Connect with us

Mysore

200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Published

on

ಮೈಸೂರು: ರಾಷ್ಟ್ರ ಸಂಸ್ಕೃತಿ ಪೋಷಿಣಿ ಪುರಸ್ಕೃತ ಸಂಘಟನೆ ಆದರ್ಶ ಸೇವಾ ಸಂಘ ಮತ್ತು ವಿಶ್ವ ವಿಪ್ರತ್ರಯೀ ಪರಿಷತ್‌ ಸಹಯೋಗದಲ್ಲಿ ೨೦೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪುರಸ್ಕಾರಿಸಿ ವಿವಿಧ ಕ್ಷೇತ್ರದ ಸಾಧಕರಿಗೆ ಆದರ್ಶ ರತ್ನ, ಆದರ್ಶ ಸೇವಾ ರತ್ನ, ಆದರ್ಶ ಪ್ರತಿಭಾ ರತ್ನ, ಆದರ್ಶ ಬಾಲ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಭಗವದ್ಗೀತೆ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಸೇರಿದಾಗಿದೆ. ಹೀಗಾಗಿ ಪ್ರಸ್ತುತ ಭಗವದ್ಗೀತೆಯ ಮೌಲ್ಯಗಳು ವಿಶ್ವದಾದ್ಯಂತ ಹೆಚ್ಚು ಮನ್ನಣೆ ಗಳಿಸುತ್ತಿದೆ ಎಂದು ಹೇಳಿದರು.
ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ. ಯುವ ಸಮೂಹದಲ್ಲಿ ಸ್ವಾರ್ಥತ್ವ ಹೆಚ್ಚುತ್ತಿದೆ. ಪರರ ದುಖಃಕ್ಕೆ ಸಂತ್ವಾನ ಹೇಳುವ ಮತ್ತು ಸುಖಃವನ್ನು ಹಂಚಿಕೊಳ್ಳುವ ಪ್ರಕ್ರಿಯೆಗಳು ಕಡಿಮೆಯಾಗಿದೆ. ಈ ಮೌಲ್ಯಗಳನ್ನು ಹೆಚ್ಚಾಬೇಕಾದರೆ ಭಗವದ್ಗೀತೆ, ವೇದ, ಉಪನಿಷತ್ತುಗಳನ್ನು ಅಭ್ಯಾಸ ಮಾಡಬೇಕು. ವಿದೇಶಗಳಲ್ಲಿ ನೆಲೆಸಿರುವ ಹಿಂದುಗಳು ಮಕ್ಕಳಿಗೆ ಭಗವದ್ಗೀತೆ ಪಠಣ ಮಾಡಿಸುತ್ತಿದ್ದಾರೆ. ಅದರಲ್ಲಿಯೂ ಆಮೇರಿಕಾರದಲ್ಲಿ ಭಗವದ್ಗೀತೆ ಅಭ್ಯಾಸ ಹೆಚ್ಚಾಗುತ್ತಿದೆ. ದೊಡ್ಡ ಕ್ರಾಂತಿಯಾಗುತ್ತಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳ ಹಿಂದೆ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಭಗವದ್ಗೀತೆ ಕಂಠ ಪಾಠ ಮಾಡಿಸಿದ್ದೇನೆ. ಈ ಬಾರಿ ಇನ್ನೂ ಹೆಚ್ಚಿನ ಜನರು ಒಟ್ಟಿಗೆ ಭಗವದ್ಗೀತೆ ಪಾರಾಯಾಣ ನಡೆಯಲಿದೆ ಎಂದು ತಮ್ಮ ಆಮೆರಿಕಾ ಪ್ರವಾಸದ ಅನುಭವನ್ನು ಹಂಚಿಕೊಂಡರು.
ಕಾಮ, ಕ್ರೌರ್ಧ ಬಿಟ್ಟು ಸತ್ಯ ಶೋಧನೆಯಿಂದ ಬದುಕು ಕೂಡಿರಬೇಕು. ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಬೇಕು. ಈಗೀನ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗಿದೆ. ಬಾಲ್ಯದಿಂದಲೇ ಮಕ್ಕಳನ್ನು ಒತ್ತಡದಲ್ಲಿ ಬೆಳೆಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಗೊಂದಲ ನಿವಾರಣೆಗೆ ಎಲ್ಲರೂ ವೇದ ಉಪನಿಷತ್ತುಗಳನ್ನು ಅಧ್ಯಯಾನ ಮಾಡಬೇಕು ಎಂದ ಅವರು ಆದರ್ಶ ಸೇವಾ ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಟಿ.ಎಸ್‌.ಶ್ರೀವತ್ಸ ಮಾತನಾಡಿ, ನಾನು ಶಾಸಕನಾಗಲು ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್‌.ನಾಗರಾಜ ಪಾತ್ರ ದೊಡ್ಡದಿದೆ ಎಂದು ಕೃತಜ್ಙತೆ ತಿಳಿಸಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ತಿಳಿಸಿದರು.
ಆದರ್ಶ ಬಾಲಪ್ರತಿಭಾ ರತ್ನ ಪ್ರಶಸ್ತಿ ಪುರಸ್ಕೃತರು: ವೇದಾಧ್ಯಯನ ನಿರತ ಬಾಲ ಸಾಧಕ ಪೃಥು ಪಿ.ಅದ್ವೈತ್‌, ಭರತನಾಟ್ಯ ಬಾಲ ಕಲಾವಿದ ಭಗತ್‌ ಶರ್ಮ, ಕಿರುತರೆ ನಟ ವಿ.ಅಮೋಘಕೃಷ್ಣ, ವಯೋಲಿನ್‌ ಸಾಧಕ ಪ್ರಣವ್‌ ಚಂದ್ರಶೇಖರ್‌.
ಆದರ್ಶ ಪ್ರತಿಭಾ ರತ್ನ ಪ್ರಶಸ್ತಿ: ಯುವ ವಿಜ್ಞಾನಿ ಆಕಾಶ್‌, ಅಂತಾರಾಷ್ಟ್ರೀಯ ಬ್ಯಾಡ್‌ಮಿಂಟನ್‌ ಆಟಗಾರ ವಿದ್ಯಾನಂದ ಕಶ್ಯಪ್‌, ಮಾರ್ಗದರ್ಶಕ ಬಿ,ನಾಗರಾಜ್‌ ಕುಮಾರ್‌, ಯುವ ಚಿಂತಕ ಪ್ರಜ್ಞಾ ಕಶ್ಯಪ್‌, ಗಾಯಕ ಕೆ.ರಮೇಶ್‌, ಕೋಟಿ ವೃಕ್ಷ ಪ್ರತಿಷ್ಠಾನದ ಶ್ರೀಕಾಂತ್‌ ಭಟ್‌, ಮಾಧ್ಯಮ ಪ್ರವರ್ತಕ ಅಮಿತ್‌, ಗಾಯಕಿ ಹಂಸಿನಿ ಎಸ್.ಕುಮಾರ್‌, ಯುವ ಉದ್ಯಮಿ ಶೌಮಿಕಾ ಎಸ್‌.ರಾವ್‌, ವಯೋಲಿನ್‌ ವಾದಕ ಸಿರಿ ಪರಮಾತ್ಮ, ಚಿತ್ರಕಲಾವಿದೆ ಶಿವಾನಿ ಪ್ರಸಾದ್‌, ಇಂಜಿನಿಯರ್‌ ಪಿ.ಎನ್.ಪ್ರಶಾಂತ್‌ ಭಾಜನರಾದರು.
ಆದರ್ಶ ರತ್ನ ಪ್ರಶಸ್ತಿ: ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಬಿ.ಎನ್.ನಾಗರಾಜು, ನಿವೃತ್ತ ಪ್ರಾಧ್ಯಾಪಕ ಕೆ.ಎನ್.ನಾಗೇಶ್‌, ಎಂ.ಶ್ರೀಕಂಠಮೂರ್ತಿ, ವಿನೋದಮ್ಮ ಪುರಸ್ಕೃತರಾದರು.
ಆದರ್ಶ ಸೇವಾ ರತ್ನ ಪ್ರಶಸ್ತಿ: ವನಜಾ ಪಂಡಿತ್‌, ಪ್ರೊ.ಎಚ್‌.ಎಸ್.ನಾಗರಾಜು, ಎ.ರಾಮಸ್ವಾಮಿ, ಭಾನುಪ್ರಕಾಶ್‌ ಶರ್ಮ, ಭೀಮೇಶ್ವರ ಜೋಷಿ, ಡಾ.ಅಯ್ಯಪ್ಪನ್‌, ಪ್ರಕಾಶ್‌ ಅಯ್ಯಂಗಾರ್‌, ಕಾನಾಡಿ ಗೋವಿಂದ ಭಟ್ಟ, ಕೆ.ಸುಂದರಾಜು, ಡಾ.ಮಹೇಶ್ ಶೆಣೈ, ದಿಲೀಪ್‌ ಸತ್ಯ, ಡಾ.ಸುಧಾ ರಮೇಶ್‌, ಡಾ.ಜಿ.ಅಚ್ಯುತ ರಾವ್‌, ಅಶೋಕ ಎಂ.ರಾವ್‌, ಸುರೇಶ್‌ ವೃಕ್ಷಂ, ಡಾ.ಮಹಾಲಕ್ಷ್ಮೀ ಬೇಗೂರು ಪೂರ್ಣಯ್ಯ ಅವರಿಗೆ ನೀಡಲಾಯಿತು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್‌, ವಿಶ್ವ ವಿಪ್ರತ್ರಯೀ ಪರಿಷತ್‌ನ ಅಧ್ಯಕ್ಷ ಎನ್.ರಘುನಾಥ್‌, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜು ವೇದಿಕೆಯಲ್ಲಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಅದ್ದೂರಿಯಾಗಿ ಜರುಗಿದ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ

Published

on

ನಂಜನಗೂಡು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಡಿ. 4 ರಂದು ಗುರುವಾರ ನಡೆದ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶನಿವಾರ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವವು ಸಂಜೆ ಕಪಿಲಾ ನದಿಯಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಿತು.

ಬಣ್ಣ ಬಣ್ಣದ ಹೂವು ಹಾಗೂ ಚಿನ್ನ ವಜ್ರಾಭರಣಗಳಿಂದ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಕಪಿಲಾ ನದಿ ತೀರದ ಸ್ನಾನ ಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ತೇಲುವ ದೇವಾಲಯದ ಮಾದರಿಯಲ್ಲಿ ನಿರ್ಮಿಸಲಾದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ತೆಪ್ಪೋತ್ಸವ ನಡೆಸಲಾಯಿತು.

ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಚಲಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿ ಭಕ್ತರ ಮನಸೂರೆಗೊಂಡಿತು. ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಗಳು ದೇವಾಲಯದ ಪ್ರಧಾನ ಆಗಮಿಕರಾದ ಶ್ರೀ ನಾಗಚಂದ್ರ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ನಡೆಯಿತು.

ನಂಜನಗೂಡು ನಗರವು ಸೇರಿದಂತೆ ವಿವಿಧ ಕಡೆಯಿಂದ ಬಂದ ಸಾವಿರಾರು ಭಕ್ತರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ತಮ್ಮ ಭಕ್ತಿ ನಮನ ಸಲ್ಲಿಸಿದರು.

ನಂತರ ತಪೋತ್ಸವದಿಂದ ಹೊರ ತಂದ ಶ್ರೀ ಅವರ ಉತ್ಸವ ಮೂರ್ತಿಯನ್ನು ಸಣ್ಣ ರಥದಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸೇರಿದಂತೆ ದೇವಾಲಯದ ಅರ್ಚಕ ವೃಂದದವರು ಉಪಸ್ಥಿತರಿದ್ದರು.

Continue Reading

Mysore

ಕಳಲೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು:  ತಾಲೂಕಿನ ಕಳಲೆ ಗ್ರಾಮದಲ್ಲಿ 75 ಲಕ್ಷ  ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಇಂದು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ.

ನಂತರ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಾಗ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಿದ್ದರು.

ಈ ಗ್ರಾಮದಲ್ಲಿ ಹತ್ತು ಸಾವಿರ ಜನರು ವಾಸ ಇದ್ದೀರಾ. ಮೂಲಸೌಕರ್ಗಳನ್ನು ಆಗಬೇಕಾಗಿರುವುದನ್ನು ತಿಳಿಸಿದ್ದೀರಾ , ಹಂತ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ ಸಹಕಾರ ಕೊಡಿ ಅಂತ ತಿಳಿಸಿದರು.

ಗ್ರಾಮದಲ್ಲಿ ಗರಡಿ ಮನೆ ಪೂಜೆಯಾಗಿ ಕೆಲಸ ಪ್ರಾರಂಭ ಆಗಿಲ್ಲ ಅಂತ ತಿಳಿಸಿದ್ದೀರಾ, ಈಗಾಗಲೇ ಅಧ್ಯಕ್ಷರು ನನ್ನ ಬಳಿ ಮಾತನಾಡಿ ಗ್ರಾಮದ ಯಜಮಾನರು ಒಪ್ಪುತ್ತಿಲ್ಲ ಆದ್ದರಿಂದ ಲೇಟಾಗಿದೆ ಅಂತ ತಿಳಿಸಿದ್ರು, ಅಧ್ಯಕ್ಷರು ಒಂದು ವಾರ ಗಡುವು ಸಮಯ ತೆಗೆದುಕೊಂಡಿದ್ದಾರೆ. ಒಂದು ವಾರ ನಂತರ ಕೆಲಸ ಪ್ರಾರಂಭವಾಗಲಿಲ್ಲ ಅಂದರೆ ನನಗೆ ಫೋನ್ ಮಾಡಿ ಎಂದು ಕ್ರೀಡಾ ಪೈಲ್ವಾನ್ಗಳಿಗೆ ಕಿವಿ ಮಾತು ಹೇಳಿದರು.

ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿ, ಮತ್ತು ರಸ್ತೆ ಅಭಿವೃದ್ಧಿಗಳು, ವೈದ್ಯರ ಸಮಸ್ಯೆ , ಇತರೆ ಮೂಲ ಸೌಕರ್ಸೌಯ ಲಭ್ಯಗಳ ಬಗ್ಗೆ ತಿಳಿಸಿದ್ದೀರಾ. ಇವೆಲ್ಲ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಸಹಕಾರ ಸಮಯ ಕೊಡಿ ಎಂದರು.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ 50 ಕೋಟಿ ನೀಡುತ್ತಾರೆ. ನಿಮ್ಮ ಗ್ರಾಮಕ್ಕೂ ಅನುದಾನ ನೀಡಿ ಹಂತ ಹಂತವಾಗಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕಳಲೆ ಗ್ರಾಮ ಒಂದು ಇತಿಹಾಸ ಇದೆ. ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನಕ್ಕಿಂತ ಮುಂಚೆ ಕಳಲೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ದೇವಸ್ಥಾನ ಸ್ಥಾಪನೆಯಾಗಿದ್ದು, ಕಡಲೆಪುರಿ, ಮತ್ತು ಹಳೆಯ ಹೆಸರು ವೇಣುಪುರಿ ಎಂದು ಕರೆಯುತ್ತಿದ್ದರು. ಈ ಗ್ರಾಮದಲ್ಲಿ 19 ಸಮುದಾಯದ ಜನಾಂಗ ಸಮರಸ್ಯದಿಂದ ಇದ್ದಾರೆ. ಈ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಎರಡು ಕೋಟಿ ಅನುದಾನವನ್ನು ನೀಡಿದ್ದರೂ. ಅದರಲ್ಲಿ ಹಲವು ರಸ್ತೆಗಳು ಪೂರ್ಣಗೊಂಡಿವೆ. ಇನ್ನು ಅಭಿವೃದ್ಧಿ ಆಗುವ ಕೆಲಸಗಳನ್ನು ಮುಂದಿನ ತಿಂಗಳು ಜನವರಿ 26ರಂದು ಪಂಚಾಯಿತಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿ ಕೆಲವು ಅಭಿವೃದ್ಧಿಗಳಿಗೆ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಅಂತ ಭರವಸೆ ನೀಡಿದರು.

 

ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮಾತನಾಡಿ, ಈ ದಿವಸ ನಮ್ಮ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಾರ್ಯಾಲಯ ಉದ್ಘಾಟನೆ ಆಗಿರೋದು ತುಂಬಾ ಸಂತೋಷಕರ ವಿಷಯವಾಗಿದೆ. ಹಿಂದೆ ಕಟ್ಟಡ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪಕ್ಷದ ಯುವ ಶಾಸಕರ ಬಳಿ ಹೇಳಿದ ಮೇಲೆ 75 ಲಕ್ಷ ಅನುದಾನ ನೀಡಿದರು. ಈ ಕೆಲಸ ಆರೇ ತಿಂಗಳಲ್ಲಿ ಪೂರ್ಣಗೊಳಿಸಿ ಶಾಸಕ ಉದ್ಘಾಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಕೆಲಸಗಳಿಗೂ ಸ್ಪಂದಿಸುತ್ತಾರೆ ಸಹಕಾರ ನೀಡಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಡಿ. ಮಹೇಶ್ , ಉಪಾಧ್ಯಕ್ಷರಾದ ಹರೀಶ್ , ಇಒ ಜೆರಾಲ್ಡ್ ರಾಜೇಶ್ , ಸದಸ್ಯರಾದ ಮಹೇಶ್, ಶಿವಣ್ಣ , ಸುಮಾ, ಲಕ್ಷ್ಮೀ , ಶಿವಕುಮಾರಿ, ರಾಜಮ್ಮ , ವಿಶಾಲಾಕ್ಷಮ್ಮ , ಶಾಂತಮ್ಮ , ರತ್ನಮ್ಮ, ಗೀತಾ, ಶಿವರಾಮ್, ಶಿವಕುಮಾರ್, ಮುಖಂಡರಾದ ಎನ್ ಮಹದೇವು, ಬೈರ ನಾಯಕ, ಕೆ. ಡಿ ಮಂಜು ರವರು, ದೊರೆಸ್ವಾಮಿ ನಾಯಕ , ಮಂಜುನಾಥ್, ಪ್ರದೀಪ್, ರಾಚ ನಾಯಕ, ಕಳಲೆ ರಾಜೇಶ್, ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

Continue Reading

Mysore

ಪಠ್ಯದಿಂದ ಡಾ.ಅಂಬೇಡ್ಕರ್ ಹೊರಗಿಡುವ ಹುನ್ನಾರ: ಪ್ರೊ.ಪ್ರಸನ್ನಕುಮಾರ್ ಕೆರಗೋಡು ಶಂಕೆ

Published

on

ಮೈಸೂರು: ಜ್ಞಾನದ ಪ್ರತಿರೂಪವಾಗಿ ಜಗತ್ತಿನಲ್ಲಿ ಮನ್ನಣೆ ಪಡೆಯುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹಂತ ಹಂತವಾಗಿ ಪಠ್ಯಕ್ರಮಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಚಿಂತಕ ಪ್ರೊ.ಪ್ರಸನ್ನಕುಮಾರ್ ಕೆರಗೋಡು ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜ್ಞಾನ, ಪ್ರೌಢಿಮೆಯನ್ನು ಹರಿಸಿದವರು. ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ಹಂತ ಹಂತವಾಗಿ ಪಠ್ಯದಿಂದ ತೆಗೆಯುವ ಮೂಲಕ ಹೊಸ ತಲೆಮಾರಿನ ವಿದ್ಯಾರ್ಥಿಗಳಿಂದ ದೂರಾಗಿಸುವ ಪ್ರಯತ್ನ ನಡೆಯುತ್ತಿವೆ ಎಂದು ಎಚ್ಚರಿಸಿದರು.

ಡಾ.ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬ ದಲಿತನೂ ಶಿಕ್ಷತನಾಗಿ ಉನ್ನತವಾದ ಜೀವನ ರೂಪಿಸಿಕೊಳ್ಳಬೇಕು. ಮತ್ತೆ ಹಳ್ಳಿಗಳ ಕಡೆ ಮುಖ ಮಾಡಿ ತಮ್ಮವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಆಗ ಮಾತ್ರ ಡಾ.ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ತಂದೆ ಸ್ವಾತಂತ್ರ‍್ಯ ಹೋರಾಟಗಾರರು. 1952ರಲ್ಲಿ ಡಾ.ರಾಜಕುಮಾರ್ ಅವರ ಭಕ್ತ ಚೇತ ಎಂಬ ಸಿನಿಮಾ ನಿರ್ದೇಶನ ಮಾಡಿ ಅಸ್ಪೃಶ್ಯತೆ ವಿರುದ್ಧ ಹೋರಾಡುವ ಬೀಜ ಬಿತ್ತಿದ್ದರು. ನಾನೂ ಸಹ ಕೃಷ್ಣ ನೀ ಬೇಗನೆ ಬಾರೋ, ಭೂಮಿ ತಾಯಿಯ ಚೊಚ್ಚಲ ಮಗ ಮುಂತಾದ ದಲಿತ ಮತ್ತು ಅಸ್ಪೃಶ್ಯತೆ ಕುರಿತ ಸಿನಿಮಾಗಳ ನಿರ್ದೇಶನ ಮಾಡಿದ್ದೇನೆ ಎಂದು ನೆನಪಿಸಿಕೊಂಡರು.


ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ರಮೇಶ್, ಸಿದ್ದರಾಜು, ಎಡತಲೆ ಮಂಜುನಾಥ್, ಶಿವಪ್ರಸಾದ್ ಎಂ., ಗಿರೀಶ್ ಪಿ.ತೊರೆಮಾವು, ಈಶ್ವರ್ ಚಕ್ಕಡಿ, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮೋದಮಣಿ, ಸುರೇಶ್ ಪಾಳ್ಯ, ಶಿವಶಂಕರಮೂರ್ತಿ, ಸಿದ್ದಯ್ಯ, ಮಹೇಶ್ ನಾಯಕ್, ಶಾಮ, ಯೋಗೇಶ್, ಎಂ.ಕೆ.ಅಶೋಕ್, ಮುರುಡೇಶ್, ರಾಮು, ಮೋಹನ್, ಸುಶೀಲಾ ಮುಂತಾದವರಿದ್ದರು.

Continue Reading

Trending

error: Content is protected !!