Hassan
ಹಿರಿಯ ನಾಗರಿಕರ ದಿನಾಚರಣೆ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ

ಚನ್ನರಾಯಪಟ್ಟಣ : ನಿಯಮಿತ ಆಹಾರ ಸೇವನೆಯಿಂದ ಆರೋಗ್ಯಕರವಾದ ಜೀವನ ನಡೆಸಬಹುದು ಎಂದು ಎರಡನೇ ಅಧಿಕ ಸಿವಿಲ್ ನ್ಯಾಯಾಧೀಶೆ ಪಿ.ಮಮತ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಆವರಣದಲ್ಲಿ ಶುಕ್ರವಾರದಂದು ಸಾರ್ವಜನಿಕ ಆಸ್ಪತ್ರೆ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮತ್ತು ಲಯನ್ಸ್ ಸನ್ ರೈಸ್ ಸೇವಾ ಸಂಸ್ಥೆ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ದಿನಾಚರಣೆ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೈಹಿಕವಾಗಿ ಸದೃಢವಾಗಿ ಆರೋಗ್ಯಯುತವಾಗಿದ್ದರೂ ಮನಸ್ಸು ದುರ್ಬಲವಾಗಿದ್ದರೆ ನೂರಾರು ಕಾಯಿಲೆಗಳು ಬರುವ ಸಾಧ್ಯತೆಯಿದೆ.
ಅವರು ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಪೂರ್ಣವಾಗಿ ಸ್ವಸ್ಥವಾಗಿರುವುದು.
ಹಿರಿಯ ನಾಗರಿಕರನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳು ತಂದೆ ತಾಯಿಗಳನ್ನು ಗೌರವಾದರಗಳಿಂದ ಕಾಣಬೇಕು. ಹಿರಿಯ ನಾಗರಿಕರಿಗೆ ಅನ್ಯಾಯವಾದಾಗ, ಅವರಿಗಾಗಿ ಕಾನೂನುಗಳಿವೆ. ಅವುಗಳ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ ಮಹೇಶ್ ಮಾತನಾಡಿ ಹಿರಿಯ ನಾಗರಿಕರು ನಮ್ಮ ಕುಟುಂಬಗಳ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಿದ್ದಾರೆ.ಅವರ ಮೂಲಭೂತ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯ ಹಾಗೂ ಹೊಸ ಪೀಳಿಗೆಯ ಕರ್ತವ್ಯವಾಗಿದೆ.ಆಧುನಿಕ ಜಗತ್ತಿನಲ್ಲಿ ನಿರ್ಲಕ್ಷಿತ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರು ಪ್ರಮುಖರಾಗಿದ್ದಾರೆ. ತಮ್ಮ ಜೀವನದ ಕೊನೆಯಲ್ಲಿ, ಆಸ್ತಿ ಹಂಚಿಕೆ, ಹಣಕಾಸಿನ ವ್ಯವಹಾರಗಳು ಸೇರಿದಂತೆ ವಿವಿಧ ಕಾರಣಗಳಿಂದ, ಹಿರಿಯ ನಾಗರಿಕರು ತಮ್ಮ ಮಕ್ಕಳು ಮತ್ತು ಸಂಬಂಧಗಳಿಂದ ವಂಚನೆಗೆ ಒಳಗಾಗಿ ಜತೆಗೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.ಹಿರಿಯ ನಾಗರಿಕರು ಅನೇಕ ರೀತಿಯ ದರ್ಪ-ದೌರ್ಜನ್ಯಗಳಿಗೆ ತುತ್ತಾಗಿದ್ದಾರೆ.
ಇಂತಹ ಅಪರಾಧಗಳನ್ನು ನಿರ್ಮೂಲನೆ ಮಾಡಬೇಕು. ವೃದ್ಧಾಪ್ಯದಲ್ಲಿ ನಮ್ಮ ಸೇವೆ ಮಾಡಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಶಯವಾಗಿದೆ.ಆದರೆ ಸದ್ಯ ಪರಿಸ್ಥಿತಿ ಹದಗೆಟ್ಟಿದೆ. ಜೀವನದುದ್ದಕ್ಕೂ ಹೆತ್ತವರ ಸೇವೆ ಮಾಡುವುದು ಮಕ್ಕಳ ಜವಾಬ್ದಾರಿ. ಆದರೆ ಇಂದು ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಅವರನ್ನು ದೂರವಿಡುವುದು ಸಾಮಾನ್ಯ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು.
ಹಾಸನ ವೈದ್ಯಕೀಯ ವಿದ್ಯಾಲಯದ ಮಾನಸಿಕ ರೋಗ ತಜ್ಞೆ ಡಾ. ಶಶಿಧಾರಣಿ ಹಾಗೂ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ರವೀಂದ್ರ.ಕೆ.ಪಿ. ಮಾನಸಿಕ ಆರೋಗ್ಯದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ವಕೀಲರ ಸಂಘದ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿದರು ಸಾರ್ವಜನಿಕ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ. ಯೋಗೀಶ್.ಕೆ.ಆರ್, ಮಕ್ಕಳ ತಜ್ಞ ಡಾ.ಮಾಲಿನಿ.ಟಿ, ಕ್ಷಕಿರಣ ತಜ್ಞ ಗುರುಮೂರ್ತಿ, ವಕೀಲರ ಸಂಘದ ಸಹಕಾರಿದರ್ಶಿ ಕಾವ್ಯ, ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಲಯನ್ಸ್ ನಾಗರಾಜು, ಸುಬ್ರಮಣ್ಯ, ಗೋವಿಂದರಾಜ್, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ದಯಾನಂದ್ ಶೆಟ್ಟಿಹಳ್ಳಿ.
Hassan
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ

ಹಾಸನ : ಕಾಡಾನೆ ಸೆರೆ, ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಭಾರೀ ದುರಂತ
ಕಾಡಾನೆ ದಾಳಿಗೆ ಪಳಗಿದ ಆನೆ ಅರ್ಜುನ ಬಲಿ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಯಸಳೂರು ಬಾಳೆಕೆರೆ ಫಾರೆಸ್ಟ್ ನಲ್ಲಿ ಘಟನೆ
ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಇಂದೂ ಕಾರ್ಯಾ ಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ
ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಅರ್ಜುನನ ಮೇಲೆ ಅಟ್ಯಾಕ್ ಮಾಡಿದ ಒಂಟಿ ಸಲಗ
ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಹಿಮ್ಮೆಟ್ಟಿದ ಉಳಿದ ಮೂರು ಸಾಕಾನೆಗಳು
ಒಂಟಿ ಸಲಗದ ಜೊತೆ ಕಾಳಗಕ್ಕಿಳಿದ ಅರ್ಜುನ
ಮದಗಜಗಳ ಕಾಳಗದಲ್ಲಿ ವೀರ ಮರಣ ಹೊಂದಿದ ಅರ್ಜುನ
ಎರಡು ಸಲಗ ಕಾಳಗಕ್ಕೆ ಇಳಿಯುತ್ತಿದ್ದಂತೆಯೇ ಅರ್ಜುನನ ಮೇಲಿನಿಂದ ಇಳಿದು ಓಡಿದ ಮಾವುತರು
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಅರ್ಜುನ ಆನೆ ಸಾವಿನಿಂದ ಪ್ರಾಣಿಪ್ರಿಯರಿಗೆ ಶಾಕ್
ಹೊಟ್ಟೆ ಭಾಗಕ್ಕೆ ತಿವಿತಕ್ಕೆ ಒಳಗಾಗಿ ಕಣ್ಮುಚ್ಚಿದ ಅರ್ಜುನ
ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಜನಮನಗೆದ್ದಿದ್ದ ಅರ್ಜುನ
ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ
2012 ರಿಂದ 19 ರವರೆಗೆ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅರ್ಜುನ.
ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್
ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರು
ನ. 24 ರಿಂದ ಆರಂಭವಾಗಿದ್ದ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಕಾಡಾನೆ ಸೆರೆ, ಸ್ಥಳಾಂತರ ಕಾರ್ಯಾಚರಣೆ
Hassan
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಹಾಸನ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ
ಬೈಕ್ ಸವಾರ ಸ್ಥಳದಲ್ಲೇ ಸಾವು
ಮತ್ತಿಘಟ್ಟ ಗ್ರಾಮದ ವೇಣುಗೋಪಾಲ್ (38) ಮೃತ ವ್ಯಕ್ತಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಳೇಬೀಡು-ಜಾವಗಲ್ ರಸ್ತೆಯಲ್ಲಿ ಘಟನೆ
ಸ್ವಗ್ರಾಮ ಮತ್ತಿಘಟ್ಟಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಣುಗೋಪಾಲ್
ಈ ವೇಳೆ ಡಿಕ್ಕಿ ಹೊಡೆದಿರುವ ಅಪರಿಚಿತ ವಾಹನ
ಅಪಘಾತದ ನಂತರ ವಾಹನ ನಿಲ್ಲಿಸದೆ ಎಸ್ಕೇಪ್ ಆಗಿರುವ ಚಾಲಕ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಯಸಳೂರು ಆರ್‌ಎಫ್‌ಓ ಜಗದೀಶ್ ಅಮಾನತು

ಹಾಸನ : ಯಸಳೂರು ಆರ್‌ಎಫ್‌ಓ ಜಗದೀಶ್ ಅಮಾನತು
ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರಚ ದಿಕ್ಷಿತ್‌ರಿಂದ ಆದೇಶ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಯಸಳೂರು ಆರ್‌ಎಫ್‌ಓ ಜಗದೀಶ್
ಹಾಸನ ಜಿಲ್ಲೆ, ಸಕಲೇಸಪುರ ತಾಲ್ಲೂಕು ಯಸಳೂರು ಆರ್‌ಎಫ್‌ಓ ಜಗದೀಶ್
ಸೀಜ್ ಮಾಡಿದ್ದ ಜೆಸಿಬಿ ಬಿಡುಗಡೆಗಾಗಿ 1.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಜಗದೀಶ್
ಬಾಚೀಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣ ಮಾಡುವ ವೇಳೆ ಸೀಜ್ ಆಗಿದ್ದ ಜೆಸಿಬಿ
ಜೆಸಿಬಿ ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದ ಆರ್‌ಎಫ್ಒ ಜಗದೀಶ್
ಆರ್‌ಎಫ್‌ಓಯಿಂದ ಜೆಸಿಬಿ ದುರ್ಬಳಕೆ ಸಾಬೀತಾದ ಹಿನ್ನಲೆ
ಜಗದೀಶ್ ಅಮಾನತುಗೊಳಿಸಿ ಆದೇಶ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Hassan4 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Mysore2 months ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore3 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