Connect with us

Chamarajanagar

ಯಳಂದೂರು ತಾಪಂ ವತಿಯಿಂದ 15ನೇ ರಾಷ್ಟ್ರೀಯ ಮತದಾನ ದಿನಾಚರಣೆ

Published

on

ಯಳಂದೂರು ಜನವರಿ 25

ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 15ನೇ ರಾಷ್ಟ್ರೀಯ

ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಆರ್ಕಶ್ ಎಂ ರವರು 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿ ಈಗಿನ ಯುವಕರಿಗೆ ಮತದಾನದ ಅರಿವು ಅಗತ್ಯ 18 ವಯಸ್ಸು ಮೀರಿದವರು ಮಾತ ದಾರರಗೆ ನೋಂದಣಿ ಮಾಡುವುದು ಅಗತ್ಯ, ಎಂದು
ತಿಳಿಸಿದರು,

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ಚುನಾವಣೆ ಸಂದರ್ಭದಲ್ಲಿ ನಿಮ್ಮ ಮತ ವನು ಮಾರಿಕೊಳ್ಳಬೇಡಿ , ಯುವಕರು ಹೆಚ್ಚಿನ ಪ್ರಮಾಣದಲ್ಲಿ ಒಂದಾಯಿಸಬೇಕು, ರಾಷ್ಟ್ರೀಯ ಮತದಾನ ದ ಬಗ್ಗೆ ತಿಳಿಸಿದರು,

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳದ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಸಾಹಯಕ ನಿರ್ದೇಶಕ ರಾದ ಗುರು ಮಲ್ಲು, ಭೂ ದಾಖಲೆಗಳ ನಿರ್ದೇಶಕ ರಾದ ಉಮೇಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಹನೂರು, ಸಾಹಯಕ ಪ್ರಾದ್ಯಾಪಕರದ ಶ್ವೇತ ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತೇಷ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗೇಂದ್ರ, ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Continue Reading

Chamarajanagar

ನಾನಂಥವನಲ್ಲಾ ಎಂದ ನಂದಕುಮಮಾರ್‌: ಚಾಮರಾಜನಗರ ಹಿರಿಕಾಟಿ ಕ್ರಷರ್‌ ವಿವಾದಕ್ಕೆ ಸ್ಪಷ್ಟನೆ

Published

on

ಚಾಮರಾಜನಗರ ಜಿಲ್ಲೆ ಹಿರಿಕಾಟಿ ಬಳಿ ಕ್ರಷರ್‌ ವಿಚಾರವಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕಿರುವ ಆರೋಪ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್‌ ಅವರ ಮೇಲೆ ಕೇಳಿ ಬಂದಿದೆ. ಚಾಮರಾಜನಗರದ  ಸಂಸದ ಸುನಿಲ್‌ ಬೋಸ್‌ ಅವರ ಹೆಸರು ಕೂಡ ಪ್ರಸ್ತಾಪಿಸಿರುವ ನಂದಕುಮಾರ್‌, ನನಗೆ ಸಂಸದರ ಬೆಂಬಲವಿದೆ. ನನ್ನ ಪೊಲಿಟಿಕಲ್‌ ಒವರ್‌ ಏನು ಅಂತ ತೋರಿಸುತ್ತೇನೆ ಅಂತ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಯಮಿಗಳು ನಂದಕುಮಾರ್‌ ಸೇರಿ ಇತರರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಹಿರಿಕಾಟಿ ಬಳಿ ಕ್ರಷರ್‌ ಉದ್ಯಮವನ್ನು ಕಾನೂನು ನೀತಿ ನಿಯಾಮವಳಿ ಅನ್ವಯವೇ, ಯಾವುದೇ ಉಲ್ಲಂಘನೆ ಅಗದಂತೆ ನಡೆಸುತ್ತ ಬಂದಿದ್ದೇವೆ. ನಮ್ಮ ಕ್ರಷರ್‌ ಪಕ್ಕದಲ್ಲೇ ನಂದಕುಮಾರ್ ಅವರ ಕ್ರಷರ್‌ ಕೂಡ ಇದೆ. ನಮಗೆ ಕಿರುಕುಳ ನೀಡಿ ಇಲ್ಲಿಂದ ನಮ್ಮ ಕ್ರಷರ್‌ ಅನ್ನ ಬೇರೆಡೆ ಸ್ಥಳಾಂತರ ಮಾಡಲು ಈ ರೀತಿ ಕಿರುಕಳ ನೀಡಿದ್ದಾರೆ ಅಂತ ಬಹಿರಂಗವಾಗಿ ಮಾಧ್ಯಮಗಳೆದುರು ಗಂಭೀರ ಆರೋಪಗಳನ್ನ ಮಾಡಿದ್ದರು.

ಇನ್ನು ಉದ್ಯಮಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಂದಕುಮಾರ್‌ ನಾನಂಥವನಲ್ಲಾ, ನಾನು ಯಾವುದೇ ಪೊಲಿಟಿಕಲ್‌ ಪವರ್‌ ಯೂಸ್‌ ಮಾಡುವುದಾಗಿ ಹೇಲಿಲ್ಲ. ಅವರು ವಿನಾಕಾರಣ ಸುಳ್ಳು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

Chamarajanagar

ಪರಿಶ್ರಮದಿಂದ ಯಶಸ್ಸು ಸಾಧ್ಯ: ದೈಹಿಕ ನಿರ್ದೇಶಕ ಡಾ. ಶಾಂತರಾಜು

Published

on

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾಪಟುಗಳು ದೇಶ ಹಾಗೂ ರಾಜ್ಯದ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಚಾಮರಾಜನಗರ ವಿ.ವಿ ದೈಹಿಕ ನಿರ್ದೇಶಕ ಡಾ. ಶಾಂತರಾಜು ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಇಂದು ಫೆಬ್ರವರಿ 11 ರಿಂದ 15 ರವರೆಗೆ ತಮಿಳುನಾಡಿನ ದಿಂಡಿಗಲ್ ನ ಪಿಎಸ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಚಾಮರಾಜನಗರ ವಿವಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸದ ವಿಚಾರ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಯಶೀಲರಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್. ಮಹದೇವಸ್ವಾಮಿ, ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜು ದೈಹಿಕ ಉಪನ್ಯಾಸಕರಾದ ಎಸ್. ಶ್ರೀಧರ್, ಇತರರು ಇದ್ದರು.

Continue Reading

Chamarajanagar

ಜಾನುವಾರುಗಳ ಮರಣಕ್ಕೆ ರೋಗೋದ್ರೇಕ ಕಾರಣವಲ್ಲ : ಜಿಲ್ಲಾಧಿಕಾರಿ ಶ್ರೀರೂಪ ಸ್ಪಷ್ಟನೆ

Published

on

ಚಾಮರಾಜನಗರ: ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ವಿಷಯುಕ್ತ ನೀರು ಸೇವಿಸಿ ಮರಣಹೊಂದಿದೆ. ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.

ಫೆ. 4 ರಂದು ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರ 6 ದನಗಳು (ಹಳ್ಳಿಕಾರ್) ಹಾಗೂ ಫೆ. 5 ರಂದು ಗುನ್ನೂರು ಬಯಲು ಪಳನಿಮೇಡು ಗ್ರಾಮದ ತಂಗರಾಜು ಅವರ 5 ದನಗಳು (ಸ್ಥಳೀಯ) ಮೇಯಲು ಹೋಗಿದ್ದ ಸಂದರ್ಭದಲ್ಲಿ ಹಠಾತ್ ಆಗಿ ಒಟ್ಟು 11 ಜಾನುವಾರುಗಳು ಮೃತಪಟ್ಟಿವೆ.

ಸದರಿ ದನಗಳ ಮರೋಣೋತ್ತರ ಪರೀಕ್ಷೆಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್ ಮತ್ತು ವಿಬಿ, ಬೆಂಗಳೂರು) ತಜ್ಞ ವಿಜ್ಞಾನಿಗಳ ತಂಡವು ನಡೆಸಿದ್ದು, ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುತ್ತದೆ.

ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!