ಸಿಎಂ ಔತಣಕೂಟ: ಒಟ್ಟಿಗೆ ಊಟ ಮಾಡಿದ ಎಚ್‌ಡಿಕೆ, ಸಿದ್ದು, ಬಿಎಸ್‌ವೈ!

ಸಿಎಂ ಔತಣಕೂಟ: ಒಟ್ಟಿಗೆ ಊಟ ಮಾಡಿದ ಎಚ್‌ಡಿಕೆ, ಸಿದ್ದು, ಬಿಎಸ್‌ವೈ!

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಪ್ರತೀ ಹಂತದಲ್ಲಿ ವಿರೋಧಿಸಿ ಸಮರವನ್ನೇ ಸಾರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ರಾಜಕೀಯ ವೈರಿಗಳಾದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭೋಜನ ಸವಿದಿದ್ದಾರೆ.

ಮುಖ್ಯಮಂತ್ರಿ ಎಚ್‌ಡಿಕೆ ಅವರು ಎಲ್ಲಾ ಶಾಸಕರಿಗಾಗಿ ವಿಧಾನಸೌಧದಲ್ಲಿ ಔತಣ ಕೂಟ ಆಯೋಜಿಸಿದ್ದ ರು. ಔತಣಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಖುದ್ದು ಸಿಎಂ ಎಚ್‌ಡಿಕೆ ಅವರು ಕೈ ಹಿಡಿದು ಕರೆತಂದು ತಾವು ಕುಳಿತುಕೊಂಡಿದ್ದ ಕುರ್ಚಿ ಬಿಟ್ಟುಕೊಟ್ಟರು.

ಪಕ್ಕದಲ್ಲಿ ಸಿದ್ದರಾಮಯ್ಯ ಅವರು ಊಟ ಮಾಡುತ್ತಿದ್ದರು. ಸ್ಪೀಕರ್‌ ರಮೇಶ್‌ ಕುಮಾರ್‌ , ಸಚಿವ ಆರ್‌.ವಿ.ದೇಶ್‌ಪಾಂಡೆ, ಜೆಡಿಎಸ್‌ ಪರಿಷತ್‌ ಸದಸ್ಯ , ಹಂಗಾಮಿ ಸಭಾಪತಿ ಬಸವರಾಜ್‌ ಹೊರಟ್ಟಿ ಮೊದಲಾದವರು ಜೊತೆಯಲ್ಲೇ ಊಟ ಮಾಡಿದರು.

ತಾಜಾ ಸುದ್ದಿಗಳು