Chikmagalur
ಹೂವಾಡಿಗ ಮಾದಣ್ಣರ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿಸಲು ಸರ್ಕಾರಕ್ಕೆ ಮನವಿ : ಹೆಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: ಶರಣ ಹೂವಾಡಿಗ ಮಾದಣ್ಣನವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಮತ್ತು ಜಿಲ್ಲಾ ಹೂವಾಡಿಗರ ಸಂಘದಿಂದ ಹಮ್ಮಿಕೊಂಡಿದ್ದ ೬ನೇ ವರ್ಷದ ರಾಜ್ಯಮಟ್ಟದ ಗುರುಶರಣ ಹೂವಾಡಿಗ ಮಾದಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೆ.೨೯ ಮಾದಯ್ಯನವರ ಜಯಂತಿ ಇದ್ದು ಆ ದಿನವನ್ನು ಸರ್ಕಾರಿ ಜಯಂತಿಯಾಗಿ ಆಚರಿಸಲು ಕೋರಲಾಗುವುದು ಎಂದರು.
ಹೂವಾಡಿಗ ಅಭಿವೃದ್ಧಿ ಮಂಡಳಿಯನ್ನು ಕಳೆದ ವರ್ಷ ಘೋಷಣೆಮಾಡಿದ್ದು, ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವು ಎಂದು ತಿಳಿಸಿ, ಸಂಘವು ಸಲ್ಲಿಸಿರುವ ಮನವಿಯಲ್ಲಿ ರತ್ನಗಿರಿ ರಸ್ತೆಯಲ್ಲಿ ನಿವೇಶನ ನೀಡುವಂತೆ ತಿಳಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಅನುಭವ ಮಂಟಪದ ಸದಸ್ಯರಾಗಿದ್ದ ಮಾದಣ್ಣ ಬಸವಣ್ಣನವರ ಪೂಜೆಗೆ ಗರಿಕೆ ಮತ್ತು ಹೂವನ್ನು ನೀಡುತ್ತಿದ್ದರು. ೧೨ನೇ ಶತಮಾನದಲ್ಲಿ ಸಮಾನತೆಗೆ ಹೋರಾಟ ನಡೆಸಿದವರು. ಮಹಾಪುರುಷರುಗಳು ಯಾವುದೇ ಸಮಾಜಕ್ಕೆ ಸೀಮಿತರಾದವರಲ್ಲ, ಶೋಷಿತ ವರ್ಗದ ಧ್ವನಿಯಾಗಿ ಕೆಲಸಮಾಡಿದವರು ಎಂದು ಹೇಳಿದರು.
Chikmagalur
ಡಾ.ರಾಜ್ ಕನ್ನಡ ಚಿತ್ರರಂಗದ ಐದು ದಶಕಗಳ ಕಾಲದ ಅನಭಿಷಿಕ್ತ ದೊರೆ: ತಿಪ್ಪೇರುದ್ರಪ್ಪ

ಚಿಕ್ಕಮಗಳೂರು: ಐದು ದಶಕಗಳ ಕಾಲ ಅನಭಿಷಿಕ್ತ ದೊರೆಯಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ತನ್ನದೇ ಛಾಪು ಉಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವವರು ನಟ ಸಾರ್ವಭೌಮ ಡಾ.ರಾಜ್ಕುಮಾರ್ ಅವರದು ಒಂದು ಮಾಸದ ನೆನಪು ಎಂದು ಹಿರಿಯ ಪತ್ರಕರ್ತ, ಸಾಹಿತಿ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು (ಏ.೨೪) ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ನಡೆದ ವರನಟ ಡಾ.ವರನಟ ಡಾ.ರಾಜ್ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕನ್ನಡವನ್ನು ಉಸಿರಾಗಿಸಿಕೊಂಡ ಡಾ.ರಾಜ್ರವರು ಕನ್ನಡಕ್ಕಾಗಿ ಕೊನೆವರೆಗೂ ಬದುಕಿ ಕನ್ನಡದ ಹಿರಿಮೆ-ಗರಿಮೆಯನ್ನು ಗಗನದೆತ್ತರಕ್ಕೆ ಏರಿಸಿದರು. ವರನಟ, ನಟಸಾರ್ವಭೌಮನಾಗಿ ರಂಗಭೂಮಿ ಕಲಾವಿದರಾಗಿದ್ದ ತಂದೆಯವರಿಂದ ಪ್ರಭಾವಿತರಾಗಿ ರಂಗಭೂಮಿಯ ಎಲ್ಲಾ ಕಲಾಪ್ರಕಾರಗಳನ್ನು ಮೈಗೂಡಿಸಿಕೊಂಡು ಚಿತ್ರರಂಗದವರೆಗೂ ಬಂದು ಪರದೆಯ ಮೇಲೆ ವಿಜೃಂಭಿಸಿದವರು ಎಂದು ಬಣ್ಣಿಸಿದರು.
ರಂಗಭೂಮಿಯ ಪ್ರಮುಖ ಆಶಯಗಳಾದ ಸಂಗೀತ, ಸಾಹಿತ್ಯ ಮತ್ತು ಗಾಯನ ಇವೆಲ್ಲವನ್ನು ಮೇಳೈಸಿಕೊಂಡು ಕಲೆಗಾಗಿ ಕಲೆಯಲ್ಲ, ಕಲೆ ಒಂದು ವಿಶಿಷ್ಟ ಗುಣ ಎಂದು ಆರಾಧಿಸಿ ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು ಡಾ. ರಾಜ್ ಎಂದು ಹೇಳಿದರು.
ಪಾತ್ರಗಳಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಂಡು ಪರಕಾಯ ಪ್ರವೇಶ ಮಾಡಿ ಆ ಪಾತ್ರಗಳಿಗೆ ಜೀವ ತುಂಬಿದವರು. ಸಮಾಜಕ್ಕೆ, ನೀತಿ ಸಂದೇಶವನ್ನು ಬೋಧಿಸುವ ಚಿತ್ರಗಳು ಇವರದಾಗಿದ್ದು, ಐತಿಹಾಸಿಕ ಪಾತ್ರಗಳಿಂದ ಹಿಡಿದು ಜೇಮ್ಸ್ಬಾಂಡ್ವರೆಗೆ ತಮ್ಮ ಕಲಾ ನೈಪುಣ್ಯತೆಯನ್ನು ಮೆರೆದವರು ಡಾ.ರಾಜ್. ಭಕ್ತಿ ಪ್ರದಾನ ಚಿತ್ರಗಳಲ್ಲಂತೂ ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿ ತನ್ಮಯತೆಯನ್ನು ಪ್ರದರ್ಶಿಸುತ್ತಿದ್ದವರು. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳತೆ ಹಾಗೂ ವಿನಯತೆಯ ಸಾಕಾರಮೂರ್ತಿಯಾಗಿದ್ದರು. ವ್ಯಾಸಂಗ ಮಾಡಿರುವುದು ಕೇವಲ ೪ನೇ ತರಗತಿಯವರೆಗಾದರೂ ಯಾವುದೇ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣವನ್ನು ಮೀರಿದ ಭಾಷೆ, ಸಂಭಾಷಣೆಯ ಪ್ರೌಢಿಮೆ ಅವರಿಗಿತ್ತು ಎಂದು ಅವರು ತಿಳಿಸಿದರು.
ತಮ್ಮ ಚಿತ್ರಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದವರು. ಗಾಯನದಲ್ಲಿ ಕೂಡ ತಮ್ಮ ಸುಮಧುರ ಕಂಠಸಿರಿಯಿಂದ ಶಾಶ್ವತವಾಗಿ ಉಳಿಯುವ ಗೀತೆಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡಕ್ಕೋಸ್ಕರವೇ ಜೀವನ ಮುಡಿಪಾಗಿರಿಸಿದ ಡಾ.ರಾಜ್ ಗೋಕಾಕ್ ಚಳುವಳಿಗೆ ಜೀವ ತುಂಬಿ ಸರ್ಕಾರದ ಮನವೊಲಿಸಿ ಗೋಕಾಕ್ ವರದಿ ಜಾರಿಗೆ ಬರುವಂತೆ ಮಾಡಿದದವರು ಎಂದರು.
ಚಿಕ್ಕಮಗಳೂರಿಗೂ ಅವರಿಗೂ ನಿಕಟ ಸಂಬಂಧವಿತ್ತು. ಅವರ ಬಹುತೇಕ ಚಿತ್ರಗಳು ಇಲ್ಲಿನ ನಿಸರ್ಗ ಸೌಂದರ್ಯದ ತಾಣಗಳಲ್ಲಿ ಸಾಕ್ಷಾತ್ಕಾರ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಇತ್ಯಾದಿ ಚಿತ್ರಗಳ ಚಿತ್ರೀಕರಣವಾಗಿದ್ದವು ಎಂದು ಹೇಳಿದ ಅವರು, ವೀರಪ್ಪನ್ ಅಪಹರಣದಿಂದ ಕುಗ್ಗಿ ಹೋಗಿದ್ದ ಡಾ.ರಾಜ್ ನಂತರದಲ್ಲಿ ಆರು ವರ್ಷ ಬದುಕಿ ೨೦೦೬ ರ ಏ.೧೨ ರಂದು ನಮ್ಮನ್ನು ಅಗಲಿದರು. ಆದರೂ ಕನ್ನಡ ಇರುವವರೆಗೂ ನಮ್ಮ ಮನೆ-ಮನದಲ್ಲಿ ಅವರು ಶಾಶ್ವತವಾಗಿತ್ತಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಡಾ.ರಾಜ್ಕುಮಾರ್ ಅವರು ತಮ್ಮ ವಿಶಿಷ್ಟ ಪಾತ್ರಗಳು ಹಾಗೂ ಅಭಿನಯ ಪ್ರಬುದ್ಧತೆಯಿಂದ ನಮ್ಮನ್ನು ಕಾಡುತ್ತಾರೆ. ಅವರ ಅಭಿನಯವಾಗಲಿ, ಗೀತೆಗಳಾಗಲಿ ಜೀವನಕ್ಕೆ ಹತ್ತಿರವಾಗಿರುತ್ತವೆ. ರಾಜ್ ತಮ್ಮ ಪೌರಾಣಿಕ ಪ್ರಧಾನ ಪಾತ್ರಗಳು ಹಾಗೂ ಸಾಮಾಜಿಕ ಪಾತ್ರಗಳು, ಪ್ರೀತಿಪೂರಕವಾದ ಪಾತ್ರಗಳಿಂದ ಜನಮನದಲ್ಲುಳಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಡಾ.ರಾಜ್ಕುಮಾರ್ ಅವರು ಅವರಿಗಿದ್ದ ಗಾನಗಂಧರ್ವ ಬಿರುದಿಗೆ ಪೂರಕವಾಗಿ ಸರಸ್ವತಿಯ ವರಪುತ್ರರೇ ಆಗಿದ್ದರು. ಸಮಾಜಕ್ಕೆ ಆದರ್ಶಪ್ರಾಯರಾಗಿದ್ದ ಅವರಿಗೆ ಸಾಕಷ್ಟು ಬಿರುದುಗಳು ಬಂದಿವೆ. ಅವರ ಚಲನಚಿತ್ರಗಳಲ್ಲಿರುವ ನೈತಿಕತೆಗಳು ನಮಗೆ ಮತ್ತು ನಮ್ಮ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಡಾ.ರಾಜ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರೇಗೌಡ ಮಾತನಾಡಿ, ಡಾ.ರಾಜ್ಕುಮಾರ್ ಅವರ ಸಾಕಷ್ಟು ಚಲನಚಿತ್ರಗಳ ಚಿತ್ರೀಕರಣಗಳು ನಡೆದಿವೆ. ಚಲನಚಿತ್ರ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.
ದಲಿತ ಸಂಘಟನೆಗಳ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಚಲನಚಿತ್ರಗಳಲ್ಲಿ ಲವ್ನಿಂದ ನೋವಿನವರೆಗೆ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದವರು. ಯಾವುದೇ ಮಾದಕ ವಸ್ತುಗಳ ಅಭ್ಯಾಸವಿಲ್ಲದವರು. ಮಹಿಳೆಯರನ್ನು ಗೌರವಿಸುವ ಮೌಲ್ಯಗಳು ಅವರ ಚಿತ್ರಗಳಲ್ಲಿರುತ್ತವೆ. ಈ ಎಲ್ಲ ಗುಣ ಲಕ್ಷಣಗಳಿಂದ ತಾವು ಪ್ರೇರಣೆ ಪಡೆದುದಾಗಿ ತಿಳಿಸಿದರು.
ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಡಾ.ರಾಜ್ ಅವರ ಬಗ್ಗೆ ಎಷ್ಟೇ ಮಾತನಾಡಿದರೂ ಅದು ಕಡಿಮೆಯೆ. ಅವರ ಅಭಿನಯವಾಗಲಿ, ಅವರ ಕಂಠಸಿರಿಯಾಗಲಿ ಅನುಪಮವಾದುದು ಎಂದರು. ಕನ್ನಡಸೇನೆ ಮುಖಂಡರಾದ ಹೆಚ್.ಎಸ್.ಲಕ್ಷ್ಮಣ ಮತ್ತಿತರರು ಮಾತನಾಡಿದರು.
ಪತ್ರಕರ್ತ ಪಿ.ರಾಜೇಶ್, ಲೋಕೇಶ್ ಭಕ್ತನಕಟ್ಟೆ ಹಾಗೂ ದೇವರಾಜ್, ಡಾ.ರಾಜ್ ಅವರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟನಾಯಕ ಅವರು ಡಾ.ರಾಜ್ ಅಭಿನಯದ ಚಲನಚಿತ್ರಗಳ ತುಣುಕು ಪ್ರದರ್ಶನಗಳನ್ನು ನೀಡಿ ರಂಜಿಸಿದರು.
ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಗ್ರಂಥಾಲಯಾಧಿಕಾರಿ ಪ್ರಕಾಶ್ ಬೆಳವಾಡಿ ವಂದಿಸಿದರು. ಮುಖಂಡರಾದ ಹೆಚ್.ಪಿ.ಮಂಜೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ, ಡಾ.ರಾಜ್ ಅಭಿಮಾನಿ ಸಂಘದ ಮುಖಂಡರು ಮತ್ತಿತರರು ಕಾರ್ಯಕಮದಲ್ಲಿದ್ದರು.
ಸಮಾರಂಭಕ್ಕೆ ಮುನ್ನ ನಗರ ತಾಲ್ಲೂಕು ಕಚೇರಿಯಿಂದ ಡಾ.ರಾಜ್ ಅಭಿಮಾನಿಗಳ ಸಂಘ ಹಾಗೂ ಕನ್ನಡಪರ ಸಂಘಟನೆಗಳಿಂದ ಡಾ.ರಾಜ್ ಅವರ ಭಾವಚಿತ್ರಗಳ ಸಹಿತ ಕುವೆಂಪು ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು.
Chikmagalur
ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಬೇಗಾನೆ ರಾಮಯ್ಯ ನಿಧನ

ಶೃಂಗೇರಿ: ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರೂ ಹಾಗೂ ಮಾಜಿ ಸಚಿವರೂ ಆಗಿದ್ದ ಬೇಗಾನೆ ರಾಮಯ್ಯ ಅವರು ಇಂದು ನಿಧನರಾಗಿದ್ದಾರೆ.
ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ತಂದೆಯವರಾದ ಬೇಗಾನೆ ರಾಮಯ್ಯ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಸುಮಾರು 1:45ಕ್ಕೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1978ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬೇಗಾನೆ ರಾಮಯ್ಯ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ನೀರು ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮಯ್ಯ, 1972 ರಲ್ಲಿ ನರಸಿಂಹರಾಜಪುರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರಾಗಿ ಗ್ರಾಮೀಣ ಅಬಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ ರಾಮಯ್ಯ ಶೃಂಗೇರಿ ಕ್ಷೇತ್ರ ಕಂಡ ಅಪರೂಪದ ರಾಜಕಾರಣಿ. ಕೆ.ಎನ್ ವೀರಪ್ಪ. ಗೌಡರ ಎದುರಿಗೆ ಪ್ರಚಂಡ ಮತಗಳಿಂದ ಗೆದ್ದ ರಾಮಯ್ಯ ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿದ್ದರು. ಮಲೆನಾಡು ಭಾಗದಲ್ಲಿ ಬೋರವೆಲ್ ರಾಮಯ್ಯ ಎಂದೇ ಜನಪ್ರಿಯರಾದರು. ಇವರ ಮಗಳು ಆರತಿ ಕೃಷ್ಣ ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದಾರೆ.
ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Chikmagalur
ರೈತರಿಗೆ ಉತ್ತಮ ದರ ಒದಗಿಸಲು ರೈತ ಉತ್ಪಾದಕ ಕಂಪನಿಗಳಿಗೆ ಉತ್ತೇಜನ ಚಿಕ್ಕಮಗಳೂರು, ಏ.೨೨: ರೈತರ ಕಷ್ಟದ ದುಡಿಮೆಯ ಬಹುಭಾಗ ಯಾವುದೇ ಬಂಡವಾ

ಚಿಕ್ಕಮಗಳೂರು, ಏ.೨೨: ರೈತರ ಕಷ್ಟದ ದುಡಿಮೆಯ ಬಹುಭಾಗ ಯಾವುದೇ ಬಂಡವಾಳ ಹೂಡದೆ, ಕಷ್ಟಪಡದೇ ಇರುವ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಿ ರೈತರ ಉತ್ಪನ್ನಗಳಿಗೆ ಉತ್ತಮ ದರ ಒದಗಿಸಬೇಕೆಂಬ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಸರ್ಕಾರ ಉತ್ತೇಜನ ನೀಡಲಾಗುತ್ತಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕಡೂರಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವ ಹಾಗೂ ಕಡೂರು ಪ್ರಗತಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಆರಂಭಿಸಿರುವ ರೈತ ಬಜಾರ್ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ರೈತ ಬಜಾರ್ ಕಲ್ಪನೆ ವಿನೂತನವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಸಾಕಷ್ಟು ವಿದ್ಯುತ್ ಶೇಖರಣೆ ಮಾಡಲಾಗಿದೆ. ಹೀಗಿದ್ದರೂ ಸಹ ತಮ್ಮ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಂಡಿದೆ. ಏಷ್ಯಾದಲ್ಲಿಯೇ ದೊಡ್ಡದಾದ ಸೋಲಾರ್ ಪಾರ್ಕ್ ಪಾವಗಡದಲ್ಲಿ ರೈತರ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದ್ದು, ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ರೈತರ ಸಹಯೋಗದಲ್ಲಿ ಇಲ್ಲಿ ೧೦ ಸಾವಿರ ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ೧೯೫೦೦ ಮೆಗಾವ್ಯಾಟ್ ಬೇಡಿಕೆ ಇದ್ದು, ಉದ್ದೇಶಿತ ಯೋಜನೆಗಳು ಕಾರ್ಯಗತವಾದರೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ನೆನೆಗುದಿಗೆ ಬಿದ್ದಿದ್ದ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದ ವ್ಯವಹರಿಸಿ ಕ್ರಮ ಕೈಗೊಳ್ಳಲಾಗಿದ್ದು ಒಂದು ವರ್ಷದೊಳಗೆ ೩೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕಾರ್ಯ ಆರಂಭವಾಗಲಿದೆ. ಕುಸುಮ್ ಬಿ. ಯೋಜನೆಯಡಿ ಶೇ.೮೦ ಸಹಾಯಧನದೊಂದಿಗೆ ಕೊಳವೆ ಬಾವಿ ಹೊಂದಿರುವ ರೈತರಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ವರ್ಷ ೪೦ ಸಾವಿರ ಪಂಪ್ಸೆಟ್ಗಳಿಗೆ ಈ ಅವಕಾಶ ಲಭ್ಯವಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗಾವಕಾಶ ದೊರೆಯಬೇಕೆಂಬ ಉದ್ದೇಶದಿಂದ ಕಡೂರಿನಲ್ಲಿ ಬಹುದೊಡ್ಡ ಗಾರ್ಮೆಂಟ್ಸ್ ಫ್ಯಾಕ್ಟರಿ ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶಾಸಕರ ಎಲ್ಲ ಪ್ರಯತ್ನಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ರೈತರ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸಿ ಲಾಭವಾಗಿಸುವ ಉದ್ದೇಶದಿಂದ ರೈತ ಬಜಾರ್ ಕಾರ್ಯಾರಂಭsವಾಗಿದೆ. ಟಿಎಪಿಸಿಎಂಎಸ್ನ ಈ ಕಾರ್ಯ ಪ್ರಶಂಸನೀಯ ಎಂದರಲ್ಲದೆ, ರಚನಾತ್ಮಕ ಕಾರ್ಯಗಳಿಗೆ ತಮ್ಮ ಸರ್ಕಾರದ ಸಹಕಾರ ಇರುವುದಾಗಿ ತಿಳಿಸಿದರು. ನಮ್ಮ ಕಾಂಗ್ರೆಸ್ ಸರ್ಕಾರ ಆ ಕಾರ್ಯಕ್ಕೆ ಚಾಲನೆ ನೀಡಿದೆ. ಸರ್ಕಾರದ ರೈತಪರ ಕಾಳಜಿಗೆ ಸಾಕ್ಷಿಯಾಗಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಭsದ್ರಾ ಉಪಕಣಿವೆ ಯೋಜನೆಯ ೨ ನೇ ಹಂತದ ಕಾಮಗಾರಿಗೆ ಒಂದೇ ಹಂತದಲ್ಲಿ ೪೦೦ ಕೋಟಿ ರೂ.ಗಳನ್ನು ಸರ್ಕಾರ ಒದಗಿಸಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಮಾತನಾಡಿ ಟಿಎಪಿಸಿಎಂಎಸ್, ರೈತ ಉತ್ಪಾದಕ ಕಂಪನಿ ಮತ್ತು ಅನಿಕೇತನ ಸಂಸ್ಥೆಯ ಸಹಭಾಗಿತ್ವದಲ್ಲಿ ಇಡೀ ರಾಜ್ಯದಲ್ಲಿ ಪ್ರಪ್ರಥಮವಾಗಿ ರೈತ ಬಜಾರ್ ಕಾರ್ಯಾರಂಭಗೊಂಡಿದ್ದು, ಮತ್ತಷ್ಟು ರೈತಪರ ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ಕೈಗೊಳ್ಳಲಾಗಿದೆ ಎಂದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರೈತ ಬಜಾರ್ ಸಾಮಾಜಿಕ ಜಾಲತಾಣವನ್ನು ಲೋಕಾರ್ಪಣೆ ಮಾಡಿದರು. ಕಂಸಾಗರ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಪುರಸಭೆಯ ಸದಸ್ಯರು, ರೈತ ಉತ್ಪಾದಕ ಕಂಪನಿಯ ಪದಾಧಿಕಾರಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
-
Mysore13 hours ago
ಅರಣ್ಯ ಇಲಾಖೆಯ ವಾಚರ್ ಆತ್ಮಹ*ತ್ಯೆ
-
Mysore14 hours ago
ನಂಜನಗೂಡಿನ ಸಬ್ ರಿಜಿಸ್ಟರ್ ಕಛೇರಿಗೆ ಬೀಗ: ಲೋಕಾಯುಕ್ತ ದಾಳಿ
-
National - International7 hours ago
ಪಹಲ್ಗಾಮ್ ದಾಳಿ; ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ವೀರ ಯೋಧ ಹುತಾತ್ಮ
-
State11 hours ago
ಕಾಶ್ಮೀರದ ಪೆಹಲ್ಗಾಮನಲ್ಲಿ ನಡೆದ ಉಗ್ರರ ದಾಳಿ ಖಂಡನೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ
-
National - International8 hours ago
ದಾಳಿ ನಡೆಸಿದ ಉಗ್ರರಿಗೆ ಊಹೆಗೂ ಮೀರಿದ ಶಿಕ್ಷೆ ನೀಡಲಾಗುವುದು: ಪ್ರಧಾನಿ ನರೇಂದ್ರ ಮೋದಿ
-
Kodagu23 hours ago
ಕೊಂಗಾಣದಲ್ಲಿ ಕಣ್ಣನೂರಿನ ಕೋಲಿಯಾ ಆಸ್ಪತ್ರೆಯ ಮಾಲೀಕನ ಕೊ*ಲೆ
-
Kodagu13 hours ago
ಜಿಲ್ಲಾ ಮಟ್ಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮ
-
Chamarajanagar10 hours ago
ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್