Hassan
೧೨೪೩ ಕೋಟಿಗಳಲ್ಲಿ ಮೀಸಲು ಕಾಮಗಾರಿ ನೀಡುವಂತೆ ಐ.ಕೆ. ರಾಮಚಂದ್ರ ಮನವಿ
ಹಾಸನ: ಶುಕ್ರವಾರದಂದು ಆಗಮಿಸುತ್ತಿರುವ ಮುಖ್ಯಮಂತ್ರಿ ರವರಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರ ಸಂಘದಿಂದ ಅಭಿನಂದನೆ ಮತ್ತು ಬೇಡಿಕೆಗಳ ಈಡೇರಿಕೆಗಾಗಿ, ಶಂಕುಸ್ಥಾಪನೆಗೊಳ್ಳುತ್ತಿರುವ ೧೨೪೩ ಕೋಟಿ ರೂಪಾಯಿಗಳ ಕಾಮಗಾರಿಗಳಲ್ಲಿ ಶೇ. ೨೪.೧% ತಾವು ಜಾರಿಗೊಳಿಸಿರುವ ನಿಯಮಕ್ಕೆ ಮೀಸಲು ಕಾಮಗಾರಿಯನ್ನು ನೀಡುವಂತೆ ಮನವಿ ಮಾಡುವುದಾಗಿ ಕನಾಟಕ ರಾಜ್ಯ ಎಸ್.ಸಿ. ಎಸ್.ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಐ.ಕೆ. ರಾಮಚಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಜಿಲ್ಲಾ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರ ಸಂಘವು ಮನವಿ ಮಾಡುವುದೇನೆಂದರೆ, ಸಿಎಂ ಅವರು ಜಿಲ್ಲೆಗೆ ಆಗಮಿಸಿ ಹಲವಾರು ಯೋಜನೆಗಳ ನೂರಾರು ಕೋಟಿ ರೂಪಾಯಿಗಳ ಯೋಜನೆಯ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿ ಅನುಧಾನ ನೀಡುತ್ತಿರುವುದು ಜಿಲ್ಲೆಗೆ ಸಂತೋಷಕರವಾದ ವಿಚಾರ. ಮುಖ್ಯಮಂತ್ರಿಯವರಿಗೆ ಅಭಿನಂದನ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತ ತಾವು ಶಂಕುಸ್ಥಾಪನೆ ಮಾಡುತ್ತಿರುವ ಕಾಮಗಾರಿಗಳಲ್ಲಿ ತಾವೇ ಮಾಡಿದ ನಿಯಮದ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ತಾವು ಶಂಕುಸ್ಥಾಪನೆ ನೀಡುತ್ತಿರುವ ಕಾಮಗಾರಿಗಳ ಅನುಧಾನದಲ್ಲಿ ಶೇಕಡ ೨೪.೧೦ರ ಅನುಪಾತದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ನೊಂದಾಯಿತ ಗುತ್ತಿಗೆದಾರರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ರ್ಯಾಡಂಮ್ ಟೆಂಡರ್‌ನಲ್ಲಿ ೫ ಲಕ್ಷದಿಂದ ೧೦ ಲಕ್ಷ, ೨೫ಲಕ್ಷ, ೩೦ ಲಕ್ಷ, ೫೦ ಲಕ್ಷ, ೧ ಕೋಟಿ ವರೆಗಿನ ಕಾಮಗಾರಿಗಳಿಗೆ ಕ್ರಮವಾಗಿ ಅಂದಾಜುಗಳನ್ನು ತಯಾರಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗದಂತೆ ಕಡ್ಡಾಯವಾಗಿ ಅಂದಾಜು ಪಟ್ಟಿಗಳನ್ನು ತಯಾರಿಸುವ ಅಧಿಕಾರಿಗಳಿಗೆ ಶಿಸ್ತು ಬದ್ಧ ಸೂಚನೆ ನೀಡಬೇಕು ಎಂದರು.

