ಅಮಾವಾಸ್ಯೆ ದಿನವೂ ಕಲಾಪ! ರೇವಣ್ಣ ಲೆಕ್ಕಾಚಾರ ತಲೆ ಕೆಳಗೆ ಮಾಡಿದ BJP

ಅಮಾವಾಸ್ಯೆ ದಿನವೂ ಕಲಾಪ! ರೇವಣ್ಣ ಲೆಕ್ಕಾಚಾರ ತಲೆ ಕೆಳಗೆ ಮಾಡಿದ BJP

ಬೆಂಗಳೂರು: ವಿಧಾನಸಭೆಯ ಮಳೆಗಾಲದ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ.ಇಂದು ಕೊನೆಗೊಳ್ಳಬೇಕಿದ್ದ ಅಧಿವೇಶನ ನಾಳೆ ಶುಕ್ರವಾರವೂ ನಡೆಯಲಿದ್ದು, ವಿವಿಧ ಸಮಸ್ಯೆಗಳು ಚರ್ಚೆಗೆ ಬರಲಿದೆ.
ಬಿಜೆಪಿಯ ಹಲವು ಶಾಸಕರಿಗೆ ಮಾತನಾಡಲು ಅವಕಾಶ ಸಿಗದ ಹಿನ್ನಲೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ಸ್ವೀಕರ್‌ ರಮೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದರು.
ತುರ್ತಾಗಿ ಕಾರ್ಯ ಕಲಾಪ ಸಮಿತಿಯ ಸಭೆ ಕರೆದ ಸ್ಪೀಕರ್‌ ಸದನವನ್ನು ಒಂದು ದಿನದ ಕಾಲ ವಿಸ್ತರಿಸಿದ್ದಾರೆ.
ರೇವಣ್ಣ ಲೆಕ್ಕಾಚಾರ ತಲೆಕೆಳಗೆ
ಶುಕ್ರವಾರ ಅಮವಾಸ್ಯೆ ಹಿನ್ನಲೆಯಲ್ಲಿ ಸದನದ ಕಲಾಪ ನಡೆ ಬಾರದು, ಇಂದೇ ಬಜೆಟ್‌ ಚರ್ಚೆಗೆ ಉತ್ತರ ನೀಡಿ ಕಲಾಪ ಅಂತ್ಯಗೊಳಿಸಲು ಸಚಿವ ಎಚ್‌.ಡಿ.ರೇವಣ್ಣ ಅವರು ಮುಂದಾಗಿದ್ದರು. ಆದರೆ ಅವರ ಲೆಕ್ಕಾಚಾರವನ್ನು ಬಿಜೆಪಿ ತಲೆಕೆಳಗೆ ಮಾಡಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳು