ಚ್​ನಲ್ಲಿ ಬಂದ ಭಕ್ತಾದಿಗಳದ್ದಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆಹುಂಡಿ ಹಣದ ಜೊತೆಗೆ 19.3 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ.

ಇದರ ಜೊತೆಗೆ, ವಿಶೇಷವಾಗಿ 5 ಅಮೇರಿಕನ್ ಡಾಲರ್​ ಅನ್ನೂ ಮಾದಪ್ಪನ ಹುಂಡಿಗೆ ಭಕ್ತರೊಬ್ಬರು ಅರ್ಪಿಸಿದ್ದಾರೆ. ದೇಗುಲ ಬಂದ್​ ಆಗಿದ್ದರಿಂದ ಮಹದೇಶ್ವರನ ಆದಾಯದಲ್ಲಿ ಕೋಟ್ಯಂತರ ರೂ. ಖೋತವಾಗಿದ್ದು ಲಾಡು ಪ್ರಸಾದದ ಬೇಡಿಕೆಯೂ ಕುಸಿದಿತ್ತು‌. ಈಗೀಗ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ತಾಜಾ ಸುದ್ದಿಗಳು