ಸರ್ವರೋಗಕ್ಕು ಮದ್ದಾಯ್ತು ಕತ್ತೆಯ ಹಾಲು!

ಸರ್ವರೋಗಕ್ಕು ಮದ್ದಾಯ್ತು ಕತ್ತೆಯ ಹಾಲು!

ಕತ್ತೆಯ ಫೊಟೋ ನೋಡಿದಾಗಲೆಲ್ಲ ನನ್ನನ್ನು ನೋಡು ಯೋಗ ಬರುತ್ತದೆ ಎಂಬ ವಾಕ್ಯ ನೆನಪಾಗುತ್ತದೆ. ಇದು ಯೋಗದ ವಿಚಾರಕ್ಕೆ ಮಾತ್ರವಲ್ಲ, ಆರೋಗ್ಯದ ವಿಚಾರದಲ್ಲೂ ಈಗ ಕತ್ತೆಯ ಹಾಲಿಗೆ ಸಕತ್ ಡಿಮ್ಯಾಂಡ್‍ ಶುರುವಾಗಿದೆ.
ಸರ್ವರೋಗಕ್ಕೂ ಕತ್ತೆ ಹಾಲು ರಾಮಬಾಣವೆಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ನಗರದ ಹವಂ ಬಾವಿಷಯ ಗುಡ್ಡಗಾಡು ಪ್ರದೇಶದಲ್ಲಿ ಮಹಾರಾಷ್ಟ್ರ ಮೂಲದವರಿಂದ ಕತ್ತೆ ಹಾಲು ಮಾರಾಟ ನಡೆಯಿತು.

ಕತ್ತೆಗಳ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂಬ ನಂಬಿಕೆಯಿಂದ ಹತ್ತಾರು ನಿವಾಸಿಗಳು ಕತ್ತೆ ಹಾಲು ಖರೀದಿಸಿದರು. ಅಲ್ಲದೇ ಅಸ್ತಮಾ, ಕೆಮ್ಮು. ಮೈ ಕೈ ನೋವು ಹಾಗೂ ಇನ್ನಿತರ ಕಾಯಿಲೆಗಳಿಗೆ ಕತ್ತೆ ಹಾಲು ರಾಮಬಾಣವೆಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಾ ಮುಂದು ತಾ ಮುಂದು ಎಂದು ಕತ್ತೆ ಹಾಲು ಖರೀದಿಸಿದರು.

ತಾಜಾ ಸುದ್ದಿಗಳು