ಸಿದ್ದು ಗೆಲ್ಲಿಸಿದ ಸಿಟ್ಟಿಗೆ ಬಾಗಲಕೋಟೆಗೆ ಎಚ್‌ಡಿಕೆ ಏನೂ ಕೊಟ್ಟಿಲ್ಲ

ಸಿದ್ದು ಗೆಲ್ಲಿಸಿದ ಸಿಟ್ಟಿಗೆ ಬಾಗಲಕೋಟೆಗೆ ಎಚ್‌ಡಿಕೆ ಏನೂ ಕೊಟ್ಟಿಲ್ಲ

ಬೆಂಗಳೂರು: ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ ಸಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಾಗಲಕೋಟೆ ಜಿಲ್ಲೆಗೆ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ ಎಂದು ವಿಧಾನಸಭಾ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಅವರು ಸಮ್ಮಿಶ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ನಮ್ಮ ಬಾಗಲಕೋಟೆ ಜಿಲ್ಲೆಗೆ ಏನೂ ಕೊಟ್ಟಿಲ್ಲ. ಜನ ಕೇಳುತ್ತಿದ್ದಾರೆ, ನಾವು ಅವರಿಗೆ ಹೇಗೆ ಮುಖ ತೋರಿಸುವುದು. ಎಲ್ಲಾ ಪತ್ರಿಕೆಗಳು ಬರೆದಿವೆ ಬಾಗಲಕೋಟೆ ಜಿಲ್ಲೆಗೆ ಸೊನ್ನೆ ಎಂದು ಕಿಡಿ ಕಾರಿದರು.

ಜಿಲ್ಲೆಗೆ ಏನೂ ಕೊಟ್ಟಿಲ್ಲ ಅದಕ್ಕಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ದಿನಕ್ಕೊಂದರಂತೆ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದರು.

ಈ ಸರ್ಕಾರ ಕುಂಟ ಕುರುಡನ ದೋಸ್ತಿ ಸರ್ಕಾರ, 38 ಸ್ಥಾನ ಹೊಂದಿರುವವರು ಕುಂಟ ಆದರೆ 80 ಸ್ಥಾನ ಹೊಂದಿರುವವರು ಕುರುಡ. ಸರ್ಕಾರ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಳು