Hassan
೩ನೇ ದಿನಕ್ಕೆ ಕಾಲಿಟ್ಟ ಗ್ರಾಮಿಣ ಅಂಚೆ ನೌಕರರ ಪ್ರತಿಭಟನೆ
ಹಾಸನ: ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಮಾಡುವಂತೆ ಹಾಗೂ ಕಮಲೇಶನ್ ಕಮಿಟಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಮುಖ್ಯ ಅಂಚೆ ಕಛೇರಿ ಮುಂದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಅನಿರ್ಧಿಷ್ಟವಧಿ ಧರಣಿ ೩ನೇ ದಿವಸಕ್ಕೆ ಕಾಲಿಟ್ಟಿದೆ.
ಇದೆ ಸಂದರ್ಭದಲ್ಲಿ ಎ.ಐ.ಜಿ.ಡಿ.ಎಸ್.ಯು. ಸಂಘಟನೆಯ ಜಗದೀಶ್ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಮಾಡುವಂತೆ ಹಾಗೂ ಕಮಲೇಶನ್ ಕಮಿಟಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಹಾಸನದ ಪ್ರಧಾನ ಅಂಚೆ ಕಛೇರಿಯ ಮುಂದೆ ವಿಭಾಗದ ನೂರಾರು. ಗ್ರಾಮೀಣ ಅಂಚೆ ನೌಕರರು ಎ.ಐ.ಜಿ.ಡಿ.ಎಸ್.ಯು.ಹಾಗೂ ಎನ್.ಯು.ಜಿ.ಡಿ.ಎಸ್.ಸದಸ್ಯರಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖ ಬೇಡಿಕೆಗಳೆಂದರೇ ೮ ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ೧೨-೨೪-೩೬ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರೀಮೆಂಟ್ ನೀಡಲು ಗಮನವಹಿಸಬೇಕು ಎಂದರು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಗುಂಪು ಇನ್ಸೂರೆನ್ಸ್ ಕವರೇಜಿ ರೂ ೫ ಲಕ್ಷದವರೆಗೆ ಹೆಚ್ಚಿಸಬೇಕು ಮತ್ತು ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಜಿಡಿಎಸ್ ಗ್ರಾಚ್ಯುಟಿ ಹಣವನ್ನು ರೂ ೫ ಲಕ್ಷಗಳವರೆಗೆ ಹೆಚ್ಚಿಸಿ ೧೮೦ ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಬೇಡಿಕೆ ಆಗಿದೆ ಎಂದು ತಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಇದೆ ವೇಳೆ ಎ.ಐ.ಜಿ.ಡಿ.ಎಸ್.ಯು.ಸಂಘಟನೆಯ ಅಧ್ಯಕ್ಷರು. ಜಿ.ಬಿ. ಕಾಳಿಗೇಗೌಡ, ಕಾರ್ಯದರ್ಶಿ ಕೆ.ಜೆ. ಶಿವಾಜಿ, ಕಾರ್ಯಾಧ್ಯಕ್ಷರು ಹೆಚ್.ಇ. ಜಯಣ್ಣ, ಸಂಘಟನಾ ಕಾರ್ಯದರ್ಶಿ ದಿನೇಶ್, ಮಲ್ಲೇಶ್, ಸತೀಶ್, ವಾಸು, ವಿನೋದ್ ಕುಮಾರ್, ಮಧು, ಎನ್.ಯು.ಜಿ.ಡಿ.ಎಸ್.ಯು.ನ. ವಲಯ ಕಾರ್ಯದರ್ಶಿ ಇತರರು ಭಾಗವಹಿಸಿದ್ದರು.
