Connect with us

Chikmagalur

ಹೃದಯಾಘಾತದಿಂದ ಕರ್ತವ್ಯನಿರತ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಸಾವು

Published

on

ಮೂಡಿಗೆರೆ, ಗುತ್ತಿಹಳ್ಳಿ , ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಚಾಲಕನಿಗೆ ಹೃದಯಾಘಾತ

ಬಸ್ ಚಾಲನೆ ಮಾಡಿವಾಗ ಚಾಲಕನಿಗೆ ಕಾಣಿಸಿಕೊಂಡ ಎದೆ ನೋವು

ತೀವ್ರ ಎದೆ ನೋವಿನಿಂದ ರಸ್ತೆ ಮಧ್ಯೆ ಬಸ್ ನಿಲ್ಲಿಸಿದ ಚಾಲಕ

ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಚಾಲಕ ರವಿ ಲಮಾಣಿ (46) ಸಾವು

ಮೂಡಿಗೆರೆ ತಾಲ್ಲೂಕಿನ ಹೆಸಗೊಡ್ ಗ್ರಾಮದ ಬಳಿ ಘಟನೆ

ಕೊಪ್ಪಳದ ಕೂಕ್ನೂರ್ ಗ್ರಾಮದ ನಿವಾಸಿ ರವಿ ಲಮಾಣಿ

ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು

Continue Reading
Click to comment

Leave a Reply

Your email address will not be published. Required fields are marked *

Chikmagalur

ಟಾಟಾ ಏಸ್ ಆಟೋ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಇಬ್ಬರು ಸಾವಪ್ಪಿದ್ದಾರೆ.

Published

on

 

 

ಚಿಕ್ಕಮಗಳೂರು : ಟಾಟಾ ಏಸ್ ಆಟೋ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಇಬ್ಬರು ಸಾವಪ್ಪಿದ್ದಾರೆ.
ಗಣಪತಿ ತರಲು 9 ಜನ ಯುವಕರು ತೆರಳುತ್ತಿದ್ದಾಗ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಈ‌ ಘಟನೆ ನಡೆದಿದೆ.

ಶ್ರೀಧರ್ (20) ಧನುಷ್ (20) ಮೃತಪಟ್ಟಿದ್ದು, ಇಬ್ಬರು ಯುವಕರ ತಲೆಗೆ ಗಂಭೀರ ಗಾಯ ಆಗಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿ
ಇನ್ನು ಮೂವರು ಯುವಕರಿಗೆ ಗಾಯವಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರು ಹಾಗೂ ಗಾಯಾಳುಗಳೆಲ್ಲ ಲಿಂಗದಹಳ್ಳಿ ನಿವಾಸಿಗಳು, ಗಣಪತಿ ತರಲು ಟಾಟಾ ಏಸ್ ನಲ್ಲಿ ತರೀಕೆರೆಗೆ ಹೋಗುತ್ತಿದ್ದರು, ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಆಗಿದೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Continue Reading

Chikmagalur

ಆರೋಗ್ಯ ಇಲಾಖೆಯಲ್ಲಿ 61 ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ – ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್

Published

on

ಚಿಕ್ಕಮಗಳೂರು: ಆರೋಗ್ಯ ಇಲಾಖೆಯಲ್ಲಿ ೬೧ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಆರೋಪಿಸಿದರು
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ೬೧ ಹುದ್ದೆಗೆ ೯೪೩ ಅರ್ಜಿಗಳು ಸಲ್ಲಿಕೆಯಾಗಿವೆ.ಅದರಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅನುಸರಿಸಿರುವ ಮಾನದಂಡ ಇದು ಯಾವುದನ್ನು ನೀಡದೆ ಅಕ್ರಮವನ್ನುಯ ಮುಚ್ಚಿಹಾಕಲು ಯತ್ನಿಸಲಾಗಿದೆ. ಹಗರಣ ಬಯಲಿಗೆಳೆಯಲು ನಾವು ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ಘಟಕಕ್ಕೆ ಮಾಹಿತಿ ಕೇಳಿದ್ದು, ೫೦ ಕಟ್ಟಿಸಿಕೊಂಡು ನೀಡಿರುವ ಮಾಹಿತಿಯಲ್ಲಿ ದೊಡ್ಡಮಟ್ಟದ ಹಣಕಾಸಿನ ವ್ಯವಹಾರ ನಡೆದಿದೆ ಎಂದು ಆರೋಪಿಸಿದರು..


ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆ ಸಂದರ್ಭದಲ್ಲಿ ಅಕ್ರಮ ನಡೆಸಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವೆಸಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿರುವುದರಿಂದ ಈ ಅಕ್ರಮದ ಬಗ್ಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಹಣಕೊಟ್ಟವರು ಉದ್ಯೋಗ ಪಡೆದುಕೊಂಡಿರುವ ಶಂಕೆ ಇದೆ. ಅರ್ಹತೆ ಇದ್ದೂ ಹಣನೀಡದವರನ್ನು ಆಯ್ಕೆಪಟ್ಟಿಯಲ್ಲಿ ಕಡೆಗಣಿಸಲಾಗಿದೆ. ಈ ಕುರಿತು ಮಾಹಿತಿಹಕ್ಕು ಅಧಿನಿಯಮ ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹಸ್ತಾಂತರಮಾಡಿದ್ದಾರೆ. ಸರ್ವಜನಿಕ ಮಾಹಿತಿ ಅಧಿಕಾರಿ ೧೨೦೮೪ ಪುಟಗಳು ಇರುವುದರಿಂದ ಪ್ರತಿ ಪುಟಕ್ಕೆ ೨ ರೂಪಾಯಿಗಳಂತೆ ನಮ್ಮಿಂದ ೨೪ಸಾವಿರ ರೂ. ಕಟ್ಟಿಸಿಕೊಂಡಿದ್ದಾರೆಂದರು.


ಆಯ್ಕೆಯ ಮಾನದಂಡದಲ್ಲಿ ನಡೆದಿರುವ ಅಕ್ರಮ ಮುಚ್ಚಿಹಾಕುವ ಉದ್ದೇಶದಿಂದ ನನಗೆ ನೋಟಿಸ್ ಕೊಡುತ್ತಾರೆ.ಆ ನೋಟಿಸ್‌ಗೆ ೫ ಹಿಂಬರಹಕೊಟ್ಟು ನನಗೆ ಬೇಕಾಗಿರುವ ಮಾಹಿತಿನೀಡುವಂತೆ ಕೋರಲಾಗಿದೆ. ಅಗತ್ಯವಿರುವ ಪುಟಗಳು ಎಂದು ಅನಗತ್ಯ ೧೨೦೮೪ ಪುಟಗಳ ಮಾಹಿತಿ ನೀಡಿ ವಂಚಿಸಿದ್ದಾರೆಂದು ದೂರಿದರು.
ಸರಿಯಾದ ಮಾಹಿತಿ ನೀಡದೆ ವಂಚಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕ ಮಾಃಇತಿ ಅಧಿಕಾರಿಯ ಮೇಲೆ ಮಾಹಿತಿ ಆಯೋಗ ಕೋರ್ಟ್‌ನಲ್ಲಿ ದೂರುದಾಖಲಿಸಿದ್ದೇವೆ. ಮತ್ತು ಸರ್ಕಾದ ತನಿಖಾ ಸಂಸ್ಥೆಗಳಿಗೂ ಅಹವಾಲು ಸಲ್ಲಿಸಲಿದ್ದೇವೆ.ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಅಟಾರಿಯಾ ಅವರಿಗೂ ದೂರು ಸಲ್ಲಿಸಿದ್ದೇವೆಂದು ತಿಳಿಸಿದರು.ಹೊನ್ನೇಶ್, ಸುಜಯ್, ಜಗದೀಶ್ ಚಕ್ರ ವರ್ತಿ, ಚೇತನ್‌ಜೇನುಬೈಲು ಇದ್ದರು.

Continue Reading

Chikmagalur

ರಾಜ್ಯಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಗಳು ಸಮಾಜದ ಪ್ರತಿ ನಾಗರೀಕರಿಗೂ ತಲುಪಿಸಿ

Published

on

ಚಿಕ್ಕಮಗಳೂರು, ಸೆಪ್ಟೆಂಬರ್ ೦೫:- ರಾಜ್ಯಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಗಳು ಸಮಾಜದ ಪ್ರತಿ ನಾಗರೀಕರಿಗೂ ತಲುಪಿಸಿ ಕುಟುಂಬವನ್ನು ಆರ್ಥಿಕ ಸಬಲರಾಗಿಸುವ ಜೊತೆಗೆ ಶ್ರೀ ರಕ್ಷೆಯಾಗಿ ಕಾಪಾಡುತ್ತಿದೆ ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಪ್ರಥಮ ತಾಲ್ಲೂಕು ಮಟ್ಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ತಾಲ್ಲೂಕಿನ ಬಡವರು, ಮಧ್ಯಮ, ಹಿಂದುಳಿದ ವರ್ಗ, ದಲಿತರು ಸೇರಿದಂತೆ ಪ್ರತಿಯೊಬ್ಬರಿಗೂ ಸದೃಢ ಜೀವನದ ದೃಷ್ಟಿಯಿಂದ ರಾಜ್ಯಸರ್ಕಾರ ಅಭೂತಪೂರ್ವ ಯೋಜನೆಗಳು ಜಾರಿಗೆ ತಂದಿರುವುದಲ್ಲ ದೇ ಕೆಲವೇ ತಿಂಗಳಲ್ಲಿ ಸಂಪೂರ್ಣ ಜಾರಿಗೊಳಿಸಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿದೆ ಎಂದು ತಿಳಿಸಿದರು.


