Connect with us

Mysore

ಮಹಿಷ ದಸರಾ ಪರ ವಿರೋಧ ವಿವಾದ ವಿಚಾರ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಿಂದ ಸೆಕ್ಷನ್ 144 ಜಾರಿ

Published

on

ಮೈಸೂರು : ಮಹಿಷ ದಸರಾ ಪರ ವಿರೋಧ ವಿವಾದ ವಿಚಾರ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಿಂದ ಸೆಕ್ಷನ್ 144 ಜಾರಿ. ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ.ಪೊಲೀಸ್ ಕಮೀಷನರ್‌ ರಮೇಶ್, ಬಿ ಆದೇಶ.

ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ.
12 ರಂದು ಮಧ್ಯರಾತ್ರಿ 12-00 ಗಂಟೆಯಿಂದ 14 ರ ಬೆಳಿಗ್ಗೆ 06-00 ಗಂಟೆಯವರೆಗೆ ನಿರ್ಬಂಧ.
ಯಾವುದೇ ಸಭೆ-ಸಮಾರಂಭ, ರಾಲಿ ಹಾಗೂ ಮೆರವಣಿಗೆ ನಡೆಸದಂತೆ ನಿಷೇಧ.
1) ಯಾವುದೇ ಮೆರವಣಿಗೆ, ಪ್ರತಿಭಟನೆ, ರಾಲಿ, ಬೈಕ್ ರಾಲಿ, ನಡೆಸುವುದು.
2) .ಪರ ವಿರೋಧ ಘೋಷಣೆ ಕೂಗುವುದು
3) ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು
4) 05 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು.
5) ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು.
6) ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪುಚಾರ, ಧ್ವನಿವರ್ಧಕ ಬಳಸುವುದು, ಫೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು.
ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ-ಸಮಾರಂಭ ಮೆರವಣಿಗೆ, ಪ್ರತಿಭಟನೆ, ರಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು.
ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ.

Continue Reading
Click to comment

Leave a Reply

Your email address will not be published. Required fields are marked *

Mysore

ಹಾವುಗಳಿದ್ದರೆ ಪರಿಸರ ಸಂರಕ್ಷಣೆ: ಮಹೇಶ್

Published

on

ಮೈಸೂರು: ಪರಿಸರ ಸಮತೋಲನ ಕಾಪಾಡಲು ಹಾವುಗಳನ್ನು ರಕ್ಷಿಸಬೇಕು ಎಂದು ಉರಗ ರಕ್ಷಕ ಮತ್ತು ವನ್ಯಜೀವಿ ಸಂರಕ್ಷಕ ಎಂ.ಎಸ್.ಮಹೇಶ್ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಪ್ರಾಣಿಶಾಸ್ತ್ರ ಹಾವುಗಳ ಗುರುತಿಸುವಿಕೆ ಮತ್ತು ಸುರಕ್ಷಣಾ ಶಿಷ್ಟಾಚಾರಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಹಾವುಗಳು ರೈತನಿಗೆ ಮಿತ್ರನಾಗಿದ್ದು, ಕೃಷಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಪ್ರಪಂಚದಲ್ಲಿ 2600 ಜಾತಿಯ ಹಾವುಗಳಿದ್ದು, ಭಾರತದಲ್ಲಿ 300 ರೀತಿಯ ಹಾವುಗಳಿವೆ ಎಂದರು.

ನಾಗರಹಾವು, ಮಂಡಲದಹಾವು ಹಾಗೂ ಕಾಳಿಂಗಸರ್ಪ ಹಾವುಗಳ ವಿಶಿಷ್ಟತೆ ವಿವರಿಸಿದ ಅವರು, ಹಾವು ಕಚ್ಚಿದಾಗ ನಿಯಂತ್ರಿಸಲು ಬಹಳಷ್ಟು ಔಷಧಿಗಳಿವೆ. ಹಾವಿನ ವಿಷದಿಂದ ಸಾಯುವುದಕ್ಕಿಂತ ಭಯದಲ್ಲೇ ಸಾಯುವ ಸಂಖ್ಯೆ ಹೆಚ್ಚಿದೆ. ಯಾವುದೇ ರೀತಿಯ ಮೂಢನಂಬಿಕೆಗಳಿಗೆ ಒಳಗಾಗದೆ ಹಾವು ಕಚ್ಚಿದಾಗ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.


ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ, ಪ್ರಾಣಿಶಾಸ್ತ್ರ ಮುಖ್ಯಸ್ಥೆ ಸಿ.ಜ್ಞಾನೇಶ್ವರಿ ಉಪಸ್ಥಿತರಿದ್ದರು. ಹರ್ಷಿತ ಮತ್ತು ಪ್ರೀತಿ ಪ್ರಾರ್ಥಿಸಿದರು. ಅವನಿ ಸ್ವಾಗತಿಸಿದರು. ಎಂ.ಜೆ. ಚಂದನ ವಂದಿಸಿದರು. ಆರ್.ಪಿ.ಸೃಷ್ಟಿ ನಿರೂಪಿಸಿದರು.

Continue Reading

Mysore

5.55 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಕೆ.ಹರೀಶ್ ಗೌಡ

Published

on

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಬೃಂದಾವನ ಬಡಾವಣೆ ಹಾಗೂ ಯಾದವಗಿರಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಂದಾಜು 5.55 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಬುಧವಾರ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ಚರಕ ಆಯುರ್ವೇದ ಆಸ್ಪತ್ರೆ ಮೂಲಕ ರೈಲ್ವೆ ಹಳಿ ಸೇರುವ ರಸ್ತೆ, 2ನೇ ಹಂತ, 8ನೇ ಮುಖ್ಯ ರಸ್ತೆ, ರೈಲ್ವೆ ಹಳಿ ಸಮಾನಾಂತರ ರಸ್ತೆ ದೇವಸ್ಥಾನದವರೆಗೂ, ಬೃಂದಾವನ ಬಡಾವಣೆಯ ಅಡ್ಡ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.


ಜತೆಗೆ ಗುರುದ್ವಾರ ರಸ್ತೆಯ ಹಿಂಭಾಗ 2ನೇ ಹಂತದ ಅಡ್ಡ ರಸ್ತೆಗಳು, ಆಂಜನೇಯ ಸ್ವಾಮಿ ದೇವಸ್ಥಾನ ಕೆಎಸ್‌ಆರ್‌ಟಿಸಿ ಕ್ವಾಟ್ರಸ್ ಮುಂಭಾಗದ ರಸ್ತೆ, ಬೃಂದಾವನ 2ನೇ ಹಂತ ಗುರುದ್ವಾರದ ಪಕ್ಕ ಮಂಜುನಾಥಪುರ ಸೇರುವ ರಸ್ತೆ, ಬೃಂದಾವನ ಬಡವಾಣೆಯಿಂದ ಕೆಐಎಡಿಬಿ ಕ್ಯಾಂಟೀನ್ ರಸ್ತೆ, ಕೆಐಎಬಿಡಿ 1ನೇ ಅಡ್ಡ ರಸ್ತೆ, ಕೆಐಎಬಿಡಿ 2ನೇ ಅಡ್ಡ ರಸ್ತೆ, ಕೆಐಎಬಿಡಿ 3ನೇ ಅಡ್ಡ ರಸ್ತೆ, ಕೆಐಎಬಿಡಿ 4ನೇ ಅಡ್ಡ ರಸ್ತೆ, ಕೆಐಎಬಿಡಿ 5ನೇ ಅಡ್ಡ ರಸ್ತೆಯ ಕಾಮಗಾರಿಗಳೂ ಸೇರಿವೆ.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ.ನಾಗಭೂಷಣ್, ವಾರ್ಡ್ ಅಧ್ಯಕ್ಷ ದಿನೇಶ್, ಮುಖಂಡರಾದ ಟೆಂಟ್ ಶ್ರೀನಿವಾಸ್, ಪ್ರವೀಣ್ ಶೆಟ್ಟಿ, ಸುಶೀಲ ಮರಿಗೌಡ, ಗಿರಿಜಾಂಬ, ಮಂಜುನಾಥ್, ಜೀವನ್ ಪ್ರಕಾಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಮಹದೇಶ್, ಆಶ್ರಯ ಸಮಿತಿ ಸದಸ್ಯರಾದ ಮಂಜುನಾಥï, ಇಬ್ರಾಹಿಂ, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Continue Reading

Mysore

ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮ್ಮೇಳನ: ಕರ್ನಾಟಕ ಅಂಚೆ ವೃತ್ತಕ್ಕೆ ಅಗ್ರಸ್ಥಾನ

Published

on

ಮೈಸೂರು: ಮೈಸೂರಿನಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಎರಡನೇ ದಿನದ ಸ್ಪರ್ಧೆಗಳಲ್ಲಿ 11 ಪ್ರಥಮ, 13 ದ್ವಿತೀಯ ಮತ್ತು 2 ತೃತೀಯ ಬಹುಮಾನಗಳನ್ನು ಗಳಿಸುವ ಮೂಲಕ ಕರ್ನಾಟಕ ಅಂಚೆ ವೃತ್ತ ಮೊದಲ ಸ್ಥಾನವನ್ನು ಪಡೆಯಿತು.
14 ಪ್ರಥಮ, 4 ದ್ವಿತೀಯ ಮತ್ತು 1 ತೃತೀಯ ಬಹುಮಾನಗಳನ್ನು ಪಡೆಯುವ ಮೂಲಕ ಕೇರಳ ಅಂಚೆ ವೃತ್ತ ಎರಡನೇ ಸ್ಥಾನ ಹಾಗೂ ಒಟ್ಟು 9 ಬಹುಮಾನಗಳನ್ನು ಪಡೆಯುವ ಮೂಲಕ ಒಡಿಶಾ ಅಂಚೆ ವೃತ್ತವು ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ.
ಕರ್ನಾಟಕ ಅಂಚೆ ವೃತ್ತದ ಚಾರ್ಮಿ ಎಸ್‌, ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಒಡಿಸ್ಸಿ ನೃತ್ಯದಲ್ಲಿ ದ್ವಿತೀಯ ಬಹುಮಾನವನ್ನು, ಪಲ್ಲವಿ ಎಲ್‌ ಕೊಡಿಯ, ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಮತ್ತು ತೃತೀಯ ಬಹುಮಾನವನ್ನು, ಶಾಂಭವಿ ದೇಗಾವಿ ಮಠ್‌ ಅವರು ಕಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಬಹುಮಾನವನ್ನು, ಪ್ರದ್ಯುಮ್‌ ಕೌಶಿಕ್‌ ಸಿ.ಜಿ. ಅವರು ಹಿರಿಯರ ವಿಭಾಗದ ಹಿಂದೂಸ್ಥಾನಿ ಶೈಲಿಯ ಪಿಟೀಲು ವಾದನದಲ್ಲಿ ಪ್ರಥಮ ಬಹುಮಾನ, ಸ್ಪರ್ಶ ಹಿರಿಯರ ವಿಭಾಗದ ಭರತ ನಾಟ್ಯದಲ್ಲಿ ಪ್ರಥಮ, ಶೃಷ್ಠಿ ಕಿರಿಯರ ವಿಭಾಗದ ಸಾತ್ರಿಯ ನೃತ್ಯದಲ್ಲಿ ದ್ವಿತೀಯ, ಪುಣ್ಯಶ್ರೀ ಡಿ ಎಂ ಕಿರಿಯರ ವಿಭಾಗದ ಮೋಹಿನಿಆಟ್ಟಂ ನೃತ್ಯದಲ್ಲಿ ದ್ವಿತೀಯ ಸೇರಿದಂತೆ ಹಲವರು ಬಹುಮಾನಗಳನ್ನು ಪಡೆದರು.
ಕೇರಳ ಅಂಚೆ ವೃತ್ತದ ನಿರಂಜನಾ ಕೆ. ಎಸ್.‌ ಕಿರಿಯರ ವಿಭಾಗದ ಭರತನಾಟ್ಯಂನಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ವಿಭಾಗದ ಮೋಹಿನಿಆಟ್ಟಂನಲ್ಲಿ ಪ್ರಥಮ, ಗೌತಮ್‌ ಗಣೇಶ್‌ ಹಿರಿಯರ ವಿಭಾಗದ ಕಥಕಳಿ ನೃತ್ಯದಲ್ಲಿ ಪ್ರಥಮ, ನಯನ ವಾಸುದೇವ್‌ ಎನ್‌ ಅವರು ಹಿರಿಯರ ವಿಭಾಗದ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನ ಮತ್ತು ಕೆ. ಎನ್‌. ಶಿವಾನಂದನ ಎನ್‌ ಅವರು ಕಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನು ಪಡೆದರು.
ಒಡಿಶಾ ಅಂಚೆ ವೃತ್ತದ  ಬನಶ್ರೀ ಪಟ್ನಾಯಕ್ ಅವರು ಹಿರಿಯರ ವಿಭಾಗದ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನುವಿಶೇಷ ಬಹುಮಾನವನ್ನು ಲಕ್ಷ್ಮಣ್‌ ದಾಸ್‌, ಕಿರಿಯರ ವಿಭಾಗದ ತಬಲ ವಾದನದಲ್ಲಿ ಅಮನ್‌ ಕುಮಾರ್‌ ದಾಸ್‌ ಪ್ರಥಮ ಬಹುಮಾನ ಹಾಗೂ ಹಿರಿಯರ ವಿಭಾಗದದಲ್ಲಿ  ಪಡೆದರು.
ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿಭಾರತದಾದ್ಯಂತದ 21 ಅಂಚೆ ವೃತ್ತಗಳ 335 ಅಂಚೆ ನೌಕರರು ಭಾಗವಹಿಸಿದ್ದು ಅಂಚೆ ನೌಕರರಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ.
Continue Reading

Trending

error: Content is protected !!