ಮನೆಯಿಂದ ಹೊರ ಬಂದ ಚಂದನ್ ಆಚಾರ್

ಮನೆಯಿಂದ ಹೊರ ಬಂದ ಚಂದನ್ ಆಚಾರ್

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಕಿಶನ್ ಎಲಿಮಿನೇಟ್ ಆದ ಬೆನ್ನಲ್ಲೇ ಚಂದನ್ ಮನೆಯಿಂದ ಹೊರ ಬಂದಿದ್ದಾರೆ. ಈ ಹಿಂದೆಯೇ ಕಿಚ್ಚ ಸುದೀಪ್ ಡಬಲ್ ಎಲಿಮಿನೇಶನ್ ನಡೆಯಲಿದೆ ಎಂದು ಹೇಳಿದ್ದರು. ಹಾಗೆಯೇ ಈ ಶನಿವಾರ ಕಿಶನ್ ಮನೆಯಿಂದ ಹೋದ ಮರುದಿನವೇ ಚಂದನ್ ಎಲಿಮಿನೇಟ್ ಆಗಿದ್ದಾರೆ.

ಭಾನುವಾರ ಚಂದನ್ ಆಚಾರ್ ಮನೆಯಿಂದ ಹೊಸ ಹೋಗುವ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಚಂದನ್ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಮುಖ್ಯದ್ವಾರದ ಬಳಿ ಸ್ಪರ್ಧಿಗಳ ಜೊತೆ ಸೆಲ್ಫಿ ತೆಗೆದುಕೊಂಡರು. ಬಳಿಕ ಮತ್ತೆ ಮನೆಯ ಬಾಗಿಲ ಬಳಿ ಓಡಿ ಹೋಗಿ ನೆಲ ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಚಂದನ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚಂದನ್ ಮನೆಯಿಂದ ಹೊರ ಬರುವಾಗ ಪ್ರಿಯಾಂಕ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ವೇದಿಕೆಗೆ ಬಂದ ಚಂದನ್, ಸುದೀಪ್ ಅವರ ಮುಂದೆ ನಾನು ಸೋತಿರಬಹುದು. ಆದರೆ ನಾನು ಸತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಹೇಗೆ ಬದುಕಿದ್ದೇನೋ ಅದೇ ರೀತಿ ಹೊರಗಿನ ಬದುಕಿನಲ್ಲಿ ಬದುಕಿದ್ದರೆ ನಾವೇ ರಾಜರಾಗಿರುತ್ತಿದ್ವಿ. ನಾವು ನಾವಾಗಿ ಇರುವುದಕ್ಕೆ ಬಿಗ್ ಬಾಸ್ ತುಂಬಾ ಪಾಠಗಳನ್ನು ಹೇಳಿಕೊಡುತ್ತಿತ್ತು. ಬಿಗ್ ಬಾಸ್ ನಮ್ಮನ್ನು ತಾಯಿಯಂತೆನೋಡಿಕೊಳ್ಳುತ್ತಿತ್ತು. ಮೂರು ಹೊತ್ತು ಊಟ ಕೊಡುತ್ತಿತ್ತು. ಈಗಿನ ಕಾಲದಲ್ಲಿ ನಮಗೆ ಮೂರು ಹೊತ್ತು ಊಟ ಯಾರು ಹಾಕುತ್ತಾರೆ. ಆದರೆ ಬಿಗ್ ಬಾಸ್ ನಮಗೆ ಮೂರು ಹೊತ್ತು ಊಟ ನೀಡಿದೆ.

ನಾನು ಎಲ್ಲರಿಗೂ ಪ್ರೀತಿ ನೀಡಿದ್ದೇನೆ. ನಾನು ಖಾರವಾಗಿ ಮಾತನಾಡಿರಬಹುದು. ಆದರೆ ನಾನು ಇರುವುದೇ ಹೀಗೆ. ಅದು ಕೆಲವರಿಗೆ ಇಷ್ಟವಾಗುತ್ತೆ, ಕೆಲವರಿಗೆ ಇಷ್ಟವಾಗಲ್ಲ ಎಂದರು. ಇದೇ ವೇಳೆ ತಮ್ಮ ತಂದೆ-ತಾಯಿ ಬಳಿ ಮಾತನಾಡಿದ ಚಂದನ್, ನಾನು 10 ಕಿ.ಮೀ ಸೈಕಲ್‍ನಲ್ಲಿ ನಟನಾ ಶಾಲೆಗೆ ಹೋಗುವಾಗ ಇದೆಲ್ಲಾ ಯಾಕೆ ಬೇಕು ನಿನಗೆ ಎಂದು ತಲೆ ಕೆಡಿಸಿಕೊಂಡಿದ್ರಿ. ಈಗ ನನ್ನ ಜರ್ನಿ ಶುರುವಾಗಿದ್ದು, ನನಗೆ ಸುದೀಪ್ ಅವರ ಸಪೋರ್ಟ್ ಇದೆ. ನೀವು ಈಗ ಏನೂ ಮಾತನಾಡುವುದಕ್ಕೆ ಆಗಲ್ಲ. ನನ್ನ ಜರ್ನಿ ಈಗ ಶುರುವಾಗಿದ್ದು, ಇದಕ್ಕೆ ಕಿರೀಟವೊಂದು ಸಿಕ್ಕಿದೆ ಎಂದು ಚಂದನ್ ಹೇಳಿದ್ದಾರೆ.

ತಾಜಾ ಸುದ್ದಿಗಳು