ಮಂಜೂರಾದ ಅನುಧಾನಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೂ ಟೆಂಡರ್ ಕಾಮಗಾರಿಗಳಲ್ಲಿ ಭಾಗವಹಿಸಿ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಜನಪ್ರಿಯ ಮುಖ್ಯಮಂತ್ರಿಗಳಾಗಿ ದೀನ ದಲಿತರ ಉದ್ಧಾರಕರಾಗಿ ರಾಜ್ಯದ ಉದ್ದಗಲಕ್ಕು ಬಡವರ ಪಾಲಿನ ಭಾಗ್ಯದತರಾಗಿ ಅಧಿಕಾರ ನಿರ್ವಹಿಸುತ್ತಿರುವ ತಾವು ಈ ಜನಾಂಗದ ಗುತ್ತಿಗೆದಾರರಿಗೂ ಸಾಮಾಜಿಕ ನ್ಯಾಯ ನೀಡುವಲ್ಲಿ ನಮ್ಮಗಳನ್ನು ಉತ್ತಮ ಗುತ್ತಿಗೆದಾರರುಗಳನ್ನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇವೆ ಎಂದು ಹೇಳಿದರು. ಹಾಸನ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರ ಸಂಘದ ಕಟ್ಟಡಕ್ಕೆ ಹಾಸನ ನಗರದ ಬಿ.ಎಂ. ರಸ್ತೆ ಜ್ಞಾನಾಕ್ಷಿ ಕಲ್ಯಾಣ ಮಂಟಪದ, ರಾಜಕಾಲುವೆ ಬಳಿ, ಖಾಲಿ ಇರುವ ನಿವೇಶನವನ್ನು ಮಂಜೂರು ಮಾಡಿಸಿಕೊಡಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕನಾಟಕ ರಾಜ್ಯ ಎಸ್.ಸಿ. ಎಸ್.ಟಿ. ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್. ಹೇಮರಾಜ್, ಜಿಲ್ಲಾ ಕಾರ್ಯದರ್ಶಿ ಎಂ.ಜೆ. ಲಕ್ಷ್ಮಣ್, ರಂಗಸ್ವಾಮಿ, ರವಿ, ಸಿದ್ದಪ್ಪ ಇತರರು ಉಪಸ್ಥಿತರಿದ್ದರು.
Hassan
ಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಶ್ರೀನಗರ ನಿವಾಸಿ ಆದಿಲ್ ಪಾಷಾ (29), ಅಂಬೇಡ್ಕರ್ ನಗರ ನಿವಾಸಿ ಮಹಮದ್ ಸಬ್ರಿಜ್ ಕಾಲು ಹಾಗೂ ಹಳೇಬೀಡು ತರಗಿನ ಪೇಟೆ ಗೋವಿಂದ (40) ಬಂಧಿತ ಆರೋಪಿಗಳು.

ಏನಿದು ಪ್ರಕರಣ-1?
ಫೆ. 3 ರಂದು ಹಾಸನದ ದೇವೇಗೌಡ ನಗರದ ಬಸ್ಸು ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಗಾಂಜಾವನ್ನು ತರುತ್ತಿದ್ದಾರೆಂದು ಹಾಸನ ನಗರ ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆದಿಲ್ ಆದಿಲ್ ಪಾಷಾ ಹಾಗೂ ಮಹಮದ್ ಸಬ್ರಿಜ್ ಕಾಲುನನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1301 ಗ್ರಾಂ ತೂಕವುಳ್ಳ ಅಂದಾಜು ಬೆಲೆ 2,08,500 ರೂ. ಬೆಲೆಬಾಳುವ ಗಾಂಜಾಸೊಪ್ಪು ಹಾಗು ಒಂದು ಓಪೋ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾಸನದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ 2:
ಹಗರೆ-ಹಳೇಬೀಡು ರಸ್ತೆ ಪುಷ್ಪಗಿರಿ ಬೆಟ್ಟದ ಹತ್ತಿರ ಬಂಡಾರಿಕಟ್ಟೆ ಬಸ್ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಳೇಬೀಡು ಠಾಣೆ ಪೊಲೀಸರು ದಾಳಿ ನಡೆಸಿ ಬಸ್ ನಿಲ್ದಾಣದೊಳಗೆ ಕುಳಿತುಕೊಂಡಿದ್ದ ಹಳೇಬೀಡಿನ ನಯನ ಕ್ಷತ್ರಿಯ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ತರಗಿನಪೇಟೆ ನಿವಾಸಿ ಗೋವಿಂದನ ಬಳಿಯಿದ್ದ ೫೧೦ ಗ್ರಾಂ ತೂಕವುಳ್ಳ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hassan
2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
ಬೆಂಗಳೂರು/ಹಾಸನ: ಎತ್ತಿನಹೊಳೆ ನೀರನ್ನು 2027ರ ಅಂತ್ಯದೊಳಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಏತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲು ಈ ಮೂರು ಜಿಲ್ಲೆಗಳ ನೀರಿನ ಸಮಸ್ಯೆಗೆ ಪರಿಹಾರ ನೀಡುವುದೇ ಮುಖ್ಯ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಲಾಯಿತು.
ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಸಭೆಯಲ್ಲಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಎಂಸಿ ಸುಧಾಕರ್ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ, “2027ರಲ್ಲಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರು ಹರಿಯುವುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಲಾಯಿತು.

ಸಚಿವರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ರಾಜೇಶ್ ಅಮ್ಮಿನಭಾವಿ ಹಾಗೂ 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಓಗಳು, ಎಸ್ಎಲ್ಓ ಗಳು ಉಪಸ್ಥಿತರಿದ್ದು ಸಂಬಂಧಿತ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡಲಾಗಿದೆ.
ಪ್ರಮುಖವಾಗಿ ಎತ್ತಿನಹೊಳೆ ನೀರು ತುಮಕೂರು ಜಿಲ್ಲೆಯ ಗಡಿಯವರೆಗೆ ತರಲು ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ದೊಡ್ಡಬಳ್ಳಾಪುರದಿಂದ ಕುಂದಾಣ ಮಾರ್ಗವಾಗಿ ಒಂದು ಪೈಪ್ ಲೈನ್ ಕೋಲಾರ ಹಾಗೂ ಬಂಗಾರಪೇಟೆ ಕಡೆಗೆ, ಮತ್ತೊಂದು ಪೈಪ್ ಲೈನ್ ಚಿಂತಾಮಣಿ ಶ್ರೀನಿವಾಸಪುರ ಮಾರ್ಗವಾಗಿ ಮುಳಬಾಗಿಲು ಕಡೆಗೆ ಅಳವಡಿಸಲು ಕೂಡಲೇ ಕಾಮಗಾರಿ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು.

ಈ ಪೈಪ್ ಲೈನ್‌ಗಳು ಒಟ್ಟು 261.90 ಕಿ.ಮೀ. ದೂರು ಅಳವಡಿಸಬೇಕಿದೆ. ಪೈಪ್ ಲೈನ್ ಅಳವಡಿಸಲು ಅಗತ್ಯವಿರುವ ಭೂ ಸ್ವಾಧೀನವನ್ನು ಕೂಡಲೇ ಮಾಡಲು ಭೂ ಸ್ವಾಧೀನ ಅಧಿಕಾರಿಗಳಿಗೆ ಸೂಚಿಸಲಾಯಿತು. ಭೂ ಸ್ವಾಧೀನ ಆದೇಶ ಹೊರಡಿಸಿದ ಭಾಗದಲ್ಲಿ ಪೈಪ್ ಲೈನ್ ಅಳವಡಿಕೆಯನ್ನು ಕೂಡಲೇ ಆರಂಭಿಸಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಂದುವರೆದು, ಕುಡಿಯುವ ನೀರು ಒದಗಿಸಬೇಕಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀರು ಶುದ್ದೀಕರಣ ಘಟಕ ಹಾಗೂ ಗ್ರಾಮಗಳಿಗೆ ನೀರು ತಲುಪಿಸುವ ಪೈಪ್ ಲೈನ್ಗಳನ್ನು ಅಳವಡಿಸಲು ಅಂದಾಜು ಪಟ್ಟಿ ಹಾಗೂ ಪ್ರಸ್ತಾವನೆಗಳನ್ನು ಕೂಡಲೇ ತಯಾರಿಸಿ ಅನುಮೋದನೆಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟಾರೆ 2027ರ ಅಂತ್ಯಕ್ಕೆ ನೀರನ್ನು ಈ ಮೂರೂ ಜಿಲ್ಲೆಗಳಿಗೆ ತಲುಪಿಸಲು ಮತ್ತು ನೀರನ್ನು ಶುದ್ದೀಕರಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಮತ್ತು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಯಿತು.
Hassan
ವಿಧಾನಸೌಧದಲ್ಲಿ ಕಾರ್ಯಕಲಾಪ ವೀಕ್ಷಿಸಿದ ಎನ್.ಕೆ. ಗಣಪಯ್ಯ ಕಿವುಡ, ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು
ಹಾಸನ: ಸಕಲೇಶಪುರದ ಕೌಡಹಳ್ಳಿಯಲ್ಲಿರುವ ಎನ್.ಕೆ. ಗಣಪಯ್ಯ ಕಿವುಡ ಮತ್ತು ಮೂಗ ಮಕ್ಕಳ ರೋಟರಿ ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸದನದ ಕಾರ್ಯಕಲಾಪ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ ಸದನದ ವೀಕ್ಷಣೆಗೆ ಅನುವು ಮಾಡಿಕೊಟ್ಟರು.
-
Kodagu8 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Kodagu8 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
Politics3 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Special24 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
Hassan5 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
National4 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Hassan37 minutes agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Hassan24 hours agoಎಸ್ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್ಡಿಪಿಐ ಮುಖಂಡ
