ಚೂಡಾಮಣಿ ಸೂರ್ಯಗ್ರಹಣ ಅಂತ್ಯ

ಚೂಡಾಮಣಿ ಸೂರ್ಯಗ್ರಹಣ ಅಂತ್ಯ

ಬೆಂಗಳೂರು: 3 ಗಂಟೆ 26 ನಿಮಿಷಗಳ ಸುದೀರ್ಘ ಚೂಡಾಮಣಿ ಸೂರ್ಯಗ್ರಹಣ ಅಂತ್ಯವಾಗಿದೆ.

ವರ್ಷದ ಮೊದಲ ಹಾಗೂ ದೀರ್ಘ ಸೂರ್ಯಗ್ರಹಣವು ರಾಜ್ಯದ ಹಲವೆಡೆ ಗೋಚರವಾಗಿದೆ. ಬೆಳಗ್ಗೆ 10:05ಕ್ಕೆ ಆರಂಭವಾಗಿ 1:31 ನಿಮಿಷ ಗೋಚರಿಸಿದೆ. ಸುದೀರ್ಘ ಚೂಡಾಮಣಿ ಸೂರ್ಯಗ್ರಹಣವನ್ನು ಲಕ್ಷಾಂತರ ಜನರು ವೀಕ್ಷಿಸಿದರು.

ಸೂರ್ಯಗ್ರಹಣ ಮೋಕ್ಷವಾದ ಬಲಿಕ ರಾಜ್ಯದ ವಿವಿಧ ದೇವಸ್ಥಾನಗಳ ಶುಚಿತ್ವ ಕಾರ್ಯ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಗ್ರಹಣ ಮೋಕ್ಷದ ಬಳಿಕ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ.


ಕಳೆದ ಡಿಸೆಂಬರ್ 26 ಕಂಕಣ ಸೂರ್ಯಗ್ರಹಣ ಹಾಗೂ ಇಂದಿನ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹದ್ದಾಗಿವೆ. ಹತ್ತು ವರ್ಷಗಳಲ್ಲಿ ಒಂದು ಬಾರಿ ಪಾಶ್ರ್ವ ಸೂರ್ಯಗ್ರಹಣ ಸಂಭವಿಸಿದರೆ, ಈ ಕಂಕಣ ಸೂರ್ಯಗ್ರಹಣವು 2064ಕ್ಕೆ ಕಾಣಿಸಿಕೊಳ್ಳುತ್ತದೆ ಎಂದು ಭೌತ ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಳು