Connect with us

Mysore

ಹೊಸಹೊಳಲು ಗ್ರಾಮದ ಮಹಿಳೆ ಆತ್ಮಹತ್ಯೆ

Published

on

ಎಚ್.ಡಿ.ಕೋಟೆ: ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಬುಧವಾರ ರೈತ ಮಹಿಳೆ

ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ದಿ.ಪುಟ್ಟೇಗೌಡ ಅವರ ಪತ್ನಿ ಕಮಲಮ್ಮ

(58) ಮೃತರು. ತಮ್ಮ ಹೆಸರಿನಲ್ಲಿ ಇರುವ ಮೂರು ಎಕರೆ ಜಮೀನಿನಲ್ಲಿ ಕೊಳವೆಬಾವಿ

ಕೊರೆಸಲು ಹಾಗೂ ಬೆಳೆ ಬೆಳೆಯಲು ರಾಷ್ಟ್ರೀಕೃತ ಬ್ಯಾಂಕ್,

ಖಾಸಗಿ ಬ್ಯಾಂಕ್‌ ಹಾಗೂ ಕೈ ಸಾಲ ಸೇರಿದಂತೆ ಸುಮಾರು 20

ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ನೀಡಿದ ಖಾಸಗಿ

ಸಂಸ್ಥೆಯವರು ಗ್ರಾಮದ ದೇವಸ್ಥಾನದ ಬಳಿ ಬಂದಿದ್ದಾರೆ. ಈ

ವೇಳೆ ಹಣ ತರುವುದಾಗಿ ಮನೆಗೆ ಹೋದ ಕಮಲಮ್ಮ, ಎಷ್ಟೇ

ಹೊತ್ತಾದರೂ ಬಾರದಿದ್ದಾಗ ಆಕೆಯ ಮೊಮ್ಮಗಳು ಮನೆಗೆ

ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ.

ಮೊಮ್ಮಗಳು ಗ್ರಾಮಸ್ಥರಿಗೆ ವಿಚಾರ ತಿಳಿಸಿದ ನಂತರ ಅಂತರಸಂತೆ ಪೊಲೀಸ್ ಠಾಣೆಗೆ

ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು

ಮರಣೋತ್ತರ ಪರೀಕ್ಷೆ ನಡೆಸಲು ಎಚ್‌.ಡಿ.ಕೋಟೆ ಆಸ್ಪತ್ರೆಗೆ ಸಾಗಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mysore

ಮೂರು ತಿಂಗಳಿಗೊಮ್ಮೆ ರೈತರೊಂದಿಗೆ ಸಭೆ : ಸುತ್ತೋಲೆ ಹೊರಡಿಸಲು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರ ಸೂಚನ

Published

on

ಮೈಸೂರು: ಪ್ರತಿ ಮೂರು ತಿಂಗಳಿಗೊಮ್ಮೆ ರೈತರೊಂದಿಗೆ ಸಭೆ ನಡೆಸುವ ಮೂಲಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಅವರು ಆಶ್ವಾಸನೆ ನೀಡಿದರು.
ವಿಜಯನಗರ 1ನೇ ಹಂತದಲ್ಲಿರುವ ನಿಗಮದ ಕಚೇರಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಸದಸ್ಯರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರು, “ರೈತರ ಸಮಸ್ಯೆಗಳನ್ನು ಆಲಿಸಲು ಪ್ರತಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಸುತ್ತೋಲೆ ಹೊರಡಿಸಬೇಕಿದೆ. ಆ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದ್ದು, ಒಂದು ವೇಳೆ ಸ್ಥಳೀಯ ಹಂತದಲ್ಲಿ ಬಗೆಹರಿಸಲು ಸಾಧ್ಯವಾಗದಿದ್ದರೆ ಅವುಗಳನ್ನು ನಿಗಮದ ಕಾರ್ಪೊರೇಟ್‌ ಕಚೇರಿಯ ಮೂಲಕ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ವಿದ್ಯುತ್‌ ಸಂಬಂಧಿತ ತೊಂದರೆಗಳನ್ನು ಬಗೆಹರಿಸುವ ಮೂಲಕ ರೈತರು, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೇ ಅಗತ್ಯವಿರುವ ಕಡೆಗಳಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗುತ್ತಿದೆ. ತುಂಡಾದ ವಿದ್ಯುತ್‌ ತಂತಿಗಳನ್ನು ರೀ-ಕಂಡೆಕ್ಟಿಂಗ್‌ ಮೂಲಕ ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದರೆ, ವೈಯಕ್ತಿಕ ಸಮಸ್ಯೆ ಇದ್ದಲ್ಲಿ ರೈತರೇ ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಹಳ್ಳಿಗಳಲ್ಲಿ ಸಮಸ್ಯೆಗಳು ಉಂಟಾದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಬಗೆಹರಿಸಲಾಗುವುದು,” ಎಂದು ಅವರು ಭರವಸೆ ನೀಡಿದರು.


ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ ರಾಜು ಅವರು ಮಾತನಾಡಿ, “ರೈತರು ಹಾಗೂ ಸಾರ್ವಜನಿಕರಿಂದ ದೂರು ಬಂದ ಕೂಡಲೇ ಅವುಗಳನ್ನು ತ್ವರಿತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ. ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಲು ಅನುಕೂಲವಾಗಲು ಹೆಲ್ಪ್‌ ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಭೆಯಲ್ಲಿ ರೈತರು ಮುಂದಿಟ್ಟಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಗ್ರಾಮೀಣ ಭಾಗದಲ್ಲಿ ಹಗಲು ವೇಳೆ ವಿದ್ಯುತ್ ಪೂರೈಕೆ, ಹೆಚ್ಚುವರಿ ಟಿಸಿಗಳ ಅಳವಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.
ಸಭೆಯಲ್ಲಿ ಸೆಸ್ಕ್‌ ಅಧೀಕ್ಷಕ ಎಂಜಿನಿಯರ್‌ ಸುನೀಲ್‌ ಕುಮಾರ್‌ ಹಾಜರಿದ್ದರು.

Continue Reading

Chamarajanagar

ಸರ್ಕಾರದ ಸವಲತ್ತುಗಳನ್ನು ಪಡೆಯಲು ವಿಶ್ವಕರ್ಮ ಬಂಧುಗಳು ಸಂಘಟಿತರಾಗಲು ಸಲಹೆ

Published

on

ಚಾಮರಾಜನಗರ, ಸೆಪ್ಟೆಂಬರ್ 20:- ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಿಶ್ವಕರ್ಮ ಬಂಧುಗಳು ಸಂಘಟನೆಗೊಳ್ಳಬೇಕೆಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಸೌಭಾಗ್ಯ ಕರೆ ನೀಡಿದರು.

ಚಾಮರಾಜನಗರ ತಾಲೂಕು ತಮ್ಮಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ತಲಾತಲಾಂತರಗಳಿಂದ ಪಂಚ ಕಸಬುಗಳನ್ನು ರೂಡಿಸಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಆದರೆ ಈ ಸಮಾಜಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಾ ಬಂದಿದೆ, ಇದಲ್ಲದೆ ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಹಿಂದುಳಿದಿದೆ, ಸಮಾಜದ ಮುಖ್ಯ ವಾಹಿನಿಗೆ ಬರಲು ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕೆಂದು ಸಲಹೆ ನೀಡಿದರು.


ಬೋಗಾಪುರ ಗ್ರಾಮ ಪಂಚಾಯಿತಿ ಸದಸ್ಯ ಮಧು ಅವರು ಮಾತನಾಡಿ, ಹಿಂದುಳಿದ ವಿಶ್ವಕರ್ಮ ಸಮಾಜದವರಿಗೆ ವಸತಿ ವ್ಯವಸ್ಥೆ, ಉದ್ಯೋಗ, ಸಮುದಾಯ ಭವನ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಚಂದಕವಾಡಿ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ ಅವರು ಮಾತನಾಡಿ, ಸಮಾಜದ ಸಂಘಟನೆಗೆ ಕೆ. ಪಿ. ನಂಜುಂಡಿ ಅವರು ಎರಡು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇದಕ್ಕೆ ಫಲವಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ, ಅಮರಶಿಲ್ಪಿ ಜಕಣಾಚಾರಿ ಸಂಸ್ವರನಾ ದಿನ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿತು, ಅವರು ಮುಂದುವರೆದು ಈ ಸಮಾಜದ ಜನರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬ ಹಿನ್ನೆಲೆಯಲ್ಲಿ ಶಾಸನ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಅವರ ಮುಂದಿನ ಹೋರಾಟಕ್ಕೆ ಸಮಾಜದ ಬಂಧುಗಳು ನಿರಂತರವಾಗಿ ಬೆಂಬಲ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು.

ಚಾಮರಾಜನಗರದ ವಿಶ್ವಕರ್ಮ ಸಮಾಜದ ಮುಖಂಡ ನಾಗೇಂದ್ರ ಅವರು ಮಾತನಾಡಿ, ಇದೇ ತಿಂಗಳು ಸೆಪ್ಟೆಂಬರ್ 25 ರಂದು ಜಿಲ್ಲಾ ಆಡಳಿತದ ವತಿಯಿಂದ ನಡೆಯಲಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳಿಂದ ವಿಶ್ವಕರ್ಮ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕಾಂತರಾಜು, ಕೃಷ್ಣಾಚಾರ್, ಕೆಂಪರಾಜು, ಡಿಎಲ್ ಕುಮಾರ್, ಮೋಹನ್, ಲೋಕೇಶ್, ವಾಸು, ಸತೀಶ್ ತಮ್ಮಡಹಳ್ಳಿ, ಊರ್ಗಳ್ಳಿ ಮುಖಂಡ ಸೋಮಾಚಾರ, ಮಹದೇವಸ್ವಾಮಿ, ಕೆಂಪಣ್ಣ , ಕೂಸಣ್ಣ, ನಂಜುಂಡಸ್ವಾಮಿ, ಮಹೇಶ, ಸುಬ್ಬಣ್ಣ, ಸಿದ್ದರಾಜು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Continue Reading

Mysore

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜೀವನವನ್ನು ಅರಿತುಕೊಳ್ಳಬೇಕು: ಡಿ ಎಸ್ ಗುರು

Published

on

ಚಾಮರಾಜನಗರ, ಸೆ.20:- ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿಯವರು ಹಲವು ವರ್ಷಗಳ ಕಾಲ ಕಾಯಕ ಜೀವನವನ್ನು ಮಾಡಿ ಹಲವಾರು ವಿದ್ಯಾಸಂಸ್ಥೆ ಹಾಗೂ ವಸತಿ ನಿಲಯ ಗಳನ್ನು ನಿರ್ಮಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಎಸ್ ಗುರು ತಿಳಿಸಿದರು.

ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 109ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀಗಳು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆ ಜೊತೆಗೆ ಪ್ರೀತಿಯನ್ನು ನೀಡಿದ್ದಾರೆ. ಶ್ರೀಗಳು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿ ಸೇವೆ ಸಲ್ಲಿಸಿಲ್ಲ ಅವರು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಿದ್ದಾರೆ ತಮ್ಮ ಜೀವನವನ್ನು ಮತ್ತೊಬ್ಬರ ಸೇವೆಗಾಗಿ ಸವೆದಿದ್ದಾರೆ ಎಂದು ಹೇಳಿದರು.

