ಬುದ್ಧಿವಂತ ಹಂಸ

ಬುದ್ಧಿವಂತ ಹಂಸ

ಒಂದು ವಿಶಾಲವಾದ ಮರದ ಮೇಲೆ ಸಾವಿರಾರು ಹಂಸ ಪಕ್ಷಿಗಳು ವಾಸ ಮಾಡುತ್ತಿದ್ದವು. ಆ ಮರದಲ್ಲಿ ಬಳ್ಳಿ ಹಬ್ಬಲು ಶುರುವಾಯಿತು. ಹಂಸಗಳು ಅದನ್ನು ನಿರ್ಲಕ್ಷಿಸಿದವು. ಆದರೆ ಮಾನೋ ಎಂದ ಹಂಸ ಮಾತ್ರ ಇತರೆ ಗಾಬರಿ ವ್ಯಕ್ತಪಡಿಸಿತು. “ಈ ದಿನ ಈ ಬಳ್ಳಿ ಚಿಕ್ಕದಿರಬಹುದು, ಆದರೆ ನಾಳೆ ಅದನ್ನು ಪೂರ್ಣ ಪ್ರಮಾಣದಲ್ಲಿ ಹಬ್ಬಿದಾಗ ಬೇಟೆಗಾರರು ಅದನ್ನು ಏಣಿಯಂತೆ ಬಳಸಿಕೊಂಡು ನಮ್ಮನ್ನು ಹಿಡಿಯಬಹುದು’ ಎಂದು ಮಾನೋ ಹೇಳಿದರೂ ಯಾರೂ ಕೇಳಲು ತಯಾರಿರಲಿಲ್ಲ. ಇಷ್ಟು ದೊಡ್ಡ ಮರ ಅನೇಕ ವರ್ಷಗಳಿಂದ ನಮಗೆ ಆಶ್ರಯ ನೀಡುತ್ತಿದೆ. ಇಷ್ಟು ದಿನ ಇಲ್ಲದ ಅಪಾಯ ಮುಂದೆಯೂ ಬಾರದು ಎಂದು ಮಾನೋ ಎಚ್ಚರಿಕೆಯನ್ನು ತಳ್ಳಿ ಹಾಕಿತು.
ಆದರೆ ಬಹಳ ಬೇಗ ಅವುಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಒಂದು ಸಂಜೆ ತಮ್ಮ ಗೂಡುಗಳಿಗೆ ಮರಳಿದಾಗ ಬೇಟೆಗಾರನ ಬಲೆಯೊಳಗೆ ಸಿಕ್ಕಿಬಿದ್ದವು. ಚಾಣಾಕ್ಷ ಬೇಟೆಗಾರನೊಬ್ಬ ಮರದ ಮೇಲೆ ಹಬ್ಬಿದ್ದ ಬಳ್ಳಿಗಳನ್ನು ಉಪಯೋಗಿಸಿಕೊಂಡು ಮರ ಹತ್ತಿ ಬಲೆಯನ್ನು ನೆಟ್ಟಿದ್ದನು. ಮಾನೋ ಒಂದೇ ಸಿಕ್ಕಿ ಬೀಳಲಿಲ್ಲ. ಎಲ್ಲಾ ಹಂಸಗಳು ತಮ್ಮನ್ನು ಪಾರು ಮಾಡುವಂತೆ ಮಾನೋವನ್ನು ಕೇಳಿಕೊಂಡವು. ಮಾನೋ ಬೆಳಗ್ಗೆ ಬೋಟೆಗಾರ ಬಂದಾಗ ಸತ್ತಂತೆ ನಟಿಸುವಂತೆ ಉಪಾಯ ನೀಡಿತು.
ಬೆಳಗ್ಗೆ ಬೇಟೆಗಾರ ಬಂದ. ಸತ್ತು ಬಿದ್ದಿರುವ ಹಂಸಗಳನ್ನು ಕಂಡು ಆಶ್ಚರ್ಯದಿಂದ ಅವುಗಳನ್ನು ಬಲೆಯಿಂದ ಬಿಡಿಸಿ ದೂರಕ್ಕೆಸೆದ. ಈ ರೀತಿಯಾಗಿ ಎಲ್ಲಾ ಹಂಸಗಳು ಪ್ರಾಣಪಾಯದಿಂದ ಪಾರಾದವು. ಮಾನೋಗೆ ಧನ್ಯವಾದ ಹೇಳಿದವು.

ತಾಜಾ ಸುದ್ದಿಗಳು