“ನನ್ನ ದೇಶ ಆದಷ್ಟು ಬೇಗ ಸ್ವತಂತ್ರ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ವೀರ ಸಾವರ್ಕರ್ ಅವರಿಗೆ ಬ್ರಿಟಿಷರ ಕಾಲಾಪಾನಿ ಶಿಕ್ಷೆಗಿಂತಲೂ ಹೆಚ್ಚು ಮನನೋಯಿಸಿದ್ದು ಗಾಂಧಿ ಹತ್ಯೆಯಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸಿದ್ದು”

“ನನ್ನ ದೇಶ ಆದಷ್ಟು ಬೇಗ ಸ್ವತಂತ್ರ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ವೀರ ಸಾವರ್ಕರ್ ಅವರಿಗೆ ಬ್ರಿಟಿಷರ ಕಾಲಾಪಾನಿ ಶಿಕ್ಷೆಗಿಂತಲೂ ಹೆಚ್ಚು ಮನನೋಯಿಸಿದ್ದು ಗಾಂಧಿ ಹತ್ಯೆಯಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸಿದ್ದು”

ಸಾವರ್ಕರ್ ಎಂಬ ಅಪ್ರತಿಮ ದೇಶಭಕ್ತ……….

ವಿನಾಯಕ್ ದಾಮೋದರ್ ಸಾವರ್ಕರ್ ಎಂದೊಡನೆ ನಮಗೆ ನೆನಪಿಗೆ ಬರುವುದು ಅವರ ಈ ದೇಶಭಕ್ತಿ ಸಂದೇಶ “”ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು” ಈ ಒಂದು ಮಾತಿನಿಂದಲೇ ನಮಗೆ ತಿಳಿಯುತ್ತದೆ ಸಾವರ್ಕರ್ ಅವರ ದೇಶಭಕ್ತಿ ಎಷ್ಟಿತ್ತು ಎಂದು.
ಸಾವರ್ಕರ್ ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು, ತದನಂತರ ಅವರ ತಿಲಕ್ ಸ್ವರಾಜ್ಯ ಪಕ್ಷದಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ಸಾವರ್ಕರ್ ಅವರ ಅನುಯಾಯಿ ಮದನಲಾಲ್ ಧಿಂಗ್ರಾ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾಗು ತ್ತಾನೆ. ಆ ಆರೋಪವನ್ನು ಸಾವರ್ಕರ್ ಮೇಲೆ ಹೊರಿಸಿ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರನ್ನು ಬಂಧಿಸಿ ಸೆರೆಮನೆಗೆ ದೂಡಿದರು.

ಭೂ ಲೋಕದ ಯಮಯಾತನೆ ಕಾಲಾಪಾನಿ ಶಿಕ್ಷೆ : 1911 ಜುಲೈ 4ರಂದು ವೀರ ಸಾವರ್ಕರ್ ಅವರನ್ನು ಅಂಡಮಾನ್ ಜೈಲ್ ಗೆ ಅಟ್ಟಲಾಯಿತು ಅವರಿಗೆ ನೀಡಿದಂಥಹ ಘೋರಶಿಕ್ಷೆ 50 ವರ್ಷಗಳ 2 ಜೀವವಾದಿ ಶಿಕ್ಷೆ. ಕಾಲಾಪಾನಿ ಎಂಬ ನರಕ ಯಾತನೆಗೆ ಗುರಿಯಾದವರು ಹಿಂತಿರುಗಿ ಬಂದಿದ್ದು ಬಹಳ ಕಡಿಮೆ ಆ ನರಕಯಾತನೆ ಶಿಕ್ಷೆ ಇದ್ದಿದ್ದು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ವಾಸ್ತವವಾಗಿ ಆ ಜೈಲಿಗೆ ಕಾಲಾಪಾನಿ ಎಂಬ ಹೆಸರು ಕೂಡ ಇತ್ತು. ಸುಮಾರು 222 ಕೋಣೆಗಳಿದ್ದ ಆ ಜೈಲಿನಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಭಂದಿಯಾಗಿದ್ದರು .ಕಾಲು ಚಾಚಿ ಮಲುಗುವುದಕ್ಕೂ ಆಗದ, ತಲೆ ಎತ್ತಿ ಕುಳಿತುಕೊಳ್ಳಲೂ ಆಗದಷ್ಟು ಚಿಕ್ಕದಾದ ಕೋಣೆಗಳು. ಅತೀ ಚಿಕ್ಕದಾಗಿ ಬೆಳಕು ಬೀರುವ ಕಿಟಕಿಗಳು .ಅಕ್ಕಪಕ್ಕದವರೊಡನೆ ಮಾತನಾಡುವುದು ಕೂಡ ನಿಷಿದ್ಧವಾಗಿತ್ತು . ಅಧಿಕಾರಿಗಳ ಮನೋಯಿಚ್ಛೆಯಂತೆ ಕೊಡುವ ಏಟುಗಳು, ಕಾದ ಮರಳಿನಲ್ಲಿ ಬಟ್ಟೆ ಇಲ್ಲದೆ ಉರುಳಾಡಬೇಕಾದಂಥ ಶಿಕ್ಷೆ ಕೂಡ ಇತ್ತು. ಇದರ ಜೊತೆಗೆ ಕೈಕಾಲುಗಳನ್ನು ಕಟ್ಟಿ ನಳಿಕೆಯ ಮೂಲಕ ಶ್ವಾಸಕೋಶಗಳಿಗೆ ಬಿಸಿ ಹಾಲನ್ನು ಹುಯ್ಯು ವಂತಹ ಕಠಿಣ ಶಿಕ್ಷೆಯನ್ನು ಕೂಡ ಸಾವರ್ಕರ್ ಅನುಭವಿಸಿದರು.ಊಟದ ವಿಷಯಕ್ಕೆ ಬಂದರೆ ಅರೆ ಬೆಂದ ರೊಟ್ಟಿಗಳು ಹಾವು-ಹಲ್ಲಿ-ಚೇಳುಗಳನ್ನೂ ಒಳಗೊಂಡಿರುವ ಸೊಪ್ಪಿನ ಸಾರು,ಗೆದ್ದಲು ಹುಳುಗಳನ್ನೂ ಬೆರೆಸಿದ ಊಟವನ್ನು ನೀಡುತಿದ್ದರು. 1913ರಲ್ಲಿ ಮಹಾತ್ಮ ಗಾಂಧಿ ಸಾವರ್ಕರ್ ಅವರನ್ನು ಭೇಟಿ ಮಾಡಲು ಬಂದಾಗ ಇಲ್ಲಿನ ಬಂಧಿಗಳಿಗೆ ಅಕ್ಷರ ಕಲಿಸಿಕೊಡಲು ಅನುವು ಮಾಡಿಸಿಕೊಡಿ ಎಂದು ಬೇಡಿಕೆಯನ್ನು ಇಟ್ಟಿದ್ದರು. ಆ ಪ್ರಯತ್ನದಿಂದಾಗಿ ಜೈಲಿನಲ್ಲಿರುವವರಿಗೆ ಅಕ್ಷರ ಜ್ಞಾನವನ್ನು ಸಾವರ್ಕರ್ ಉಣಬಡಿಸಿದರು. ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿರುವಾಗಲೇ ಕಾಲಾಪಾನಿ ಎಂಬ ಕೃತಿಯನ್ನು ಬರೆದರು. ವಿಶೇಷವೆಂದರೆ ಈ ಕೃತಿಯು 17 ಭಾಷೆಗೆ ಭಾಷಾಂತರ ಕೂಡ ಗೊಂಡಿತ್ತು. ಇದರ ಜೊತೆಗೆ ಟ್ರಾನ್ಸ್ಪೋರ್ಟಷನ್ ಆಫ್ ಮೈ ಲೈಫ್ ಎಂಬ ಕೃತಿಯನ್ನು ಕೂಡ ಜೈಲಿನಲ್ಲಿ ರಚಿಸಿದ್ದರು. ಹಲವು ಕ್ರಾಂತಿಕಾರಿಗಳ ಉಗ್ರ ಹೋರಾಟದ ಫಲವಾಗಿ ಸಾವರ್ಕರ್ ಅವರಿಗೆ 1924 ರಂದು ಕಾಲಾಪಾನಿ ಶಿಕ್ಷೆ ಇಂದ ಮುಕ್ತಿ ಸಿಕ್ಕಿತು.
ಬಿಡುಗಡೆಯಾದ ನಂತರ ಸಾವರ್ಕರ್ ಅಜ್ಞಾತವಾಸದಲ್ಲಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ಅಜಾದ್ , ರಾಜ್ ಗುರು ಸುಖ್ ದೇವ್ ಅವರಿಗೆ ಸಾವರ್ಕರ್ ಮಾರ್ಗದರ್ಶನ ನೀಡುತ್ತಾರೆ.1930 ಕ್ಕೆ ಸಾರ್ವಕರ್ ಹಿಂದೂ ಮಹಾಸಭಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿ ರಾಜಕೀಯ ಹೋರಾಟವನ್ನು ಕೂಡ ಆರಂಭಿಸಿದರು. ತದನಂತರದಲ್ಲಿ ಭಗತ್ ಸಿಂಗ್ ಅವರನ್ನು ನೇಣಿಗೆ ಏರಿಸದಂತೆ ಕೂಡ ಉಗ್ರ ಹೋರಾಟ ಮಾಡಿದ್ದರು. ಆ ಸಮಯದಲ್ಲೇ ಯುವಕರಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಸೇನೆಗೆ ಸೇರಿ ಎಂದು ಕರೆ ಕೂಡ ಕೊಟ್ಟಿದ್ದರು.
ಹಿಂದೂ ಮಹಾಸಭೆಯ ಮೂಲಕ ಅಸ್ಪೃಶ್ಯತೆ ಮತ್ತು ಜಾತಿ ಪದ್ದತಿಗಳನ್ನು ನಿರ್ಮೂಲನಗೆ ಸಾಕಷ್ಟು ಶ್ರಮ ವಹಿಸಿದ್ದರು ಹಿಂದೂ ಹಬ್ಬಗಳ ಆಚರಣೆಯ ಸಂಧರ್ಭಗಳಲ್ಲಿ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಸಾವರ್ಕರ್ ಮುಸ್ಲಿಮರ ಹಾಗೂ ಕ್ರೈಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ , ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಪಟ್ಟಿದ್ದರು ಮತ್ತು ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾದ ಆ ಕಾಲದಲ್ಲಿ ,ಅವರ ಪ್ರವೇಶಕ್ಕಾಗಿಯೇ ಪತಿತ ಪಾವನ ಮಂದಿರವನ್ನು ಕೂಡ ನಿರ್ಮಿಸಿದ್ದರು.
ಇಂಥಹ ಒಬ್ಬ ದೇಶಪ್ರೇಮಿಯನ್ನು ಗಾಂಧಿ ಹತ್ಯೆಯಲ್ಲಿ ಇವರ ಪಾತ್ರವೂ ಇದೆ ಎಂದು ಕೆಲವು ನಕಲಿ ದೇಶಪ್ರೇಮಿಗಳು ಅವರಿಗೆ ಕಲ್ಲಿನಿಂದ ಹಲ್ಲೆ ಮಾಡಿ ಹಾಗೂ ಅವರ ಸಹೋದರರನ್ನು ಸಾಯಿಸಿದರು. ಗಾಂಧಿ ಹತ್ಯೆಯಲ್ಲಿ ಇವರ ಪಾತ್ರವೂ ಇದೆ ಎಂದು ದೇಶಪ್ರೇಮಿ ಸಾವರ್ಕರ್ ಅವರನ್ನು ಜೈಲಿಗಟ್ಟಲಾಯಿತು. ಇದರಿಂದ ಮನನೊಂದ ವೀರ ಸಾವರ್ಕರ್ ಸತತ 25 ದಿನಗಳ ಕಾಲ ಉಪವಾಸ ಮಾಡಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದರು.
ಇಂತಹ ಒಬ್ಬ ದೇಶಪ್ರೇಮಿ ವೀರನಿಗೆ ಭಾರತ ರತ್ನ ಕೊಡದೆ ಇದ್ದರೆ ಆ ಪ್ರಶಸ್ತಿಗಿರುವ ಮೌಲ್ಯ ಕಡಿಮೆ ಆಗಬಹುದೇನೋ ಹೊರತು ವೀರನಿಗಿದ್ದ ಮೌಲ್ಯ ಎಂದಿಗೂ ಕಡಿಮೆ ಆಗುವುದಿಲ್ಲ. ಜೈ ಹಿಂದ್…….

– ಪ್ರಿತಮ್ ಹೆಬ್ಬಾರ್.

ತಾಜಾ ಸುದ್ದಿಗಳು