ಮತ್ತೆ ಲಾಕ್‍ಡೌನ್ ಗೊಂದಲಕ್ಕೆ ಸಚಿವ ಅಶೋಕ್ ಸ್ಪಷ್ಟನೆ

ಮತ್ತೆ ಲಾಕ್‍ಡೌನ್ ಗೊಂದಲಕ್ಕೆ ಸಚಿವ ಅಶೋಕ್ ಸ್ಪಷ್ಟನೆ

ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ಲಾಕ್‍ಡೌನ್ ಮಾಡಲ್ಲ
ಬೆಂಗಳೂರು:
ಲಾಕ್‍ಡೌನ್ ಬೇಕು ಅಂದಾಗ ಹಾಕೋದು, ಬೇಡ ಅಂದಾಗ ಬಿಡೋದು ಮಾಡಲ್ಲ. ತಜ್ಞರ ಜೊತೆ ಚರ್ಚೆ ನಡಿಯುತ್ತಿದೆ. ನುರಿತ ತಜ್ಞರ ಅಭಿಪ್ರಾಯದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ರಾಜ್ಯ ಸರ್ಕಾರದ ನೀತಿ-ನಿಯಮಗಳಿವೆ. ಅಲ್ಲದೇ ಕೇಂದ್ರ ಸರ್ಕಾರ ಮಿನಿಟ್ ಟು ಮಿನಿಟ್ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಫಾಲೋ ಮಾಡುತ್ತಿದೆ. ಜೊತೆಗೆ ಅಲ್ಲಿಂದ ನಿರ್ದೇಶನ ಕೂಡ ಬರುತ್ತಿದೆ. ಇದಕ್ಕೆ ಎಂದು ಒಂದು ನುರಿತ ತಜ್ಞರ ಸಮಿತಿ ಇದೆ. ಆ ಸಮಿತಿಯಲ್ಲಿ ವೈದ್ಯರು, ಐಎಎಸ್ ಅಧಿಕಾರಿಗಳು, ಪೊಲೀಸರು, ಮಂತ್ರಿಗಳು ಇದ್ದಾರೆ. ಪ್ರತಿದಿನ ನಾವು, ಹಿರಿಯ ಸಚಿವರು ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಭೆ ಮಾಡುತ್ತಿದ್ದೇವೆ ಎಂದು ತಿಳಿದರು.

ಲಾಕ್‍ಡೌನ್ ಬೇಕು ಅಂದಾಗ ಹಾಕೋದು, ಬೇಡ ಅಂದಾಗ ಬಿಡೋದು ಮಾಡಲ್ಲ. ತಜ್ಞರ ಜೊತೆ ಚರ್ಚೆ ನಡಿಯುತ್ತಿದೆ. ನಂತರ ಸಭೆಗಳನ್ನ ಮಾಡುತ್ತೇವೆ. ಜೊತೆಗೆ ಕೇಂದ್ರ ಸರ್ಕಾರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಲಾಕ್‍ಡೌನ್ ಮಾಡಲ್ಲ. ನುರಿತ ತಜ್ಞರ ಅಭಿಪ್ರಾಯದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಾರ್ಡ್ ಆಧಾರದ ಮೇಲೆ ಸೀಲ್‍ಡೌನ್ ಮಾಡಬೇಕಾ? ವಿಧಾನಸಭೆ ಆಧಾರದ ಮೇಲೆ ಸೀಲ್‍ಡೌನ್ ಮಾಡಬೇಕಾ? ಎಂಬುದನ್ನು ಚರ್ಚೆ ಮಾಡುತ್ತಿದ್ದೇವೆ. ಸದ್ಯಕ್ಕೆ ತಜ್ಞರ ವರದಿ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಸಭೆಯಲ್ಲಿ ಏರಿಯಾ ಲಾಕ್‍ಡೌನ್ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

ಈಗಾಗಲೇ ನಗರದ ಕೆಲ ಭಾಗಗಳಲ್ಲಿ ಕಠಿಣ ಕ್ರಮವನ್ನ ಸರ್ಕಾರ ತೆಗೆದುಕೊಂಡಿದೆ. ಜನರಿಗೆ ಅನುಕೂಲವಾಗುವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ. ಒಂದು ವೇಳೆ ಈ ಕೊರೊನಾ ಸೋಂಕು ಕಡಿಮೆಯಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಮಗೆ ಜನರ ಆರೋಗ್ಯ ಮತ್ತು ಜೀವ ಮುಖ್ಯ. ಹೀಗಾಗಿ ಮುಂದೆ ಕಠಿಣ ಕ್ರಮತೆಗೆದುಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಈಗ ತಜ್ಞರ ವರದಿ ಬರಬೇಕಿದೆ ಎಂದು ಆರ್.ಅಶೋಕ್ ಹೇಳಿದರು.

ಈಗಾಗಲೇ ಪೊಲೀಸ್ ಇಲಾಖೆಗೂ ಆದೇಶ ನೀಡಲಾಗಿದೆ. ಕ್ವಾರಂಟೈನ್ ಆದ ವ್ಯಕ್ತಿಗಳು ಮೊಬೈಲ್ ಮನೆಯಲ್ಲೇ ಬಿಟ್ಟು ಓಡಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ರೋಗಿಯನ್ನ ನಡು ರಸ್ತೆಯಲ್ಲಿ ನಿಲ್ಲಿಸಿ ಬೆಡ್ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಬೆಡ್ ಇಲ್ಲ ಅಂತ ಹೇಳುವ ಸಮಸ್ಯೆ ಬರಬಾರದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಬೆಂಗಳೂರಲ್ಲಿ 2 ಸಾವಿರ ಬೆಡ್ ಇವೆ. ಸರ್ಕಾರದಿಂದ ರೆಫರ್ ಆಗಿ ಹೋಗುವ ರೋಗಿಗಳಿಗೆ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಗದಿತ ದರದೊಂದಿಗೆ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದೇವೆ ಎಂದರು.

ತಾಜಾ ಸುದ್ದಿಗಳು