Hassan
ಮೊದಲನೇ ಹಂತದ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆ
ಹಾಸನ
ಮೊದಲನೇ ಹಂತದ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ
ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆ
ಮಧ್ಯಾಹ್ನ 12 ಗಂಟೆಗೆ ಸಕಲೇಶಪುರಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ
ಸಕಲೇಶಪುರ ತಾಲೂಕಿನ ದೊಡ್ಡನಾಗರದಲ್ಲಿ ಚಾಲನೆ
ದೊಡ್ಡನಾಗರದ ವಿತರಣಾ ತೊಟ್ಟಿ 3 ರಲ್ಲಿ ಚಾಲನೆ ನೀಡಲಿರೋ ಸಿದ್ದರಾಮಯ್ಯ
ನೀರೆತ್ತುವ ಪಂಪ್ ಹಾಗೂ ಮೋಟಾರ್ ಗಳಿಗೆ ಚಾಲನೆ
ನೀರನ್ನೆತ್ತುವ ಏಳು ವಿಯರ್ ಗಳಿಗೆ ಇದೇ ಸ್ಥಳದಲ್ಲಿ ಚಾಲನೆ
ಏಳು ಸಚಿವರಿಂದ ಏಳು ವಿಯರ್ ಗಳಿಗೆ ಚಾಲನೆ ನೀಡೋದಕ್ಕೆ ಸಿದ್ಧತೆ
ಬೆಳಗ್ಗೆಯಿಂದಲೂ ಸ್ಥಳದಲ್ಲಿ ಹೋಮ ಹವನ
ಇಡೀ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರೋ ಡಿಸಿಎಂ ಡಿಕೆ ಶಿವಕುಮಾರ್
ನಿನ್ನೆಯೇ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಿರೋ ಡಿಕೆ ಶಿವಕುಮಾರ್
ಹೋಮಹವನದಲ್ಲಿ ಭಾಗಿಯಾಗಲಿರೋ ಡಿಸಿಎಂ
ನಿನ್ನೆ ಸಂಜೆಯೇ ಪೂಜೆಯಲ್ಲಿ ಭಾಗಿಯಾಗಿ ಸಂಕಲ್ಪವನ್ನ ಮಾಡಿರೋ ಡಿಕೆಶಿ
ಬಳಿಕ ದೊಡ್ಡನಾಗರದಿಂದ ಹೆಬ್ಬನಹಳ್ಳಿಗೆ ಬರಲಿರೋ ಸಿಎಂ, ಡಿಸಿಎಂ, ಸಚಿವರು
ಹೆಬ್ಬನಹಳ್ಳಿಯಲ್ಲಿ ಗಂಗೆಗೆ ಬಾಗಿನ ಅರ್ಪಣೆ
ಏಳು ವಿಯರ್ ಗಳ ಮೂಲಕ ಪಂಪ್ ಮಾಡಿದ್ದ ನೀರಿಗೆ ಬಾಗಿನ ಅರ್ಪಣೆ
ಹೆಬ್ಬನಹಳ್ಳಿಯ ವಿತರಣಾ ತೊಟ್ಟಿ 4 ರಲ್ಲಿ ಬಾಗಿನ ಅರ್ಪಣೆ
ಬಾಗಿನ ಅರ್ಪಣೆ ಬಳಿಕ ಪಕ್ಕದಲ್ಲಿಯೇ ಬೃಹತ್ ಬಹಿರಂಗ ಸಭೆ
ಸಭೆಯ ಮೂಲಕ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಮೊದಲನೇ ಹಂತದ ಕಾಮಗಾರಿಯ ಲೋಕಾರ್ಪಣೆ
ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿರುವ ಬಹಿರಂಗ ಸಭೆ
ಇದೇ ಜಾಗದಲ್ಲಿ ಸಿದ್ದಗೊಂಡಿರುವ ಬೃಹತ್ ವೇದಿಕೆ
ಸಭೆಯಲ್ಲಿ ಸಚಿವರಾದ ಕೆ.ಎನ್. ರಾಜಣ್ಣ, ಕೆ.ಜೆ.ಜಾರ್ಜ್, ಎನ್.ಎಸ್.ಬೋಸರಾಜ್ ಸೇರಿದಂತೆ ಹಲವರು ಭಾಗಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಸ್ಥಳಿಯ ಬಿಜೆಪಿ ಶಾಸಕ ಸಿಮೆಂಟ್ ಮಂಜು
ಉದ್ದೇಶಿತ ಕಾಮಗಾರಿ ಫಲಾನುಭವಿ ಜಿಲ್ಲೆಗಳ ಎಲ್ಲಾ ಶಾಸಕರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ
ಬೃಹತ್ ಸಭೆಗಾಗಿ ಅದ್ದೂರಿಯಾದ ವೇದಿಕೆ ಸಿದ್ದ ಮಾಡಿರೋ ಸರ್ಕಾರ
Hassan
ಸೆ.06 ರಂದು ಕಾರ್ಜುವಳ್ಳಿ ಹಿರೇಮಠದಲ್ಲಿ ಸ್ವರ್ಣಗೌರಿ ವ್ರತ ಹಾಗೂ ಬಾಗಿನ ವಿತರಣೆ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಸೆ.06ರಂದು ಸ್ವರ್ಣಗೌರಿ ಹಬ್ಬದ ಅಂಗವಾಗಿ ಸ್ವರ್ಣಗೌರಿ ವ್ರತ ಮಾಡಲಾಗುತ್ತದೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಗುತ್ತದೆ ಎಂದು ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಭಾದ್ರಪದ ಮಾಸದ ಶುದ್ಧ ತದಿಗೆಯಂದು ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈಬಾರಿಯೂ ಶ್ರೀ ಮಠದ ಆವರಣದಲ್ಲಿ ಸೆ.06ರ ಬೆಳಗ್ಗೆ 9.30ರಿಂದ ಶ್ರೀ ಸ್ವರ್ಣಗೌರಿ ಪೂಜೆ ನೆರವೇರಿಲಿದೆ. 10.45 ಗಂಟೆಗೆ ಮಹಾಮಂಗಳಾರತಿ, 11 ರಿಂದ ಬಾಗಿನ ಕಾರ್ಯಕ್ರಮ ನಡೆಯಲಿದ್ದು, ಹೆಣ್ಣು ಮಕ್ಕಳು ಸ್ವೀಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Hassan
ನಾಳೆ ಗೌರಿ ಹಬ್ಬದ ದಿನ, ಗಂಗೆ ಪೂಜೆ ಮಾಡ್ತಿದ್ದೇವೆ – ಡಿಸಿಎಂ ಡಿ.ಕೆ.ಶಿವಕುಮಾರ್
ಹಾಸನ : ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ
ಬಹಳ ಜನ ನಮಗೆ ಸಹಕಾರ ಕೊಟ್ಟಿದ್ದಾರೆ
ನಾಳೆ ಗೌರಿ ಹಬ್ಬದ ದಿನ, ಗಂಗೆ ಪೂಜೆ ಮಾಡ್ತಿದ್ದೇವೆ
ಒಂದು ಭಗೀರಥ ಪ್ರಯತ್ನ ಮಾಡಿದ್ದೇವೆ
ಗೌರಿ-ಗಂಗೆಗೆ ಜಗಳ ಆಗಿತ್ತು
ಇಲ್ಲಿ ಇಬ್ಬರನ್ನೂ ಒಂದು ಮಾಡುತ್ತಿದ್ದೇವೆ
ಇಬ್ಬರನ್ನು ಒಂದು ಮಾಡಿ ಪೂಜೆ ಮಾಡುತ್ತಿದ್ದೇವೆ
ನಮ್ಮ ರಾಜ್ಯದ ಇತಿಹಾಸ ಪುಟಕ್ಕೆ ಸೇರುವ ಕಾರ್ಯಕ್ರಮ
ನಾನು ಯಾರ ಟೀಕೆಗೂ ಉತ್ತರ ಕೊಡಲು ತಯಾರಿಲ್ಲ, ಅವಶ್ಯಕತೆ ಇಲ್ಲ
ಒಂದು ತೊಟ್ಟು ನೀರಿಗೆ ನಮ್ಮ ಜನ ಹೇಗೆ ಬಡಿದಾಡುತ್ತಾರೆ ಎಂದು ಗೊತ್ತು
ಇದು ಅಂತರರಾಜ್ಯ ಅಲ್ಲಾ, ನಮ್ಮ ರಾಜ್ಯದ ಯೋಜನೆ
ಎಲ್ಲರನ್ನೂ ಒಪ್ಪಿಸಿಕೊಂಡು ಈ ಯೋಜನೆ ಮಾಡುತ್ತಿದ್ದೇವೆ, ಬಹಳ ಚೆನ್ನಾಗಿ ಆಗಿದೆ
ನಾನು ಬಂದ ಮೇಲೆ ಇದಕ್ಕೊಂದು ಹೊಸ ರೂಪ ಕೊಟ್ಟಿದ್ದೇನೆ
ಅದಕ್ಕೆ ನಿಮ್ಮ ಕಣ್ಣುಗಳು, ಕ್ಯಾಮೆರಾಗಳೇ ಸಾಕ್ಷಿ
ಪಕ್ಷಭೇದ ಮರೆತು ಎಲ್ಲರಿಗೂ ಆಹ್ವಾನ ಕೊಟ್ಟಿದ್ದೇನೆ
ಯಾರು ಬೇಕಾದರೂ ಬರಬಹುದು, ಪಾಲ್ಗೊಳ್ಳಬಹುದು, ಏನು ಗೌರವ ಕೊಡಬೇಕು ಕೊಡ್ತೇವೆ
ನಾಳೆ ಬೆಳಿಗ್ಗೆ 12 ಗಂಟೆಗೆ ಏಳು ವಿಯರ್‌ಗಳಲ್ಲಿ ಏಳು ಮಂತ್ರಿಗಳು ಪೂಜೆ ಮಾಡ್ತಾರೆ
ಇನ್ ಟೈಂಗೆ ಅವರು ಬರಬೇಕು, ರಾಹುಕಾಲದ ಒಳಗೆ ಬರಬೇಕು
ಇಲ್ಲ ಅಂದರೆ ಮಾಮೂಲಿ ಹನ್ನೆರಡು ಗಂಟೆಗೆ ಹೋಮ ಹವನ ನಡೆಯುತ್ತೆ
ಬೆಳಿಗ್ಗೆ ನಾನು ಪಾಲ್ಗೊಳ್ತಿನಿ, 10.30 ರೊಳಗೆ ರಾಹುಕಾಲ ಮುಗಿಯುವುದರೊಳಗೆ ಕೆಲವು ಶಾಸ್ತ್ರಗಳು ಮುಗಿಯುತ್ತವೆ
ಮಧ್ಯಾಹ್ನ 12 ಗಂಟೆಗೆ ಬಟನದ ಆನ್ ಮಾಡ್ತಾರೆ
ಸಿಎಂ ಇಲ್ಲಿಗೆ ಬಂದು ಗಂಗೆ ಪೂಜೆ ಮಾಡ್ತಾರೆ
ಚಾಮುಂಡಿಬೆಟ್ಟದ ದೀಕ್ಷಿತರನ್ನೇ ಬರಲು ಹೇಳಿದ್ದೇವೆ
ನಮ್ಮ ರಾಜ್ಯದ ಅಧಿದೇವತೆ ಚಾಮುಂಡಿ
ಅರ್ಚಕರ ಪ್ರಭಾವದಿಂದ ಶಿಲೆಯನ್ನು ಕಾಣಬಹುದಂತೆ
ಚಾಮುಂಡಿ ಬೆಟ್ಟದ ದೀಕ್ಷಕರನ್ನೇ ಕರೆಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ
ಎಲ್ಲಾ ಮಂತ್ರಿಗಳಿಗೂ ತಿಳಿಸಿದ್ದೇವೆ
ಇವತ್ತು ರಾತ್ರಿ ಯಾರು ಬರ್ತಾರೆ ಲೆಕ್ಕಾಚಾರ ಹಾಕ್ತಿವಿ
ಅಲ್ಲಿಲ್ಲಿ ಹೋಗಿ ಆನ್ ಮಾಡಲು ಅವಕಾಶ ಮಾಡಿ ಕೊಡ್ತಿವಿ
ಈ ವ್ಯಾಪ್ತಿಗೆ ಬರುವ ಎಲ್ಲಾ ಮಿನಿಸ್ಟರ್ ಬರ್ತಾರೆ
ಆಹ್ವಾನಪತ್ರಿಕೆಯಲ್ಲಿ ಯಾರ ಹೆಸರು ಹಾಕಬೇಕು ಎಲ್ಲರ ಹೆಸರು ಹಾಕಿದ್ದೀವಿ
ಈ ವ್ಯಾಪ್ತಿಗೆ ಬರುವ ಎಲ್ಲಾ ಎಂಎಲ್‌ಎ ಹೆಸರುಗಳನ್ನು ಹಾಕಿದ್ದೇವೆ
ಏನಾದರು ಇದ್ದರೆ ಸರಿ ಮಾಡೋಣ
ಚಿಕ್ಕಬಳ್ಳಾಪುರಕ್ಕೆ ಯೋಜನೆ ತಲುಪಿಲ್ಲ ಎಂದು ಅಲ್ಲಿನ ಶಾಸಕ ಅಸಮಾಧಾನ ವಿಚಾರ
ಆಲಮಟ್ಟಿ ಯೋಜನೆ ಭೂಮಿ ಪೂಜೆ ಆಗಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ
ಉದ್ಘಾಟನೆ ಆಗಿದ್ದು ಅಬ್ದುಲ್ ಕಲಾಂ ಅವರ ಕಾಲದಲ್ಲಿ
ಹತ್ತು ವರ್ಷದಲ್ಲೇ ಈ ನೀರು ತೆಗ್ದಿದ್ದೇವಿ
ಹಿಂದೆ ಬಿಜೆಪಿ ಮಂತ್ರಿ ನೂರು ಮೀಟರ್ ಓಪನ್ ಮಾಡಲು ಆಗಿರಲಿಲ್ಲ
ನಾನು ಬಂದು ಅದನ್ನು ಓಪನ್ ಮಾಡ್ಸಿ ಕೆಲಸ ಶುರು ಮಾಡ್ಸಿದ್ದೀನಿ
ಅರಣ್ಯ ಇಲಾಖೆಯವರ ಜೊತೆ ಮಾತನಾಡಿದ್ದೀನಿ
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ವಿಚಾರವಾಗಿ ತಮ್ಮ ವಿರುದ್ದ ಬಿಜೆಪಿ ಶಾಸಕ ಯತ್ನಾಳ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಚಾರ
ಪ್ರತಿಕ್ರಿಯೆ ನೀಡದೆ ಹೊರಟ ಡಿಸಿಎಂ ಡಿ.ಕೆ.ಶಿವಕುಮಾರ್
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State7 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State7 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health7 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized3 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized9 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State7 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.