Uncategorized
ಹುಲಿ ದಾಳಿಗೆ ರೈತ ಬಲಿಯಾಗಿರುವ ಘಟನೆ

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೂಡು ಹೋಬಳಿ ಉಡುವೆಪುರ ಬಳಿಯ ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಉಡುವೆಪುರದ ಗಣೇಶ್ (58) ಮೃತ ರೈತ.
ಮೃತರಿಗೆ ಪತ್ನಿ, ಮೂವರು ಗಂಡು
ಮಕ್ಕಳಿದ್ದಾರೆ.ಇಂದು ಸಂಜೆ ಜಾನುವಾರಗಳನ್ನ ಮೇಯಿಸುಲು ಹೋಗಿದ್ದರು.ಸಂಜೆ ಜಾನುವಾರುಗಳು ಮಾತ್ರಮನೆಗೆ ವಾಪಸ್ ಆಗಿವೆ.ಆದರೆ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಡುಕಾಡದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್ ಶವ ಪತ್ತೆಯಾಗಿದೆ.ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮನ.ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯಾಗಿದೆ.
ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಅಲ್ಲದೆ
ಘಟನಾ ಸ್ಥಳಕ್ಕೆ ಶಾಸಕ ಜಿ.ಡಿ ಹರೀಶ್ ಗೌಡ ಭೇಟಿ ನೀಡಿ ಕುಟಬಸ್ಥರಿಗೆ ಸಾಂತ್ವಾನ ಹೇಳಿ 50 ಸಾವಿರ ಪರಿಹಾರ ನೀಡಿದ್ದಾರೆ.
Uncategorized
ಬಿರಿಯಾನಿ ತಿಂದು ೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಚಿಕ್ಕಮಗಳೂರು : ಬಿರಿಯಾನಿ ತಿಂದು 17 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.
ಒಂದು ದಿನ ಹಿಂದೆ ಮಾಡಿದ್ದ ಬಿರಿಯಾನಿ ತಿಂದಿದ್ದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಿರಿಯಾನಿ ಸೇವಿಸಿದವರಲ್ಲಿ 17 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ಮಾಡಲಾಗಿತ್ತು. ಆದರೆ, ಬಿರಿಯಾನಿಯನ್ನು ತಿಂದ ಕೂಡಲೇ ವಾಂತಿ ಭೇದಿಯಾಗಿದೆ.
ತಕ್ಷಣ ಅಸ್ವಸ್ಥಗೊಂಡವರನ್ನು ಕಡೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕ್ಕ ಪುಟ್ಟ ಮಕ್ಕಳು ಸೇರಿದಂತೆ 17 ಜನ ಅಸ್ವಸ್ಥಗೊಂಡು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ
Uncategorized
ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ

ಮಡಿಕೇರಿ : ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹೆಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ನ. 19 ರಂದು ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕುಂಜಿಲ ನಿವಾಸಿ ನೌಫಲ್ (25), ಎಮ್ಮೆಮಾಡು ಪೈಸಾರಿ ನಿವಾಸಿ ಸಾದಿಕ್ (32) ಎಂಬುವವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಜಿಲಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
Uncategorized
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಚನ್ನರಾಯಪಟ್ಟಣ ತಾಲ್ಲೂಕು ಅತ್ತಿಹಳ್ಳಿ ಗ್ರಾಮದ
ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನದ
ಜೀರ್ಣೋದ್ಧಾರ ಹಾಗೂ ಕಳಸ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೊತೆಯಲ್ಲಿ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ಹಾಗೂ ಗ್ರಾಮಸ್ಥರು ಇದ್ದರು.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