ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಬಿರಿಯಾನಿ ತಿಂತೀರಾ! ಐ ಲವ್ ಯೂ ಚಿತ್ರತಂಡ ವಿರುದ್ಧ ಹುಚ್ಚ ವೆಂಕಟ್ ಗರಂ, ವಿಡಿಯೋ!

ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಬಿರಿಯಾನಿ ತಿಂತೀರಾ! ಐ ಲವ್ ಯೂ ಚಿತ್ರತಂಡ ವಿರುದ್ಧ ಹುಚ್ಚ ವೆಂಕಟ್ ಗರಂ, ವಿಡಿಯೋ!

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಂ ಅಭಿನಯದ ಐ ಲವ್ ಯೂ ಚಿತ್ರದ ಹಾಟ್ ವಿಡಿಯೋ ಸಾಂಗ್ ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿ ಹೆಣ್ಣನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ನಟ ಹುಚ್ಚ ವೆಂಕಟ್ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ.
ಉಪೇಂದ್ರ ಮತ್ತು ರಚಿತಾ ರಾಂ ನಡುವೆ ರೋಮ್ಯಾಂಟಿಕ್ ಸಾಂಗ್ ಶೂಟ್ ಮಾಡಿದ್ದು ಈ ಹಾಡಿನ ಹಸಿಬಿಸಿ ದೃಶ್ಯಗಳ ಕುರಿತು ಗರಂ ಆಗಿರುವ ಹುಚ್ಚ ವೆಂಕಟ್ ಚಿತ್ರದ ನಿರ್ದೇಶಕ ಆರ್ ಚಂದ್ರು ವಿರುದ್ಧ ಕಿಡಿಕಾರಿದ್ದಾರೆ.

ಹೆಣ್ಣನ್ನು ಅಶ್ಲೀಲವಾಗಿ ತೋರಿಸಿ ಅದರಿಂದ ಬರುವ ದುಡ್ಡಿನಲ್ಲಿ ನಿಮ್ಮ ಕುಟುಂಬದವರಿಗೆ ಬಿರಿಯಾನಿ ತಿನ್ನಿಸುತ್ತೀರಾ? ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಜೋಪಾನವಾಗಿಟ್ಟುಕೊಂಡಿರುತ್ತೀರಾ. ಆದರೆ ಬೇರೆಯವರ ಮನೆಯ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ತೋರಿಸುತ್ತೀರಾ ಎಂದು ಹರಿಹಾಯ್ದಿದ್ದಾರೆ.
ಇನ್ನು ಕಳೆದ ವಾರ ಚಿತ್ರ ಬಿಡುಗಡೆಯಾಗಿದ್ದು ಉತ್ತಮ ಆರಂಭ ಪಡೆದುಕೊಂಡಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಳು