Connect with us

Chamarajanagar

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ನೇತ್ರತ್ವದಲ್ಲಿ ಪ್ಲಾಸ್ಟಿಕ್ ಮಾರಾಟ ಮಳಿಗೆಗೆಳ ಮೇಲೆ ಮಿಂಚಿನ ದಾಳಿ ನಡೆಸಿದ ಅಧಿಕಾರಿಗಳು

Published

on

ಚಾಮರಾಜನಗರ, ಜು, 19-:ಪ್ಲಾಸ್ಟಿಕ್ ನಿಷೇಧವಿದ್ಸರೂ ನಿಯಮ ಬಾಹೀರವಾಗಿ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲವನ್ನು ಬಳಸುತ್ತಿದ್ದ ನಗರದ ವಿವಿಧ ಅಂಗಡಿಗಳ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ನೇತೃತ್ವದಲ್ಲಿ ನಗರಸಭಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡರು. ಪ್ಲಾಸ್ಟಿಕ್ ಕೈಚೀಲವನ್ನು ನಿಷೇಧಿಸಿದ ನಂತರ ನಗರಸಭೆಯ ಅಧಿಕಾರಿಗಳು ಹಲವಾರು ಬಾರಿ ಹೋಲ್ ಸೇಲ್ ಮತ್ತು ಚಿಲ್ಲರೆ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ಆದೇಶ ಉಲ್ಲಂಘಿಸಿ ಪ್ಲಾಸ್ಟಿಕ್ ಚೀಲ ಬಳಕೆ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ದ ಕೇಸು ದಾಖಲಿಸಿದ್ಸಾರೆ. ಆದರೂ ಪ್ಲಾಸ್ಟಿಕ್ ಬಳಕೆ ಮಾಡುವುದು ಮಾತ್ರ ಸಂಪೂರ್ಣ ವಾಗಿ ತಡೆಯಲು ಸಾಧ್ಯವಾಗಿಲ್ಲ. ನಗರಸಭೆಯ ಆಢಳಿತಕ್ಕೆ ಚುರುಕು ಮುಟ್ಟಿಸುವುದು  ಮತ್ತು ಪ್ಲಾಸ್ಟಿಕ್ ನ್ನು ಸಂಫೂರ್ಣವಾಗಿ ನಿಷೇಧ ಮಾಡುವ ಉದ್ದೇಶದದ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ನಗರದ ಮುಖ್ಯ ಬೀದಿಗಳಲ್ಲಿನ ಅಂಗಡಿಗಳು, ಹೋಟೇಲ್ ಮತ್ತಿತರ ಕಡೆ ಮಿಂಚಿನ ಸಂಚಾರ ನಡೆದಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಮುಟ್ಟುಗೋಲು ಹಾಕಿಕೊಂಡರು
ಪ್ಲಾಸ್ಟಿಕ್ ಚೀಲ ಉಪಯೋಗಿಸದಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಕೆಲವು ಅಂಗಡಿಗಳಲ್ಲಿ ಇನ್ನೂ ಬಳಕೆ ಮಾಡುತ್ತಿರುವುದನ್ನು ನೋಡಿ ಮಾಲೀಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮತ್ತೆ ಪುನಾರವರ್ತನೆಯಾದರೆ ದಂಡದ ಜೊತೆಗೆ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಅವಧಿ ಮೀರಿದ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವುದನ್ನ ಗಮ‌ನಿಸಿದ ನಗರಾಭಾ ಪೌರಾಯುಕ್ತ ರಾಮದಾಸ್  ಅವಧಿ ಮೀರಿದ ಪದಾರ್ಥಗಳನ್ನು ಉಪಯೋಗಿಸದಿರುವಂತೆ ತಾಕೀತು
ಪ್ರತಿಯೊಂದು ಆಹಾರ ಪದಾರ್ಥಗಳ ಮೇಲೆ ತಯಾರಿಸಿದ  ದಿನಾಂಕ ನಮೂದಿಸಿರಬೇಕು ಎಂದು ಹೇಳಿದರು. ಪೇಪರ್ ಸ್ಟಾಲ್ ಗಳು, ಸಿಹಿ, ಖಾರ ತಿನಿಸು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೀದಿ ಬದಿಯಲ್ಲಿ ಕೈಗಾಡಿಗಳಲ್ಲಿ ತರಕಾರಿ ಮಾರಾಟಗಾರರು ಪ್ಟಾಸ್ಟಿಕ್ ಚೀಲ ಬಳಸುತ್ತಿದ್ದನ್ನು ನೋಡಿದ ಎಡಿಸಿ ಗೀತಾ ಅವರು  ಕೈಚೀಲಗಳನ್ನು ವಶಪಡಿಸಿಕೊಂಡರು. ನಗರಸಭೆಯ ಅಧಿಕಾರ ವರ್ಗದವರು ದಾಳಿ ಸಂದರ್ಭದಲ್ಲಿ ಹಾಜರಿದ್ದರು.
Continue Reading
Click to comment

