Hassan
ಹಾಸನ ಸುಪ್ರೀಂಕೋರ್ಟ್ ನಲ್ಲಿ ಇಂದು ಸಂಸದ ಪ್ರಜ್ವಲ್ ರೇವಣ್ಣಗೆ ಅಗ್ನಿ ಪರೀಕ್ಷೆ
ಲೋಕಸಭಾ ಚುನಾವಣೆ ವೇಳೆಯಲ್ಲಿ ಪ್ರಮಾಣ ಪತ್ರದಲ್ಲಿ ಅಸ್ತಿ ವಿವರ ಮುಚ್ಚಿಟ್ಟ ಪ್ರಕರಣ
ಸಂಸತ್ ಸ್ಥಾನ ಅಸಿಂಧುಗೊಳಿಸಿ ರಾಜ್ಯ ಹೈಕೋರ್ಟ್
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿ ಲೇರಿದ್ದ ಪ್ರಜ್ವಲ್ ರೇವಣ್ಣ
ಇಂದು ತೀರ್ಪು ಪ್ರಕಟಿಸಲಿರೊ ಸರ್ವೋಚ್ಚ ನ್ಯಾಯಾಲಯ
ಪ್ರಜ್ವಲ್ ರೇವಣ್ಣರ ಸದಸ್ಯ ತ್ವ ಅಸಿಂಧು ಬಳಿಕ ಕುತೂಹಲ ಮೂಡಿಸಿದ ಇಂದಿನ ತೀರ್ಪು

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಹತ್ವ ಪಡೆದುಕೊಳ್ಳಲಿರೊ ಇಂದಿನತೀರ್ಫು
ಇಂದು ಮಾಜಿ ಪ್ರದಾನಿ ದೇವೇಗೌಡರ ಮೊಮ್ಮಗನ ಭವಿಷ್ಯನಿರ್ದರಿಸಲಿರೊ ಸುಪ್ರೀಂಕೋರ್ಟ್ ತೀರ್ಪು
ಹೈಕೋರ್ಟ್ ಆದೇಶ ಎತ್ತಿಹಿಡಿದರೆ ಆರು ವರ್ಷ ಚುನಾವಣೆ ಗೆ ಸ್ಪರ್ದೆ ಮಾಡಲು ಅವಕಾಶವೇ ಸಿಗದಿರೊ ಆತಂಕ
ದೊಡ್ಡಗೌಡರ ಕುಟುಂಬದ ಪಾಲಿಗೆ ಮಹತ್ವ ಪಡೆದುಕೊಂಡ ಇಂದಿನ ತೀರ್ಪು
ಹೈಕೋರ್ಟ್ ನಲ್ಲಿ ಪ್ರಜ್ವಲ್ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ವಕೀಲ ದೇವರಾಜೇಗೌಡ
Hassan
ಹಾಸನ: ಕುಮಾರಧಾರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಿಕ್ಷಕರ ದಿನಾಚರಣೆ
ಹಾಸನ: ನಗರದ ಗೊರೂರು ರಸ್ತೆಯಲ್ಲಿರುವ ಕುಮಾರಧಾರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಅದ್ದೂರಿಯಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ತಾರಾಮಣಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಕ್ಷಕಿಯರಾದ ರಜಿನಿ, ಮೇಘನಾ, ರೇಖಾ, ಸಾನಿಯಾ, ನಯನಾ, ಪ್ರೇಮ ಹಾಗೂ
ಸಹನಾರವರಿಗೆ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು, ಶಿಕ್ಷಕಿಯರಿಗೆ ಅನೇಕ ವಿಧದ ಆಟಗಳನ್ನೆರ್ಪಡಿಸಿ ಸಂತಸಪಟ್ಟರು. ಕಾರ್ಯದರ್ಶಿಗಳಾದ
ಶ್ರೀ ಶಶಾಂಕ್ ರವರು ಶಿಕ್ಷಕಿಯರಿಗೆ ಸನ್ಮಾನಿಸಿ ಸಿಹಿ ವಿತರಿಸಿದರು.
Hassan
ಸಕಲೇಶಪುರ: ಹದಗೆಟ್ಟ ಆಗನಿ ರಸ್ತೆ ಕೂಡಲೇ ದುರಸ್ಥಿ ಪಡಿಸಿ
ವರದಿ: ಸಿ.ಎಲ್. ಪೂರ್ಣೇಶ್ ಚಕ್ಕುಡಿಗೆ
ಸಕಲೇಶಪುರ : ಹಾನುಬಾಳು ಹೋಬಳಿಯ ದೇವಾಲದಕೆರೆ ಮುಖ್ಯ ರಸ್ತೆಯಿಂದ ಅಗನಿ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ತಕ್ಷಣ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಅಚ್ಚ ಹಸಿರನ್ನೇ ಚಾಚಿ ಮಲಗಿರುವ ಪಶ್ಚಿಮ ಘಟ್ಟದ ಗುಡ್ಡ ಗಾಡು ಪ್ರದೇಶವನ್ನು ಒಳಗೊಂಡ ಸುಂದರ ಪ್ರವಾಸಿ ತಾಣವಾದ ಅಗನಿ ಗುಡ್ಡಗಳು ಪ್ರವಾಸಿಗರನ್ನು ಕೈ ಬೀಸಿ ಕರಿಯತ್ತಿವೆ. ಆಗನಿ ಊರಿನ ರಸ್ತೆಯ ಸ್ಥಿತಿಯಂತೂ ಹದಗೆಟ್ಟಿದೆ. ಇಲ್ಲಿ ಸ್ವಲ್ಪ ಮಳೆ ಬಂದರು ಸಾಕು ಎಲ್ಲಂದರಲ್ಲಿ ಬೃಹತ್ ಹೊಂಡಗಳಲ್ಲಿ ನೀರು ತುಂಬಿ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.
ಪ್ರವಾಸಿ ತಾಣ ಅಗನಿಯಲ್ಲಿ ಸುಮಾರು ಎಂಟು ರೆಸಾರ್ಟ್ ಗಳು ಇಪ್ಪತ್ತಕ್ಕೂ ಹೆಚ್ಚು ಹೋಂ ಸ್ಟೇ ಗಳಿದ್ದು ರಜಾ ದಿನದಲ್ಲಿ ನೂರಾರು ಪ್ರವಾಸಿಗರು ಇ ಗ್ರಾಮಕ್ಕೆ ಬರುತ್ತಾರೆ ಇಲ್ಲಿನ ಆರ್ಥಿಕ ಕೊಡುಗೆ ಪ್ರವಾಸಿ ಕ್ಷೆತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಸ್ಥಳೀಯವಾಗಿ ಎಷ್ಟೋ ಯುವಕರಿಗೆ ಉದ್ಯೋಗ ನೀಡವೆ ಇ ರೆಸಾರ್ಟ್ ಮತ್ತು ಹೋಂ ಸ್ಟೇ ಗಳು. ಇ ರೆಸಾರ್ಟ್ ಗಳ ಮಾಲೀಕರು ಲಕ್ಷಾಂತರ ರೂಪಾಯಿಗಳ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಾರೆ ಆದರೂ ಇ ಗ್ರಾಮಕ್ಕೆ ಸರಿಯಾದ ಮುಲಭೂತ ಸೌಕರ್ಯಗಳಿಲ್ಲ ಇನ್ನಾದರೂ ಇಂತ ಪ್ರವಾಸಿ ತಾಣವಾದ ಅಗನಿ ಗ್ರಾಮವನ್ನು ಪ್ರವಾಸೋದ್ಯಮ ಇಲಾಖೆಯವರಾಗಲಿ, ಸ್ಥಳೀಯ ಶಾಸಕರು ಇ ಗ್ರಾಮಕ್ಕೊಂದು ಸುಸಜ್ಜಿತ ರಸ್ತೆ ನಿರ್ಮಿಸಿ ಇಲ್ಲಿನ ಜನರು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ರಾಜ್ಯ ಸರ್ಕಾರ ಕೂಡಲೆ ಇ ರಸ್ತೆ ಅಭಿರುದ್ದಿಗೆ ಕ್ರಮವಹಿಸಲಿ ಎಂದು ಅಗನಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಹಾನುಬಾಳು ಗ್ರಾಮದ ಅವರೇಕಾಡು ಪೃಥ್ವಿ ಮಾತನಾಡಿದ್ದು, ಇಲ್ಲಿನ ಸ್ಥಳೀಯರು ಉದ್ಯೋಗ ಕೇಳುವದಿಲ್ಲ, ತಮ್ಮ ತೋಟಗದ್ದೆಗಳಿಗೆ ನೀರಾವರಿ ಯೋಜನೆಗಳನ್ನು ಕೇಳುವದಿಲ್ಲ. ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಉದ್ಯೋಗ ಅಥವಾ ಇನ್ನಿತರ ಸರ್ಕಾರಿ ಯೋಜನೆ ಕೇಳುವದಿಲ್ಲ. ಮಲೆನಾಡಿನ ಜನರು ಕೇಳುವದು ಒಂದೆ ಅದು ಸರ್ವ ಋತು ರಸ್ತೆ. ಅಗನಿ ರಸ್ತೆಯನ್ನು ಕೂಡಲೆ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಲು ಜನಪ್ರತಿನಿದಿನಗಳು ಗಮನಹರಿಸಲಿ ಎಂದರು.
