Connect with us

Chikmagalur

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹14.67 ಲಕ್ಷ ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

Published

on

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹14.67 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಫಿರ್ಯಾದುದಾರರು 2025ರ ಸೆಪ್ಟೆಂಬರ್ 18ರಂದು ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಟ್ರೇಡಿಂಗ್ ಕುರಿತು ಜಾಹೀರಾತು ಕಂಡು ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ತೆರೆದ ಅಪ್ಲಿಕೇಶನ್ ಮೂಲಕ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಲಾಗಿದೆ.

ಮೊದಲ ಹಂತದಲ್ಲಿ 200 ಡಾಲರ್ ನೋಂದಣಿ ಶುಲ್ಕ ಸೇರಿದಂತೆ ₹26,600 ಪಾವತಿಸಿದ ಬಳಿಕ, ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿದ ವರುಣ್ ಖನ್ನಾ ಎಂಬ ವ್ಯಕ್ತಿ, ಬ್ಯಾಂಕ್ ಠೇವಣಿಗಿಂತ ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಹೆಚ್ಚಿನ ಲಾಭ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಫಿರ್ಯಾದುದಾರರು ಆರಂಭದಲ್ಲಿ ₹25,000 ಹಾಗೂ ನಂತರ ಆರ್‌ಟಿಜಿಎಸ್ ಮೂಲಕ ₹6 ಲಕ್ಷ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.

ಬಳಿಕ ಯುಕೆಯಲ್ಲಿ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಸಿಗುತ್ತದೆ ಎಂದು ಹೇಳಿ ಮತ್ತಷ್ಟು ₹5 ಲಕ್ಷ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಹಣವಿಲ್ಲ ಎಂದು ತಿಳಿಸಿದಾಗ, ವಿವಿಧ ಖಾತೆಗಳಿಂದ ₹5,94,085 ಫಿರ್ಯಾದುದಾರರ ಖಾತೆಗೆ ಜಮೆ ಮಾಡಿ ಅದನ್ನೂ ಮತ್ತೆ ತಾವು ಸೂಚಿಸಿದ ಖಾತೆಗಳಿಗೆ ಹೂಡಿಕೆ ಮಾಡುವಂತೆ ಮಾಡಲಾಗಿದೆ.

ನಂತರ ಟ್ರೇಡಿಂಗ್‌ನಲ್ಲಿ ನಷ್ಟವಾಗಿದೆ ಎಂದು ಹೇಳಿ ಹಣವನ್ನು ಹಿಂದಿರುಗಿಸದೇ ಸತಾಯಿಸಿದ್ದಾರೆ. ಅನುಮಾನಗೊಂಡ ಫಿರ್ಯಾದುದಾರರು ಸ್ನೇಹಿತರೊಂದಿಗೆ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಒಟ್ಟಾರೆ VIXO Traders ಹಾಗೂ QUATINO FX 727283 ಎಂಬ ಹೆಸರಿನ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಒಟ್ಟು ₹14,67,241 ಹಣ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ರಾಣಾ ಪ್ರತಾಪ್ ಎಂಬ ವ್ಯಕ್ತಿ ಮೊಬೈಲ್ ಮೂಲಕ ಕರೆ ಮಾಡಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 40/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Continue Reading

Chikmagalur

ನಾರಾಯಣಮೂರ್ತಿ ದಂಪತಿ ಹೆಸರಲ್ಲಿ ವಂಚನೆ: ಆನ್‌ಲೈನ್ ಟ್ರೇಡಿಂಗ್ ನಂಬಿ ₹14.6 ಲಕ್ಷ ಕಳೆದುಕೊಂಡ ಚಿಕ್ಕಮಗಳೂರು ವ್ಯಕ್ತಿ!

Published

on

ಚಿಕ್ಕಮಗಳೂರು: ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆನ್‌ಲೈನ್ ಹೂಡಿಕೆ ವಂಚನೆ ಬೆಳಕಿಗೆ ಬಂದಿದ್ದು, ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚಲಾಗಿದೆ. ಫೇಸ್‌ಬುಕ್‌ನಲ್ಲಿ ಈ ದಂಪತಿಯು ಟ್ರೇಡಿಂಗ್ ಬಗ್ಗೆ ಭಾಷಣ ಮಾಡುತ್ತಿರುವಂತೆ ಬಿಂಬಿಸಲಾಗಿದ್ದ ನಕಲಿ ಜಾಹೀರಾತು ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹14,67,241 ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಆಪ್ ಓಪನ್ ಆಗಿದ್ದು, ತದನಂತರ ವರುಣ್ ಖನ್ನಾ ಎಂಬ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಬ್ಯಾಂಕ್ ಎಫ್‌ಡಿಗಿಂತಲೂ ಮೂರು ಪಟ್ಟು ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಿದ್ದಾರೆ.

ಆರಂಭದಲ್ಲಿ ರಿಜಿಸ್ಟ್ರೇಷನ್ ಶುಲ್ಕವಾಗಿ ₹26,600 ಪಾವತಿಸಿಕೊಂಡ ವಂಚಕರು, ನಂತರ ಹಂತ ಹಂತವಾಗಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು VIXO ಟ್ರೇಡರ್ಸ್ ಹಾಗೂ QUATINO FX ಕಂಪನಿಗಳ ವಿವಿಧ ಖಾತೆಗಳಿಗೆ ಆರ್‌ಟಿಜಿಎಸ್‌ ಮತ್ತು ಯುಪಿಐ ಮೂಲಕ ಬರೋಬ್ಬರಿ 14.67 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹಣವನ್ನು ಯುಕೆಯ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತರು ಅನುಮಾನಗೊಂಡು ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಿದಾಗ, ಕಂಪನಿಯು ನಷ್ಟದಲ್ಲಿದೆ ಎಂದು ಹೇಳಿ ವಂಚನೆ ಎಸಗಿದ್ದಾರೆ. ಇಷ್ಟಾದರೂ ರಾಣಾ ಪ್ರತಾಪ್ ಎಂಬ ವ್ಯಕ್ತಿಯು ಮೊಬೈಲ್‌ನಿಂದ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಹಾಕುವಂತೆ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Chikmagalur

ಕೌಟುಂಬಿಕ ದೌರ್ಜನ್ಯ ಮಾನಸಿಕ ದೈಹಿಕ ವರದಕ್ಷಿಣೆ ಕಿರುಕುಳ ಪ್ರಕರಣ ಮಹಿಳಾ ಪೊಲೀಸ್ ಠಾಣೆ:

Published

on

ಚಿಕ್ಕಮಗಳೂರು : ದಿನಾಂಕ 19/07/2026 ರಂದು ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಢಿದ ಸಾರಾಂಶವೇನೆಂಧರೆ ನಾನು ಈಗ್ಗೆ 02 ವರ್ಷಗಳ ಹಿಂದೆ ನಮ್ಮ ಸಂಬಂಧಿಕರಾದ ಸುಹಿಲ್ ತಾಜ್ ಮತ್ತು ರಿಯಾಜ್ ರವರುಗಳು ಮತ್ತು ತಂದೆ ಅಕ್ರಂ ಪಾಷ ಮತ್ತು ತಾಯಿ ರೇಷ್ಮಾ ತಾಜ್ ರವರುಗಳು ಸೇರಿ ನನ್ನ ವಿವಾಹ ಮಾಡಲು, ಚಿಕ್ಕಮಗಳೂರು ನಗರದ ಉಪ್ಪಳ್ಳಿ ವಾಸಿ ಅಬ್ದುಲ್ ವಾಹಬ್ ಅವರ ಮಗ ಸೈಯದ್ ಮಹಮ್ಮದ್ ಸಾದಿಖ್ ರವರನ್ನು ಅವರ ಸಂಬಂಧಿಕರಾದ ಸೈದಾ ಫಿರ್ದೋಸ್ ಮತ್ತು ಅವರ ಗಂಡ ಸೈಯದ್ ರಾಝಿಖ್ ಹಾಗೂ ನನ್ನ ಗಂಡನ ತಂದೆ ಸೈಯದ್ ಅಬ್ಬುಲ್ ವಹಾಬ್, ಅವರ ತಾಯಿ ಐಶಾ ಸಿದ್ದಿಖಾ ರವರುಗಳ ಸಮಕ್ಷಮ ಮದುವೆ ಮಾತುಕತೆ ಮಾಡಿ ಇವರುಗಳೆಲ್ಲರ ಒಪ್ಪಿಗೆಯಂತೆ, ನನ್ನ ಮದುವೆಯನ್ನು ದಿನಾಂಕ:-25.08.2024 ರಂದು ಚಿಕ್ಕಮಗಳೂರು ನಗರದ ಪುರ್ಖನಿಯಾ ಶಾಧಿಮಹಲ್ ನಲ್ಲಿ ನನಗೆ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಮಾಡಿಸಿ ಮತ್ತು ನನ್ನ ಗಂಡನಿಗೂ ಸಹ ಮದುವೆ ಸಂದರ್ಭದಲ್ಲಿ 30 ಗ್ರಾಂ ಚಿನ್ನಾಭರಣಗಳನ್ನು ಹಾಗೂ 2,00,000 ಲಕ್ಷ ಹಣವನ್ನು ವರದಕ್ಷಿಣೆಯಾಗಿ ನೀಡಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿರುತ್ತಾರೆ.

ನನ್ನ ಗಂಡ ಮದುವೆಗೂ ಮೊದಲೇ ದುಬೈನಲ್ಲಿ ಬ್ಯಾಂಕಿಂಗ್ ಕೆಲಸ ಮಾಡಿಕೊಂಡಿದ್ದು, ಅಲ್ಲಿ ನನ್ನ ಗಂಡನ ಅಕ್ಕ ಸೈದಾ ಫಿರ್ದೋಸ್, ಭಾವ ಸೈಯದ್ ರಾಝಿಖ್ ರವರು ಸಹ ಕೆಲಸ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ನನ್ನನ್ನು ಸಹ ದುಬೈಗೆ ಕರೆದುಕೊಂಡು ಹೋಗಿ ನನಗೂ ಕೆಲಸಕ್ಕೆ ಸೇರಿಸುತ್ತೇನೆಂದು ಹೇಳಿರುತ್ತಾರೆ. ನಾನು ಮದುವೆಯಾದ 22 ದಿನಗಳವರೆಗೆ ನನ್ನ ಗಂಡನ ಮನೆ ಚಿಕ್ಕಮಗಳೂರು ನಗರದ ವಿಜಯಪುರ ನೂರಾನಿ ಮಸೀದಿ ಹತ್ತಿರ ಇರುವ ಮನೆಯಲ್ಲಿ ನನ್ನ ಗಂಡ ಸೈಯದ್ ಮೊಹಮ್ಮದ್ ಸಾದಿಖ್ ಮಾವ-ಅಬ್ಬುಲ್ ವಾಹಬ್ ಅತ್ತೆ ಐಶಾ ಸಿದ್ದಿಖಾ ಮತ್ತು ನನ್ನ ಗಂಡನ ಅಕ್ಕ ಸೈದಾ ಫರ್ದೋಸ್ ಹಾಗೂ ಇವಳ ಗಂಡ ಸೈಯದ್ ರಾಝಿಖ್ ರವರೊಂದಿಗೆ ವಾಸವಾಗಿದ್ದೆನು ಮದುವೆಯಾದ ಒಂದು ವಾರಗಳವರೆಗೆ ನನ್ನನ್ನು ಚನ್ನಾಗಿ ನೋಡಿಕೊಂಡರು ನಂತರ ನನ್ನ ಗಂಡ ನಾನು ದುಬೈಗೆ ಹೋಗಬೇಕು ಅಲ್ಲಿ ಬೇರೆ ಮನೆ ಮಾಡಬೇಕು ನಿನ್ನನ್ನು ಕರೆದುಕೊಂಡು ಹೋಗಬೇಕು ನಿಮ್ಮ ತಂದೆಯಿಂದ ನನಗೆ 10 ಲಕ್ಷ ಹಣ ವರದಕ್ಷಿಣೆ ಕೊಡಿಸು ಎಂದು ಕೇಳಿದರು ನಾನು ಈ ವಿಷಯವನ್ನು ನನ್ನ ಅತ್ತೆ, ಮಾವ ಮತ್ತು ನನ್ನ ಗಂಡನ ಅಕ್ಕ ಮತ್ತು ಭಾವ ರವರಿಗೆ ತಿಳಿಸಿದೆನ್ನು ಅವರು ಸಹ ನೀನು ನಿಮ್ಮ ತಂದೆಗೆ ಒಬ್ಬಳೇ ಮಗಳು ಇರುತ್ತೀಯಾ ನಿನ್ನ ಗಂಡ ಕೇಳಿದ ಹಣವನ್ನು ತಂದೆ ಮನೆಯಿಂದ ತಂದುಕೊಡು ಎಂದು ಹೇಳಿದರು.

ನಾನು ನಮ್ಮ ತಂದೆ ಈಗಾಗಲೇ ವರದಕ್ಷಿಣೆ ಕೊಟ್ಟು ಸುಮಾರು 2500000/- ಲಕ್ಷ ಹಣ ಖರ್ಚು ಮಾಡಿ ಮದುವೆ ಮಾಡಿದಾರೆ ನಾನು ಹೇಗೇ ಕೇಳಲಿ ಎಂದು ಹೇಳಿದೆನು ಆಗ ಎಲ್ಲರು ನೀನು ಹಣ ತರದಿದ್ದರೆ ನಿಮ್ಮ ತಂದೆ ಮನೆಗೆ ಹೋಗು ಎಂದು ಜಗಳ ಮಾಡಿ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಮತ್ತು ಆ ದಿನ ನನಗೆ ಊಟ ಸಹ ಕೊಡದೆ ತೊಂದರೆ ನೀಡಿರುತ್ತಾರೆ.ನಾನು ಈ ವಿಷಯವನ್ನು ನಮ್ಮ ತಂದೆ-ತಾಯಿಗೆ ಹೇಳಿದಾಗ ಸಂಸಾರದ ವಿಚಾರ ಹೇಗಾದರು ಮಾಡಿ ಅನುಸರಿಸಿಕೊಂಡು ಹೋಗು ಎಂದು ಹೇಳಿದರು. ಒಂದು ವಾರದ ನಂತರ ನನ್ನ ಗಂಡ ಮತ್ತು ನನ್ನ ಗಂಡನ ಅಕ್ಕ ಮತ್ತು ಆಕೆಯ ಗಂಡ ದುಬೈಗೆ ಹೋಗಿರುತ್ತಾರೆ. ಹೋಗುವಾಗ ನೀನು ನಿಮ್ಮ ತಂದೆಯಿಂದ ಹಣ ತೆಗೆದುಕೊಂಡು ಮೇಲೆ ನಮಗೆ ತಿಳಿಸು ನಾನು ನಿನಗೆ ದುಬೈಗೆ ಬರಲು ಹೇಳುತ್ತೇನೆ ಎಂದು ಹೇಳಿ ಹೋಗಿರುತ್ತಾರೆ. ನಾನು ನನ್ನ ಗಂಡನ ಮನೆಯಲ್ಲಿಯೇ 06 ತಿಂಗಳು ನಮ್ಮ ಅತ್ತೆ ಮಾವನ ಜೋತೆ ವಾಸವಾಗಿರುತ್ತೇನೆ. ಆ ಸಮಯದಲ್ಲಿ ನಮ್ಮ ಅತ್ತೆ ನನ್ನೊಂದಿಗೆ ಗಲಾಟೆ ಮಾಡಿ ಕೈಯಿಂದ ಹೊಡೆದಿರುತ್ತಾರೆ. ನನ್ನ ಗಂಡ ನನಗೆ ಯಾವುದೇ ಖರ್ಚು ನೋಡಿಕೊಂಡಿರುವುದಿಲ್ಲ. 2025 ನೇ ಜನವರಿ ತಿಂಗಳಿನಲ್ಲಿ ನಾನು ನಮ್ಮ ತಂದೆಯಿಂದ ಸ್ವಲ್ಪ ಹಣ ಪಡೆದುಕೊಂಡು ನನ್ನ ಗಂಡ ಇರುವ ಜಾಗಕ್ಕೆ ದುಬೈಗೆ ಹೋಗಿರುತ್ತೇನೆ. ದುಬೈನಲ್ಲಿ ನನ್ನ ಗಂಡನ ಅಕ್ಕನ ಮನೆಯಲ್ಲಿ 03 ತಿಂಗಳು ವಾಸವಿರುತ್ತೇನೆ. ಮದುವೆಯ ಸಮಯದಲ್ಲಿ ನನ್ನನ್ನು ದುಬೈಯಲ್ಲಿ ಕೆಲಸಕ್ಕೆ ಸೇರಿಸುತ್ತೇನೆಂದು ನನ್ನ ಗಂಡ ಮತ್ತು ಅವರ ಕುಟುಂಬದವರು ಹೇಳಿದ್ದು, ನಾನು ನನ್ನನ್ನು ಕೆಲಸಕ್ಕೆ ಸೇರಿಸಿ ಎಂದು ಕೇಳಿದಾಗ ನಿನಗೆ ಯಾವ ಕೆಲಸಕ್ಕೂ ಸೇರಿಸುವುದಿಲ್ಲ ನೀನು ನಾವು ಹೇಳಿದ ಹಾಗೆ ವರದಕ್ಷಿಣೆ ತಂದಿಲ್ಲ ಎಂದು ಹೇಳಿ ವಾಪಸ್ಸ್ ಭಾರತಕ್ಕೆ ಕಳುಹಿಸಿರುತ್ತಾರೆ.

ನಾನು ಭಾರತಕ್ಕೆ ಬಂದು ನನ್ನ ಗಂಡನ ಮನೆಗೆ ಹೋಗಿರುತ್ತೇನೆ. ನನ್ನ ಅತ್ತೆ ಮಾವ ಆ ಸಮಯದಲ್ಲಿ ನನ್ನೊಂದಿಗೆ ಜಗಳ ಮಾಡಿ ನಿಮ್ಮ ತಂದೆ ಮನೆಯಿಂದ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಬೈದು ಮಾನಸಿಕವಾಗಿ ಹಿಂಸೆ ನೀಡಿ ನನಗೆ ಊಟ, ತಿಂಡಿ ಮಾಡಲು ಸಹ ಬಿಡುತ್ತಿರಲ್ಲಿಲ್ಲ. ಇದರಿಂದ ಮನ ನೊಂದ ನಾನು ಮತ್ತೆ ಈ ವಿಷಯವನ್ನು ನನ್ನ ಗಂಡನಿಗೆ ಮತ್ತು ಅವರ ಅಕ್ಕ ಭಾವ ನಿಗೆ ತಿಳಿಸಿದಾಗ ನೀನು ನಾವು ಮೊದಲೇ ಹೇಳಿದ ಹಾಗೆ 10 ಲಕ್ಷ ಹಣ ತೆಗೆದುಕೊಂಡು ಬಂದು ನಮ್ಮ ಮನೆಯಲ್ಲಿ ಇರು ಇಲ್ಲವಾದಲ್ಲಿ ಮನೆ ಖಾಲಿ ಮಾಡಿ ಎಲ್ಲಿಯಾದರೂ ಹೋಗು ಎಂದು ಹೇಳಿದರು ನಾನು ಅನಿವಾರ್ಯವಾಗಿ ನಮ್ಮ ತಂದೆ ಮನೆ ಹೋಗಿರುತ್ತೇನೆ. ಸುಮಾರು ಒಂದುವರೆ ವರ್ಷಗಳಾದರು ಸಹಃ ನನ್ನ ಗಂಡ ನನಗೆ ಸರಿಯಾಗಿ ಫೋನ್ ಮಾಡಿ ಮಾತನಾಡಿಸಿರುವುದಿಲ್ಲ ಮತ್ತು ನಾನು ಫೋನ್ ಮಾಡಿದರು ಕರೆ ಸ್ವೀಕರಿಸದೆ ಮತ್ತು ಕೆಲವೊಂದು ಸಮಯ ಸ್ವೀಕರಿಸಿ ಸರಿಯಾಗಿ ಮಾತನಾಡದೇ ಉಡಫೆಯಿಂದ ವರ್ತಿಸುತ್ತಿದ್ದರು.

ನನಗೆ ಯಾವುದೇ ಹಣವನ್ನು ಜೀವನಕ್ಕೆ ನೀಡಿರುವುದಿಲ್ಲ ನನ್ನ ತಂದೆ ತಾಯಿಗಳೇ ನನ್ನನ್ನು ನೋಡಿಕೊಂಡಿರುತ್ತಾರೆ.ಈಗ್ಗೆ ಸುಮಾರು 03 ತಿಂಗಳ ಹಿಂದೆ ನನ್ನ ಗಂಡ ದುಬೈಯಿಂದ ಚಿಕ್ಕಮಗಳೂರಿಗೆ ಬಂದಿದ್ದು ವಿಚಾರ ತಿಳಿದ ನಾನು ಅವರ ಮನೆಯ ಹತ್ತಿರ ಹೋದಾಗ ನನ್ನ ಗಂಡ ಮತ್ತು ನಮ್ಮ ಅತ್ತೆ-ಮಾವ ರವರುಗಳು ನೀನು ನಾವು ಹೇಳಿದ ವರದಕ್ಷಿಣೆ ಹಣ ತೆಗೆದು ಕೊಂಡು ನಮ್ಮ ಮನೆಗೆ ಬಾ ಇಲ್ಲವಾದರೆ, ಮನೆಗೆ ಬರಬೇಡ ಹೋಗು ಎಂದು ಬೈದು ಕಳುಹಿಸಿರುತ್ತಾರೆ. ಇಂದಲ್ಲ ನಾಳೆ ನನ್ನ ಗಂಡನ ಕುಟುಂಬದವರು ಸರಿಯಾಗಬಹುದೆಂದು ನಾನು ಪುನಃ ನಮ್ಮ ತಂದೆ ಮನೆಗೆ ಬಂದು ಮನೆಯಲ್ಲಿ ವಿಚಾರ ತಿಳಿಸಿ ಅವರ ಜೋತೆಯೇ ವಾಸವಿದ್ದೆನು, 03 ತಿಂಗಳಾದರು ನನ್ನ ಗಂಡ ನನ್ನೊಂದಿಗೆ ಯಾವುದೇ ರೀತಿಯ ಜವಬ್ದಾರಿ ತೆಗೆದು ಕೊಳ್ಳದೆ ಇದ್ದರಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ನನ್ನ ಗಂಡ, ಅತ್ತೆ, ಮಾವ ಮತ್ತು ನನ್ನ ಗಂಡನ ಅಕ್ಕ ಮತ್ತು ಭಾವ ನ ವಿರುದ್ದ ದೂರು ನಿಡಿರುತ್ತೇನೆ ನಂತರ ಪೊಲೀಸರು ಮತ್ತು ನಮ್ಮ ಮತ್ತು ಅವರ ಕುಟುಂಬದವರನ್ನು ಕರೆಸಿ ವಿಚಾರ ಮಾಡಿ ನನ್ನ ಗಂಡನಿಗೆ ತಿಳುವಳಿಕೆ ಹೇಳಿ ಹೆಂಡತಿಯನ್ನು ಸರಿಯಾಗಿ ನೊಡಿಕೊಳ್ಳುವಂತೆ ತಿಳಿಸಿದ್ದು ನಂತರ ನನ್ನ ಗಂಡ ನನ್ನ ಜೋತೆ ನಮ್ಮ ತಂದೆ ಮನೆಗೆ ಬಂದು 03 ದಿನಗಳ ಕಾಲ ಇದ್ದು, ಆ ಸಮಯದಲ್ಲಿಯೂ ಸಹ ನಮ್ಮ ಮನೆಯಲ್ಲಿ ಊಟ ಮಾಡಿರುವುದಿಲ್ಲ ಮತ್ತು ನನ್ನೊಂದಿಗೆ ಸಾಂಸಾರಿಕ ಜೀವನ ಮಾಡಿರುವುದಿಲ್ಲ ನಾನು ಸಾಂಸಾರಿಕ ಜೀವನವನ್ನು ನನ್ನೊಂದಿಗೆ ನಡೆಸಿ ಕೊಂಡು ಹೋಗಿ ಎಂದು ವಿನಯವಾಗಿ ಕೇಳಿದಾಗ ನಾನು ಮತ್ತು ನಮ್ಮ ಕುಟುಂಬದವರು ತೀರ್ಮಾನ ಮಾಡಿದೇವೆ ನನಗೆ ಯಾವುದೇ ಕೆಲಸ ಇಲ್ಲ ಮತ್ತೆ ನಾನು ದುಬೈಗೆ ಹೋಗುವುದಿಲ್ಲ ಮತ್ತು ನನಗೆ ಸಾಲ ಇದೆ. ಎಲ್ಲಾವೂ ಸರಿಯಾಗ ಬೇಕಾದರೆ ನೀನು ನಿಮ್ಮ ತಂದೆಯ ಬಳಿ ಕೇಳಿ 50 ಲಕ್ಷ ಹಣ ಕೊಡಿಸು. ಕೇಳಿದ ಹಣ ಕೊಟ್ಟರೆ ನಿನ್ನೊಂದಿಗೆ ಸಾಂಸಾರಿಕ ಜೀವನ ಮಾಡುತ್ತೇನೆ ಇಲ್ಲವಾದಲ್ಲಿ ನನಗೆ ನಿನ್ನೊಂದಿಗೆ ಜೀವನ ಮಾಡಲು ಇಷ್ಟ ಇರುವುದಿಲ್ಲ ಎಂದು ಹೇಳಿ ಹೋಗಿರುತ್ತಾನೆ.


