ಬಾಲಿವುಡ್‌ ಬಿಗ್‌ ಬಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌; ಪಾಕ್‌ ಪ್ರಧಾನಿ ಫೋಟೊ ಜತೆಗೆ ಬಯೋಡೇಟಾ ಬದಲಾವಣೆ

ಬಾಲಿವುಡ್‌ ಬಿಗ್‌ ಬಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌; ಪಾಕ್‌ ಪ್ರಧಾನಿ ಫೋಟೊ ಜತೆಗೆ ಬಯೋಡೇಟಾ ಬದಲಾವಣೆ

ನವದೆಹಲಿ: ಬಾಲಿವುಡ್ ಹಿರಿಯ ನಟ ಅಮಿತಾಬ್‌ ಬಚ್ಚನ್ ಟ್ವಿಟರ್ ಖಾತೆ ಸೋಮವಾರ ಹ್ಯಾಕ್ ಆಗಿದ್ದು, ಇದೀಗ ಸರಿಹೋಗಿದೆ. ಹ್ಯಾಕರ್ಸ್‌ಗಳು ಅಮಿತಾಬ್‌ ಅವರ ಪ್ರೊಫೈಲ್ ಫೋಟೊ ಬದಲಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೊವನ್ನು ಹಾಕಿ ಆತಂಕ ಸೃಷ್ಟಿಸಿದ್ದರು. ಇದಲ್ಲದೆ ಬಯೋಡೇಟಾವನ್ನು ಬದಲಾಯಿಸಲಾಗಿತ್ತು.

ಹಲವು ವಿಭಿನ್ನ ಟ್ವೀಟ್‌ಗಳನ್ನು ಪೋಸ್ಟ್‌ ಮಾಡಿದ್ದು, ಪಾಕಿಸ್ತಾನದ ಪ್ರಧಾನಿ ಫೋಟೊದೊಂದಿಗೆ ಟ್ಯಾಗ್‌ ಮಾಡಿ ಲವ್‌ ಪಾಕಿಸ್ತಾನ್‌ ಎಂದು ಬರೆಯಲಾಗಿತ್ತು. ಟ್ವೀಟ್‌ನಲ್ಲಿ ಪಾಕಿಸ್ತಾನ ಮತ್ತು ಟರ್ಕಿ ಧ್ವಜಗಳ ಎಮೋಜಿಗಳನ್ನು ಸೇರಿಸಲಾಗಿತ್ತು. ಬಯೋಡೇಟಾವನ್ನು ಬದಲಾಯಿಸಿ ಲವ್‌ ಪಾಕಿಸ್ತಾನ ಎಂದೇ ಬರೆದಿದ್ದರು.

ಆದರೆ ಯಾರು ಅಮಿತಾಭ್ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂಬುದನ್ನು ಇನ್ನೂ ಪತ್ತೆಯಾಗಿಲ್ಲ. ಆದರೆ ಇದರ ಹಿಂದೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಟರ್ಕಿಶ್‌ ಗುಂಪುಗಳಿಂದ ಹ್ಯಾಕ್‌ ಆಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಮತ್ತೊಂದು ಟ್ವೀಟ್‌ನಲ್ಲಿ ಟರ್ಕಿಶ್ ಫುಟ್ಬಾಲ್ ಆಟಗಾರರೆಡೆಗಿನ ಐಸ್ಲ್ಯಾಂಡ್ ಗಣರಾಜ್ಯದ ವರ್ತನೆಗಳನ್ನು ಖಂಡಿಸಲಾಗಿದೆ. ನಾವು ಮೃದುವಾಗಿ ಮಾತನಾಡುತ್ತೇವೆ ಆದರೆ ದೊಡ್ಡ ಕಡ್ಡಿಯನ್ನು ಸಾಗಿಸುತ್ತೇವೆ ಮತ್ತು ದೊಡ್ಡ ಸೈಬರ್ ದಾಳಿಯ ಬಗ್ಗೆ ಇಲ್ಲಿ ತಿಳಿಸುತ್ತೇವೆ. ಅಯ್ಯಿಲ್ದಿಜ್ ತಂಡ ಟರ್ಕಿಶ್‌ ಸೈಬರ್‌ ಆರ್ಮಿ ಎಂದು ಮಾರ್ಮಿಕವಾಗಿ ಬರೆಯಲಾಗಿದೆ.

ಮತ್ತೊಂದು ಇನ್‌ಸ್ಟಾಗ್ರಾಂ ಪೇಜ್‌ಗೆ ಲಿಂಕ್‌ ಮಾಡುವ ಪೋಸ್ಟ್‌ ಶೇರ್ ಮಾಡಿಕೊಂಡಿದ್ದು, ನಿಮ್ಮ ಬೆಂಬಲಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

ಇದಕ್ಕೂ ಮುನ್ನ ಇದೇ ತಂಡ ಶಾಹಿದ್‌ ಕಪೂರ್‌ ಮತ್ತು ಅನುಪಮ್‌ ಖೇರ್‌ ಅವರ ಟ್ವಿಟರ್‌ ಖಾತೆಗಳನ್ನು ಕೂಡ ಹ್ಯಾಕ್‌ ಮಾಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸದಾ ಕ್ರೀಯಾಶೀಲರಾಗಿರುವ ಅಮಿತಾಭ್ ಬಚ್ಚನ್ ಅವರು ಸುಮಾರು 37 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಳು