*ಕ್ರೇಜಿ ಸ್ಟಾರ್ ಗೆ ಗೌರವ ಡಾಕ್ಟರೇಟ್

*ಕ್ರೇಜಿ ಸ್ಟಾರ್ ಗೆ ಗೌರವ ಡಾಕ್ಟರೇಟ್

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕಿರೀಟ*

ಕನ್ನಡದ ಹಿರಿಯ ನಟ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಸಿ.ಎಮ್.ಆರ್. ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಲೀಲಾವತಿ, ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಈ ಡಾಕ್ಟರೇಟ್ ಗೌರವ ಲಭಿಸುತ್ತಿದೆ.
ಈ ನವೆಂಬರ್ 3 ರಂದು ರವಿಚಂದ್ರನ್ ಅವರಿಗೆ ಸಿ.ಎಮ್.ಆರ್. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.
ವೀರಸ್ವಾಮಿ ಅವರ ಪುತ್ರ ರವಿಚಂದ್ರನ್ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗೀತಾರಚನೆಗಾರ, ಸಂಗೀತ ನಿರ್ದೇಶಕ, ಸಂಭಾಷಣೆಕಾರನಾಗಿ ರವಿಚಂದ್ರನ್ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕ್ರೇಜಿಸ್ಟಾರ್ ಪ್ರೇಮಲೋಕದಂತಹ ಅದ್ಬುತ ಚಿತ್ರವನ್ನು ಕೂಡ ನಿರ್ದೇಶಿಸಿದ್ದರು. ಈ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸುತ್ತಿರುವುದಕ್ಕೆ ಕ್ರೇಜಿಸ್ಟಾರ್ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ.

– ಪ್ರೀತಮ್ ಹೆಬ್ಬಾರ್.

ತಾಜಾ ಸುದ್ದಿಗಳು