ರಜಾಕ್ ಪಿಡಬ್ಲ್ಯೂಡಿ ಇಂಜಿನಿಯರ್ ಸಕಲೇಶಪುರ ಅವರು ಮಾತನಾಡಿ, ಅಗನಿ ರಸ್ತೆ ಅಭಿರುದ್ದಿಗೆ ಈಗಾಗಲೇ ಒಂದು ಕೋಟಿ ಎಪ್ಪತ್ತು ಲಕ್ಷ ಅನುದಾನ ಮಂಜೂರಾಗಿದ್ದು ಟೆಂಡರ್ ಕೂಡ ಆಗಿದ್ದು ಮಳೆಯಿಂದ ಕೆಲಸ ಮಾಡಲು ಸಾಧ್ಯವಾಗಿರುವದಿಲ್ಲ ಒಂದು ಕೀಲೋ ಮೀಟರ್ ಟಾರ್ ರಸ್ತೆ ಹಾಗೂ ಸುಮಾರು 350 ಮೀ ಕಾಂಕ್ರಿಟ್ ರಸ್ತೆ ಹಾಗೂ ಒಂದು ಮೋರಿಯನ್ನು ಮಳೆ ಮುಗಿದ ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
Hassan
ಹಾಸನ: ಗೃಹ ನಿರ್ಮಾಣ ಸಹಕಾರ ಸಂಘದಿಂದ ತೇಜೋದಯ ವೃದ್ಧಾಶ್ರಮಕ್ಕೆ ನೆರವು
ಹಾಸನ: ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ತೇಜೋದಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ಜೀವಿಗಳಿಗೆ ಬೆಂಬಲ ಒದಗಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವೆಯನ್ನು ಮೆಚ್ಚಿದರು. ಆಶ್ರಮದ ನಿರ್ವಾಹಕರಾದ ಶ್ರೀ ತೇಜ ಅವರನ್ನು ಅಭಿನಂದಿಸಿ, ಸಂಘದ ಪರವಾಗಿ ಕೈಲಾದ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಹಿರಿಯ ಜೀವಿಗಳಿಗೆ ಹಣ್ಣು, ಹಂಪಲು ಮತ್ತು ಊಟದ ವ್ಯವಸ್ಥೆ ಮಾಡಲಾಯಿತು.

ಇದೆ ವೇಳೆ ಅಧ್ಯಕ್ಷರು ಮಾತನಾಡಿ, ನಮ್ಮ ಸಂಘದ ನಿರ್ದೇಶಕರು ಭವಿಷ್ಯದಲ್ಲಿಯೂ ತಮ್ಮ ಕೈಲಾದಷ್ಟು ಸಹಾಯ ಮುಂದುವರಿಸಬೇಕು ಎಂದು ಕೋರಿದರು. ಇತ್ತೀಚಿನ ಸ್ವಾರ್ಥಪರ ಸಮಾಜದಲ್ಲಿ, ಸ್ವಾರ್ಥರಹಿತವಾಗಿ ಸೇವೆ ಸಲ್ಲಿಸುತ್ತಿರುವ ತೇಜ ಅವರ ನಿಸ್ವಾರ್ಥ ಮನೋಭಾವವನ್ನು ಶ್ಲಾಘಿಸಿ ಗೌರವಿಸಲಾಯಿತು. ಅಶ್ರಮಕ್ಕೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಂಘದ ವತಿಯಿಂದ ರೂ.೨೫,೦೦೦ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಸಾವಿತ್ರಮ್ಮ, ದಾಕ್ಷಾಯಿಣಿ, ವರುಣ್ ಕುಮಾರ್, ಸುರೇಶ್, ಕಾರ್ಯದರ್ಶಿ ಪ್ರವೀಣ್, ಹಾಗೂ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪರಮೇಶ್ ಎಂ.ಎನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
-
Mysore24 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ
-
Mysore10 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ
-
Kodagu6 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ
-
Manglore3 hours agoಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ‘ಸ್ಕೈವಾಕರ್’ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯ
-
Mandya23 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ
-
Hassan5 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್
-
National22 minutes agoಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ. ರಾಧಾಕೃಷ್ಣನ್
-
Hassan23 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ
