ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್

ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್

ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ.

ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ ಕೂಡ ಆಗಿದ್ದಾರೆ. ಅಲ್ಲದೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಆರಂಭಿಕ ಕೆಲವು ವರ್ಷಗಳು ಎಷ್ಟು ಮುಖ್ಯ ಎಂಬುದು ಸನ್ನಿ ಲಿಯೋನ್ ತಿಳಿದುಕೊಂಡಿದ್ದಾರೆ.

ಈ ಶಾಲೆಗಾಗಿ ಸನ್ನಿ ಲಿಯೋನ್ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಶಾಲೆಗಾಗಿ ಸಾಕಷ್ಟು ಕಠಿಣ ಶ್ರಮವನ್ನು ವಹಿಸಿದ್ದಾರೆ. ಸನ್ನಿ ಸ್ವತಃ ಕುಳಿತು ಶಾಲೆಯ ಫಿಚರ್ಸ್, ಇಂಟಿರಿಯರ್ಸ್ ಹಾಗೂ ವಿವಿಧ ಸೌಲಭ್ಯಗಳ ಬಗ್ಗೆ ಕೆಲಸ ಮಾಡಿದ್ದಾರೆ.

ಸನ್ನಿ ಲಿಯೋನ್ ಹಾಗೂ ಅವರ ಪತಿಗೆ ಈ ಸ್ಕೂಲ್ ಒಂದು ಕನಸಾಗಿದ್ದು, ಈ ಸ್ಕೂಲ್ ಕೇವಲ ಆರ್ಟ್ ಸ್ಕೂಲ್ ಅಲ್ಲದೆ ಪ್ಲೇ ಸ್ಕೂಲ್ ಆಗಿಯೂ ಇರುತ್ತದೆ. ಈ ಶಾಲೆಯಲ್ಲಿ ಮಕ್ಕಳಿಗೆ ಆರ್ಟ್ ಹಾಗೂ ಫ್ಯೂಶನ್ ಕಲಿಯಬಹುದು.

ತಾಜಾ ಸುದ್ದಿಗಳು