ಎದೆಗೆ ದಾರಿ ತೋರಿಸುವ ಜಿಪಿಎಸ್

ಎದೆಗೆ ದಾರಿ ತೋರಿಸುವ ಜಿಪಿಎಸ್

‘ಎದೆಗೆ ಎದೆಯ ದಾರಿ ತೋರಿಸುವ ಜಿಪಿಎಸ್’ ಕನ್ನಡದ ದಿ ಬೆಸ್ಟ್ ಕಿರುಚಿತ್ರ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಪ್ಪತ್ತೇ ನಿಮಿಷದಲ್ಲಿ ಡಿಜಿಟಲೈಜ್ಡ್ ಬದುಕಿನ ಸವಾಲನ್ನು, ಭಾವನಾತ್ಮಕ ಹೋರಾಟವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ರಘುನಂದನ್ ಕಾನಡ್ಕ ಮತ್ತು ಟೀಂ.

ಪ್ರತಿಭಾವಂತ ನಟ ಗೋಪಾಲಕೃಷ್ಣ ದೇಶಪಾಂಡೆ ಪಾತ್ರ ಚಿತ್ರದುದ್ದಕ್ಕೂ ನೋಡುಗನಿಗೆ ಕನೆಕ್ಟ್ ಆಗುವಂತಿದೆ. ಕ್ಯಾಬ್ ಡ್ರೈವರ್ ಆಗಿ, ಗಂಡನಾಗಿ, ಅಪ್ಪನಾಗಿ ಅವರ ತೊಳಲಾಟಗಳು ಗಾಢವಾಗಿ ಕಾಡುತ್ತವೆ. ಪಾತ್ರದ ಮುಖಾಂತರ ಗೋಪಾಲಕೃಷ್ಣ ನಮ್ಮೆಲ್ಲರ ಅಂತಃಪ್ರಜ್ಞೆಯೇ ಅನ್ನಿಸುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ಫುಲ್ ಮಾರ್ಕ್ಸ್.
ಇತ್ತೀಚೆಗೆ ಕನ್ನಡದ ಪ್ರಯೋಗಾತ್ಮಕ ಚಿತ್ರಗಳು ಕಮರ್ಷಿಯಲ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತ ಸ್ಟೋರಿಲೈನ್, ಮೇಕಿಂಗ್ ನಿಂದಾಗಿ ಗಮನ ಸೆಳೆಯುತ್ತಿವೆ. ಜಿಪಿಎಸ್ ಈ ಸಾಲಿನದೇ ಚಿತ್ರ. ಇಂದು ಸಂಜೆ 5.30ರಿಂದ ಚಿತ್ರದ ಪ್ರೀಮಿಯರ್ ಶೋ ಮತ್ತು ಸಂವಾದವನ್ನು ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಆಯೋಜಿಸಲಾಗಿದೆ. ಟಿಕೇಟ್ ಗಳಿಗಾಗಿ flaunge.in ಸಂಪರ್ಕಿಸಿ.

ತಾಜಾ ಸುದ್ದಿಗಳು