Leave a Reply

Your email address will not be published. Required fields are marked *

Chamarajanagar

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ

Published

on

ಯಳಂದೂರು ಮೇ 24

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ. ರಾತ್ರಿ ಬಿದ್ದ ಭಾರಿ ಮಳಿಗೆ ಭೂಮಿ ಸಂಪೂರ್ಣವಾಗಿ ನೀರು ಕುಡಿದು ಜಮೀನುಗಳು ಕೆರೆ,ಕಟ್ಟೆ ಹಾಗೂ ಶಾಲೆ ಕಾಲೇಜು ಮೈದಾನದಲ್ಲಿ ನೀರು ತುಂಬಿಕೆರೆಯಂತಾಗಿ ಅವಾಂತರ ಸೃಷ್ಟಿಯಾಗಿದೆ.

ಕೆಲವು ಜಮೀನುಗಳಲ್ಲಿ ಹಾಗೂ ರಸ್ತೆಗಳಲ್ಲಿ ಮರಗಳ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರ ರಸ್ತೆಗಳು ಡಾಂಬರ್ ಕಿತ್ತು ದೊಡ್ಡ ದೊಡ್ಡ ಹೊಂಡ ಬಿದ್ದು, ವಾಹನ ಸವರರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು ಕುರಿಗಾಹಿಗಳು ತಮ್ಮ ಕುರಿಗಳ ಜೊತೆಗೆ ಜಮೀನುಗಳಲ್ಲಿ ತುಂಬಿರುವ ನೀರಿನಲ್ಲಿ ರಾತ್ರಿ ಇಡೀ ಕಾಲ ಕಳೆಯುವಂತೆ ಆಯಿತು. ಪಟ್ಟಣದಿಂದ
ಬಿಳಗಿರಿರಂಗನ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಹಳ್ಳ ಬಿದ್ದು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 209 ರಿಂದ ಕೆಸ್ತೂರಿನಿಂದ ಕುಂತೂರ ಗ್ರಾಮದವರೆಗೆ, ಇನ್ನೂ ಹಲವು ಗ್ರಾಮಗಳ ಪ್ರಮುಖ ರಸ್ತೆಗಳ ಡಾಂಬರ್ ಕಿತ್ತು ದೊಡ್ಡ ದೊಡ್ಡ ಹಳ್ಳಗಳಾಗಿ ಮಳೆ ನೀರು ತುಂಬಿ ಕೆರೆಯಂತೆ ಆಗಿ ಸವಾರರು ಆ ಹಳ್ಳದಲ್ಲೇ ಬಿದ್ದು ತಮ್ಮ ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ನಡೆದಿದೆ. ಸಂಬಂಧಪಟ್ಟ ಇಲಾಖೆ ಇದನ್ನು ಗಮನ ಹರಿಸಿ ಶಾಲಾ ಕಾಲೇಜು ಮೈದಾನ ಹಾಗೂ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಗಳಾಗದೆ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ನಾಗರಿಕರು ಹಾಗೂ ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.

Continue Reading

Chamarajanagar

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಸದ ರಾಶಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ

Published

on

ಬಸ್ ನಿಲ್ದಾಣದಲ್ಲಿ ಒಂದು ದಿನ ಕಳೆದರೂ ಪಟ್ಟಣ ಪಂಚಾಯತಿಯಿಂದ ತೆಗೆಯದ ಕಸ ಸಾರ್ವಜನಿಕರಿಂದ ಇಡೀ ಶಾಪ

ಯಳಂದೂರು ನಲ್ಲಿ ಸತತ ವಾಗಿ ಎರಡು ದಿನದಿಂದ ಸುರಿಯುತ್ತಿರುವ ಮಳೆ ಇಂದ ಬಸ್ ನಿಲ್ದಾಣದಲ್ಲಿರುವ ಡ್ರೈ ಮ್ಯಾಜಿನ ನೀರನ್ನು ತೆಗೆಯಲು ಕಸದ ರಾಶಿ ಒಂದು ದಿನದಿಂದಲೂ ಅಲ್ಲೇ ಇರುವ ಕಸದ ರಾಶಿ ಜನರಿಗೆ ಸಾಂಕ್ರಾಮಿಕ ರೋಗದ ಭಯದ ಭೀತಿ

Continue Reading

Chamarajanagar

ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Published

on

ಯಳಂದೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ವಿಜಯ ರವರು ತಿಳಿಸಿದರು

2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿಗೆ ಎಸ್ ಇ ಪಿ ಅನುಗುಣವಾಗಿ ಮೂರು ವರ್ಷಗಳ ಬಿ.ಎ ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳು ಹೆಚ್ ಇ ಕೆ , ಹೆಚ್ ಪಿ ಕೆ, ಪಿ ಇ ಎಸ್, ಹೆಚ್ ಎಸ್ ಕೆ, ಈ ಕೋರ್ಸುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದು

Continue Reading

Trending

error: Content is protected !!