ಶ್ರೀಗಳು ಇತರರ ಸೇವೆಗಾಗಿ ತಮ್ಮನ್ನೇ ತಾವು ಮರೆತು ಸೇವೆ ಸಲ್ಲಿಸಿದ್ದಾರೆ. ಶಾಲೆ, ಕಾಲೇಜು, ವಸತಿ ನಿಲಯ ಅನ್ನದಾಸೋಹ ನಿರ್ಮಿಸಿ ಹಲವಾರು ಸೇವೆ ಸಲ್ಲಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶ್ರೀಗಳಿಗೆ ನಾಯಕತ್ವದ ಗುಣವಿದ್ದ ಕಾರಣ ಜೆಎಸ್ಎಸ್ ನಂತಹ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಬಡವರಿಗೆ ಅನಕ್ಷರಸ್ಥರಿಗೆ ಹಸಿದವರಿಗೆ ಏನಾದರೂ ಮಾಡಬೇಕು ಎಂಬಂತಹ ಛಲ ಶ್ರೀಗಳಲ್ಲಿ ಹುಟ್ಟಿತು.
ನೀನು ದೇವರನ್ನು ನೋಡಬೇಕಾದರೆ ಮಾನವ ಕುಲಕ್ಕೆ ಸೇವೆ ಸಲ್ಲಿಸು, ನೀನು ನಾರಾಯಣನ ಹತ್ತಿರ ಹೋಗಬೇಕಾದರೆ ದರಿದ್ರ ನಾರಾಯಣನಿಗೆ ಅನ್ನದಾಸೋಹ ಮಾಡು ಎಂಬಂತಹ ಸ್ವಾಮಿ ವಿವೇಕಾನಂದರ ನುಡಿಯನ್ನು ಶ್ರೀಗಳು ಅರಿತುಕೊಂಡು ಸೇವೆ ಸಲ್ಲಿಸಿದ್ದಾರೆ ಎಂದರು.

ಮಾನಸಿಕವಾಗಿ ಸ್ವಾಭಿಮಾನದಿಂದ ತಮ್ಮ ಆತ್ಮಸ್ಥೈರ್ಯದಿಂದ ದೃಢೀಕರಿಸಿ ತೆಗೆದುಕೊಂಡ ನಿರ್ಧಾರ ದಿಂದ ಸ್ವಾಮೀಜಿಯವರನ್ನು ಇಂದು ನಾವು ನೀವೆಲ್ಲರೂ ನೋಡುತ್ತಿದ್ದೇವೆ. ಭಾರತದ ಜೊತೆಗೆ ಹೊರದೇಶದಲ್ಲೂ ಜೆಎಸ್ಎಸ್ ಸಂಸ್ಥೆಗಳ ಶಾಖಾ ಶಾಲೆಗಳು ಹಾಗೂ ಕಾಲೇಜುಗಳನ್ನು ನೋಡಬಹುದು ಇಂತಹ ಅದ್ಭುತವಾಗಿ ಬೆಳವಣಿಗೆಗೆ ಶ್ರೀಗಳು ಎಂದು ತೆಗೆದುಕೊಂಡ ನಿರ್ಧಾರಗಳೇ ಕಾರಣ ಎಂದು ತಿಳಿಸಿದರು.

ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಅಧ್ಯಕ್ಷರಾದ ನಿ.ಪ್ರ.ಸ್ವ ಶ್ರೀ ಚನ್ನಬಸವಸ್ವಾಮಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಚಾಮರಾಜನಗರ ವಿ ವಿ ಯ ಕುಲಪತಿ ಡಾ. ಎಂ ಆರ್ ಗಂಗಾಧರ್, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್ ಮಹದೇವಸ್ವಾಮಿ, ಜೆಎಸ್‌ಎಸ್‌ ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್ ರೇವಣ್ಣಸ್ವಾಮಿ ಜೆಎಸ್‌ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಹೆಚ್.ಎಂ. ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!