ಪ್ರಸ್ತುತ ತಾಲ್ಲೂಕಿನಲ್ಲಿ ೭೩೪೫೮ ಬಿಪಿಎಲ್ ಕಾರ್ಡ್‌ದಾರರಲ್ಲಿ ೬೯೭೦೬ ಗೃಹಲಕ್ಷ್ಮೀ ಯೋಜನೆ ನೋಂ ದಾಯಿಸಿದ್ದು ಈ ಪೈಕಿ ೬೮೭೪೦ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಸೌಲಭ್ಯ ಒದಗಿಸುವ ಮೂಲಕ ಮಾಹೆಯಾನ ಸರ್ಕಾರ ೧೩.೭೪ ಕೋಟಿ ರೂ. ಖಾತೆಗೆ ಜಮೆ ಮಾಡಿದೆ. ಕೆಲವರಿಗೆ ವಿವಿಧ ಕಾರಣಗಳಿಂದ ಸಮಸ್ಯೆ ಇರುವುದರಿಂದ ಸದ್ಯದಲ್ಲೇ ಬಗೆಹರಿಸಲಾಗುವುದು ಎಂದರು.
ಶಕ್ತಿ ಯೋಜನೆಯಲ್ಲಿ ಗ್ರಾಮಾಂತರ ಹೊರತುಪಡಿಸಿ ೧೫೯ ಬಸ್‌ಗಳ ವ್ಯವಸ್ಥೆಯಿದೆ. ಈ ಯೋಜನೆ ಯಿಂದ ದಿನಕ್ಕೆ ೩೧೫೪೨ ಮಹಿಳೆಯರು ಪ್ರಯಾಣಿಸಿದ್ದು ಇಲ್ಲಿಯತನಕ ಒಟ್ಟು ೩ ಕೋಟಿ ರೂ.ಗಳು ಹಣ ವನ್ನು ಸರ್ಕಾರ ಮೆಸ್ಕಾಂ ಇಲಾಖೆಗೆ ಬಿಡುಗಡೆಗೊಳಿಸಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ೬೬೬೫೩, ಅಂತ್ಯೋದಯ ೪೧೭೫ ಸೇರಿದಂತೆ ಒಟ್ಟು ೭೦೮೨೮ ಕಾರ್ಡ್‌ಗಳಿವೆ. ಈ ಪೈಕಿ ೬೫೨೬೨ ಕಾರ್ಡ್‌ಗಳಿಗೆ ಪಡಿತರ ಸಹಿತ ಪ್ರತಿ ತಿಂಗಳು ೧೭೦ ರೂ. ಖಾತೆಗೆ ಜಮೆಯಾಗುತ್ತಿದ್ದು ಒಟ್ಟು ೩.೧೨ ಕೋಟಿ ಸರ್ಕಾರ ಅನುದಾನ ಭರಿಸಿದೆ. ಉಳಿದ ಕಾರ್ಡ್‌ಗಳು ತಾಂತ್ರಿಕ ದೋಷದಿಂದ ಹಣ ಜಮೆಯಾಗಿಲ್ಲ ಎಂದು ಹೇಳಿದರು.


ಮನೆಗೆ ಉಚಿತ ವಿದ್ಯುತ್ ಸಂಬಂಧ ಗೃಹಜ್ಯೋತಿಯಡಿ ೩೨೭೫೬ ನಿವಾಸ ನೊಂದಣಿಯಾಗಿದೆ. ಈ ಪೈಕಿ ೨೫೩೩೪ ಮನೆಗಳಿಗೆ ಶೂನ್ಯ ವಿದ್ಯುತ್ ಶುಲ್ಕವಾಗಿದೆ. ಒಟ್ಟು ೧೨ ತಿಂಗಳಿನಿಂದ ೬೦೩ ಲಕ್ಷ ರೂ.ಗಳ ಅನು ದಾನವನ್ನು ಸರ್ಕಾರ ಇಲಾಖೆಗೆ ಬಿಡುಗಡೆಗೊಳಿಸಿದೆ. ಯುವನಿಧಿಯಡಿ ಒಟ್ಟಾರೆ ಇಲ್ಲಿಯತನಕ ೧೧೪೨ ಯು ವಕರಿಗೆ ನೇರವಾಗಿ ಹಣ ಖಾತೆಗೆ ವರ್ಗಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲ್ಲೂಕು ಸದ ಸ್ಯರುಗಳಾದ ಕೆ.ಪಿ.ನಾಗೇಶ್, ಹನ್ಸರ್ ಆಲಿ, ಪುನೀತ್, ಎಲ್.ಎಂ.ನಾಗರಾಜ್, ನರೇಂದ್ರ, ಗೌಸ್‌ಮೊಹಿಯು ದ್ದಿನ್, ಹೆಚ್.ನವರಾಜ್, ರೋಹಿತ್, ವಿಂದ್ಯಾ, ಜಯಂತಿ, ಎಂ.ಅನ್ವರ್ ಆಲಿ, ಧರ್ಮಯ್ಯ, ಡಿ.ಆರ್.ತಿಮ್ಮೇ ಗೌಡ, ಕೃಷ್ಣ, ತಾ.ಪಂ. ಇಓ ತಾರಾನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

error: Content is protected !!