Kodagu
ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ

ಕುಶಾಲನಗರ, : ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ್ಲೂರು ಹಳ್ಳಿಮನೆಯಲ್ಲಿ ನಡೆಯಿತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಭಾಷೆ ಬೆಳವಣಿಗೆ, ಸಾಹಿತ್ಯದ ಉಳಿವಿನಲ್ಲಿ ಕವಿಗಳ ಪಾತ್ರ ಮಹತ್ವದ್ದಾಗಿದೆ. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾಗಿದೆ. ನದಿ, ಪರಿಸರ ಸಂರಕ್ಷಣೆಗೆ ಪೂರಕವಾದ ಸಾಹಿತ್ಯಗಳು ಇನ್ನಷ್ಟು ಹೊರಹೊಮ್ಮಬೇಕಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರನ್ನು ಮರೆಯಬಾರದು. ಈ ಹಿನ್ನಲೆಯಲ್ಲಿ ಕುಶಾಲನಗರದಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಆರ್. ಗುಂಡೂರಾವ್ ಅವರ ಹೆಸರಿನಲ್ಲಿ ಕೊಡಗಿಗೆ ಮಂಜೂರಾಗಿರುವ ಏರ್ ಸ್ಟ್ರಿಪ್ ಉದ್ಘಾಟಿಸಬೇಕೆನ್ನುವ ಚಿಂತನೆ ಹೊಂದಲಾಗಿದೆ. ಸಾಹಿತಿಗಳ ಕೃತಿಗಳನ್ನು ಇ-ಬುಕ್ ಮಾದರಿಯಲ್ಲಿ ಹೊರತರುವುದರಿಂದ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲಭ್ಯವಾಗಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ನಡೆಯಲಿ. ಇದಕ್ಕೆ ಅಗತ್ಯ ಸಹಕಾರ ಒದಗಿಸುವುದಾಗಿ ತಿಳಿಸಿದರು.
ಕೊಡಗಿನ ಹಬ್ಬಗಳಲ್ಲಿ ಕೃಷಿಯೊಂದಿಗಿನ ಕಲೆಗಳು ಎಂಬ ವಿಷಯದ ಕುರಿತು ವಿಜಯ ಕರ್ನಾಟಕ ದಿನಪತ್ರಿಕೆ ಸ್ಥಾನೀಯ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ ವಿಚಾರ ಮಂಡಿಸಿದರು. ಕೊಡಗಿನ ಸಂಸ್ಕೃತಿ, ಆಚಾರ ವಿಚಾರ, ಕಲೆಗಳ ಹಿಂದೆ ಇರುವ ವಿಜ್ಞಾನವನ್ನು ನಾವು ಅರಿತುಕೊಳ್ಳುವ ಅಗತ್ಯವಿದೆ. ಕೊಡಗಿನ ಕೃಷಿಯಲ್ಲಿ ಜಾನಪದದ ಒಳನೋಟವಿದೆ. ಕೊಡಗಿನ ಪದ್ದತಿ, ನಡೆ, ಕಲೆಗಳಲ್ಲಿ ಪ್ರಕೃತಿಯ ಪಾಠ ಅಡಗಿದೆ. ಕಲೆಯೆಂದರೆ ಕೇವಲ ಪ್ರದರ್ಶನಕ್ಕೆ ಸೀಮಿತವಾದುದಲ್ಲ. ಕೃಷಿ ಪದ್ದತಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿರಿಯರು ವೈಜ್ಞಾನಿಕತೆ, ಪ್ರಕೃತಿಯ ಪಾಠ ಕಟ್ಟಿಕೊಟ್ಟಿದ್ದಾರೆ. ಅದನ್ನು ಇಂದು ಮರೆತಿರುವ ಕಾರಣ ದುರಂತಗಳು ಸಂಭವಿಸುತ್ತಿವೆ. ಇಂದಿನ ಪೀಳಿಗೆಗೆ ಜಾನಪದ ಕಲೆ ಎಂದರೆ ಅದು ಬಡವರಿಗೆ, ಕಲಾವಿದರಿಗೆ ಮಾತ್ರ ಸೀಮಿತ ಎಂಬ ಭಾವನೆಯಿದೆ. ಈ ಮನಸ್ಥಿತಿ ಬದಲಾಗಬೇಕು. ಕೊಡಗಿನ ಜಾನಪದ, ಸಮಗ್ರ ಕಲೆಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ಅದರ ಸತ್ಯ, ಸತ್ವವನ್ನು ತಿಳಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿಗಳು, ಪುಸಕ್ತ ಪ್ರಾಧಿಕಾರಗಳಿಗೆ ಅರ್ಹ ಸಾಹಿತ್ಯಗಳ ನೇಮಕವಾಗಬೇಕಿದೆ. ಆಗ ಮಾತ್ರ ಅಲ್ಲಿ ರಾಜಕೀಯ ರಹಿತವಾಗಿ ಒಂದಷ್ಟು ಅಧ್ಯಯನಗಳು ನಡೆಸಲು ಸಾಧ್ಯವಿದೆ. ಕೊಡಗು ಜಿಲ್ಲೆಯ ಗುಂಡುರಾವ್ ಅವರ ಬಗ್ಗೆ ಜೀವನಚರಿತ್ರೆ, ಕೃತಿ ಹೊರತರುವ ನಮ್ಮ ಜವಾಬ್ದಾರಿ ಮರೆಯಬಾರದು ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸವನ್ನು ಮುಂದಿನ ಪೀಳಿಗೆಗೆ ಪಸರಿಸುವ ಕಾರ್ಯ ಆಗಬೇಕಿದೆ. ಸುವರ್ಣ ಕರ್ನಾಟಕ ಸಂಭ್ರಮಕ್ಕೆ ಕಾರಣೀಭೂತರಾದವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಅಭಿವೃದ್ಧಿ ಹಾದಿಯ ಇತಿಹಾಸದ ಗ್ರಂಥ ರಚಿಸಿ ಲೋಕಾರ್ಪಣೆಗೊಳಿಸಲಾಗುವುದು. ಸಾಹಿತಿಗಳು,ಹಾಡುಗಾರರು, ಕೃತಿಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕಿಗ್ಗಾಲು ಗಿರೀಶ್ ರಚಿತ ನಗುವೆಂಬ ಟಾನಿಕ್ ಕೃತಿ ಬಿಡುಗಡೆ ಮಾಡಿದ ವಿ.ಪಿ.ಶಶಿಧರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸಿ, ಮನುಷ್ಯ ಪ್ರೀತಿಯನ್ನು ಸಮಾಜಕ್ಕೆ ಉಣಬಡಿಸುವ ಅಗತ್ಯತೆ ಜಗತ್ತಿಗೆ ಅನಿವಾರ್ಯವಾಗಿದೆ. ನಮ್ಮತನ ಕಾಪಾಡಿ ಇತರನ್ನು ಗೌರವಿಸುವ ಕೆಲಸ ಇಂತಹ ಕಾರ್ಯಕ್ರಮಗಳ ಮೂಲಕ ನೆರವೇರಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಬಳಗದ ಪ್ರಮುಖರಾದ ಫಿಲಿಪ್ ವಾಸ್, ಸಿ.ಟಿ.ಸೋಮಶೇಖರ್, ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಮಾಲಾದೇವಿ, ಜಗದೀಶ್ ಜೋಡುಬೀಟಿ, ಸಂಗೀತ ರವಿರಾಜ್, ರಾಣಿ ರವೀಂದ್ರ, ಟೋಮಿ ಥಾಮಸ್, ಕುಡೆಕಲ್ ಸಂತೋಷ್, ಎಂ.ಡಿ.ರಂಗಸ್ವಾಮಿ ಮತ್ತಿತರರು ಇದ್ದರು.
ಮಡಿಕೇರಿ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಕೋರನ ಸರಸ್ವತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕವಿಗಳು ತಮ್ಮ ಕವನ ವಾಚಿಸಿದರು.
ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ
Kodagu
ಕಸ ವಿಲೇವಾರಿಗೆ ವಿರೋಧ: 4ನೇ ದಿನಕ್ಕೆ ಮುಂದುವರಿದ ಅಹೋರಾತ್ರಿ ಪ್ರತಿಭಟನೆ

ಸಿದ್ದಾಪುರ: ವೀರಾಜಪೇಟೆ ತಾಲ್ಲೂಕಿನ, ಮಾಲ್ದಾರೆ ಗ್ರಾಮ ಪಂಚಾಯಿತಿ ಚೊಟ್ಟೆಪಾಳಿ (ಕಲ್ಲಳ್ಳ) ಜಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಕಸವಿಲೇವಾರಿ ಕೇಂದ್ರ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಹುಜನ ಸಮಾಜ ಪಾರ್ಟಿ ನೇತ್ರತ್ವದಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಾಲ್ಕನೇ ದಿನ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ್ದಾರೆ.
ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ ಮಾಲ್ದಾರೆ ಗ್ರಾಮ ಪಂಚಾಯತಿ ಮುಂದೆ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೂ ಮುಂದುವರೆದಿದ್ದು ನಮ್ಮ ಮನವಿಗೆ ಮತ್ತು ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಆಡಳಿತ ನಡೆಸುವ ಸರ್ಕಾರ ವಿರುದ್ಧ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಈ ಹೋರಾಟದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಏನೇ ಹೆಚ್ಚು ಕಮ್ಮಿಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಅಧಿಕಾರಿಗಳು ಹಾಗೂ ಆಡಳಿತದ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಾಗೂ ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೆಜರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಪ್ರತಿಭಟನೆಗಾರರು ಮನವಿ ಪತ್ರ ಇದೆ ಸಂದರ್ಭ ನೀಡಿದರು.
ಪ್ರತಿಭಟನೆಯಲ್ಲಿ ಬ್ರಿಗೇಡ್ ಸಂಘಟನೆಯ ರಾಜ್ಯಾಧ್ಯಕ್ಷ ರೇವತಿ ರಾಜ್, ಬಹುಜನ ಭಾಗ್ಯ ವಿಧಾತಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಚೇತನ್ ಕುಮಾರ್, ಹಾಗೂ ಸ್ಥಳೀಯ ಕಾಫಿ ಬೆಳೆಗಾರರಾದ ಬೋಪಣ್ಣ, ರಾಮಚಂದ್ರ, ವಿಷ್ಣು, ರೋಹನ್,ಸೇದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಜರಿದ್ದರು
Kodagu
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ

ಮಡಿಕೇರಿ : ಮಡಿಕೇರಿ ಕಾಟಕೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಅಡಿಗೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಡಿಕೇರಿ-ಮಂಗಳೂರು ಮುಖ್ಯರಸ್ತೆಯ ಕಾಟಕೇರಿ ಬಳಿಯ ಪ್ರಶಾಂತಿ ಹೋಂ ಸ್ಟೇ ಎದುರು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್ ಸವಾರ ನಾಪೋಕ್ಲು ಬಳಿಯ ಕಕ್ಕಬ್ಬೆ ನಿವಾಸಿ ಬೆಟ್ಟಗೇರಿಯಲ್ಲಿ ವಾಸವಿರುವ ಶರತ್ (28) ಮೃತ ವ್ಯಕ್ತಿ.
ಮಡಿಕೇರಿ ಮಂಗಳೂರು ಮುಖ್ಯರಸ್ತೆಯಲ್ಲಿ ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Kodagu
ವಿದ್ಯಾರ್ಥಿನಿ ಗಾಯತ್ರಿಗೆ ಸನ್ಮಾನ

ಕುಶಾಲನಗರ : ಕುಶಾಲನಗರ ನಳಂದ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ದ್ವಿತೀಯ ಪಿಯು (ವಿಜ್ಞಾನ) ವಿದ್ಯಾರ್ಥಿನಿ ಗಾಯತ್ರಿ ಕೆ 2023-24 ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿರುತಾರೆ. ಇವರು 600 ಕ್ಕೆ 597 ಅಂಕಗಳನ್ನು ಗಳಿಸಿದ್ದು, ಈ ಸಾಧನೆಗಾಗಿ ವಿದ್ಯಾರ್ಥಿಯನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಸತಿ ನಿರ್ದೇಶಕ ನಾಮ್ಗಿಲ್ ಎನ್, ಶೈಕ್ಷಣಿಕ ಸಲಹೆಗಾರ ಎಫ್ ಎ ಎಸ್ ಸುರೇಂದ್ರ, ಪ್ರಾಂಶುಪಾಲ ಷಜಿ ಅಲುಂಗಲ್ ಜೋಸೆಫ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕವಿತಾ ಸತಪನ್, ಗಾಯತ್ರಿಯವರಿಗೆ ಪ್ರಶಸ್ತಿ ಯನ್ನು ನೀಡಿ ತಲಾ 2 ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಿ ಗಾಯತ್ರಿಯನ್ನು ಸನ್ಮಾನ ಮಾಡಿದರು.
-
Special11 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State7 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan8 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State8 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State6 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?
-
Kodagu5 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan5 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು
-
Hassan4 hours ago
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