ಆದ್ದರಿಂದ ನನಗೆ ವರದಕ್ಷಿಣೆ ಕಿರುಕುಳ ನೀಡಿ ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುವ ನನ್ನ ಗಂಡ ಸೈಯದ್ ಮೊಹಮ್ಮದ್ ಸಾದಿಖ್ ಮಾವ-ಅಬ್ಬುಲ್ ವಾಹಬ್ ಅತ್ತೆ ಐಶಾ ಸಿದ್ದಿಖಾ ಮತ್ತು ನನ್ನ ಗಂಡನ ಅಕ್ಕ ಸೈದಾ ಫರ್ದೋಸ್ ಹಾಗೂ ಇವಳ ಗಂಡ ಸೈಯದ್ ರಾಝಿಖ್ ರವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.ಇತ್ಯಾದಿ

Continue Reading

Chikmagalur

ಚಿಕ್ಕಮಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಗಂಭೀರ ಗಾಯ

Published

on

ಚಿಕ್ಕಮಗಳೂರು: ನಗರದ ಹೃದಯಭಾಗದ ಎಂ.ಜಿ. ರಸ್ತೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಲಾಖೆಯ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಹೇಮ ಅವರು ಗಾಯಗೊಂಡ ಅಧಿಕಾರಿಯಾಗಿದ್ದಾರೆ. ಜುಲೈ 17ರ ಶುಕ್ರವಾರ ಮುಂಜಾನೆ ‘ಗುಡ್ ಮಾರ್ನಿಂಗ್ ಬೀಟ್’ ಕರ್ತವ್ಯದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ವಿವರ: ಶುಕ್ರವಾರ ಮುಂಜಾನೆ 5.00 ರಿಂದ 8.00 ಗಂಟೆಯವರೆಗೆ ಎಂ.ಜಿ. ರಸ್ತೆಯಲ್ಲಿ ಬೀಟ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಎಸ್‌ಐ ಹೇಮ ಅವರು, ಬೆಳಗ್ಗೆ 6.45ರ ಸುಮಾರಿಗೆ ಇಲಾಖೆಯ ಸ್ಕೂಟಿ (KA 02 G 3432) ಯಲ್ಲಿ ಹನುಮಂತಪ್ಪ ಸರ್ಕಲ್ ಕಡೆಯಿಂದ ಪೋಸ್ಟ್ ಆಫೀಸ್ ಸರ್ಕಲ್ ಕಡೆಗೆ ರೌಂಡ್ಸ್ ಮಾಡುತ್ತಿದ್ದರು. ವಿನಾಯಕ ಶಾಪಿಂಗ್ ಸೆಂಟರ್ ಮುಂಭಾಗ ತಲುಪುತ್ತಿದ್ದಂತೆ, ಮಾರ್ಕೆಟ್ ರಸ್ತೆಯಿಂದ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಧಾವಿಸಿ ಬಂದ ಬೊಲೆರೊ ಜೀಪ್ (KA 29 A 0554) ಚಾಲಕ ನೇರವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಪಿಎಸ್‌ಐ ಹೇಮ ಅವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲಗಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ತಕ್ಷಣ ಸ್ಥಳದಲ್ಲಿದ್ದ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಗಿರೀಶ್ ಹಾಗೂ ಸಾರ್ವಜನಿಕರು ಅಪಘಾತ ಎಸಗಿದ ಜೀಪ್‌ನಲ್ಲೇ ಗಾಯಾಳುವನ್ನು ಚಿಕ್ಕಮಗಳೂರು ಸರ್ಕಾರಿ ಎಂ.ಜಿ. ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಈ ಕುರಿತು ಗಾಯಾಳು ಪಿಎಸ್‌ಐ ಸಹೋದರ ಚಂದ್ರಶೇಖರ್ ಹೆಚ್.ಎನ್. ಅವರು ಜುಲೈ 18ರಂದು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಬೊಲೆರೊ ಜೀಪ್ ಚಾಲಕನ ವಿರುದ್ಧ ಭಾರತಿಯ ನ್ಯಾಯ ಸಂಹಿತೆ (BNS) ಕಲಂ 281 ಮತ್ತು 125(ಎ) ಅಡಿಯಲ್ಲಿ ಮೊಕದ್ದಮೆ (ಮೊ.ನಂ: 73/2026) ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Continue Reading

Trending

error: Content is protected !!