Connect with us

Hassan

ಹಾಸನ- ಮಾಜಿ ಸಚಿವ ರೇವಣ್ಣ ಹಠಾತ್ ಬಂಧನ

Published

on

ಹಾಸನ- ಮಾಜಿ ಸಚಿವ ರೇವಣ್ಣ ಹಠಾತ್ ಬಂಧನ

ಹೊಳೆನರಸೀಪುರ ದಲ್ಲಿ ಮಡುಗಟ್ಟಿದ ಆತಂಕ

ತಮ್ಮ ನಾಯಕನ ಬಂಧನ ಖಂಡಿಸಿ ಇಂದು ಪ್ರತಿಭಟನೆ ನಡೆಸಲು ಸಜ್ಜಾದ ಜೆಡಿಎಸ್

ಹೊಳೆನರಸೀಪುರ ದಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆಗೆ ತಯಾರಿ

ಇಂದು ಪಟ್ಟಣ ಬಂದ್ ಗೆ ಕರೆ: ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ

ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಿರೊ ಜೆಡಿಎಸ್ ನಾಯಕರು

ಸತತ 20 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದ ಶಾಸಕರಾಗಿರೊ ರೇವಣ್ಣ

ಹೊಳೆನರಸೀಪುರ ದಿಂದ ಗೆದ್ದು ಶಾಸಕ ಸಚಿವನಾಗಿ ಕೆಲಸ ಮಾಡಿದ್ದ ಎಚ್ಡಿ ಆರ್

ಪುತ್ರನ ರಕ್ಷಣೆಗೆಂದು ಸಂತ್ರಸ್ಥ ಮಹಿಳೆ ಅಪಹರಣ ಕೇಸ್ ನಲ್ಲಿ ರೇವಣ್ಣ ಬಂಧನ

ರೇವಣ್ಣ ಬಂಧನದಿಂದ ಆಘಾತಗೊಂಡಿರೊ ಜೆಡಿಎಸ್ ಪಡೆ

ಬಹಿರಂಗವಾಗಿ ಮುಕ್ತವಾಗಿ ಸಮರ್ಥನೆ ಮಾಡಿಕೊಳ್ಳಲಾಗದ ಅಸಹಾಯಕ ಸ್ಥಿತಿಗೆ ತಲುಪಿ ದ ಜೆಡಿಎಸ್ ಶಾಸಕರು, ನಾಯಕರು

ಘಟನೆ ಬಂಧನ ಖಂಡಿಸಿ ಹೊಳೆನರಸೀಪುರ ದಲ್ಲಿ ಪ್ರತಿಭಟನೆಗೆ ನಿರ್ದಾರ

ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋವಸ್ತ್

Continue Reading
Click to comment

Leave a Reply

Your email address will not be published. Required fields are marked *

Hassan

ಎಟಿಎಂ ಮಿಷಿನ್ ಕದ್ದೊಯ್ದ ಕಳ್ಳರು: ಹಾಸನದಲ್ಲಿ ಎರಡನೇ ಪ್ರಕರಣ ದಾಖಲು

Published

on

ಹಾಸನ : ಎಟಿಎಂ ಮಿಷನ್‌ನನ್ನೇ ಕದ್ದೊಯ್ದ ಕಳ್ಳರು

ಹಣದ ಸಮೇತ ಎಟಿಎಂ ಮಿಷನ್ ಕಳ್ಳತನ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಉದಯಪುರ ಗ್ರಾಮದಲ್ಲಿ ತಡರಾತ್ರಿ ಘಟನೆ

ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಎಟಿಎಂ ಕೇಂದ್ರ

ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣ

ಹಣದ ಸಮೇತ ಇಂಡಿಯನ್ ಬ್ಯಾಂಕ್‌ನ ಎಟಿಎಂ ಮಿಷನ್ ಕದ್ದೊಯ್ದ ಚೋರರು

ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಜ.29 ರಂದು ಹಾಸನದ ಹನುಮಂತಪುರದಲ್ಲಿ ಕಳುವಾಗಿದ್ದ ಎಟಿಎಂ ಮಿಷನ್

ಇದುವರೆಗೂ ಪೊಲೀಸರ ಕೈಗೆ ಸಿಗದ ಚೋರರು

ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳ್ಳತನ

Continue Reading

Hassan

ಜನರ ಮೇಲಿ ಕಾಳಜಿಯಿಂದ ಶಾಸಕರು ಅರಣ್ಯ ಅಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ

Published

on

ಹಾಸನ: ಜನಸಾಮಾನ್ಯರ ಮೇಲಿನ ಕಾಳಜಿಯಿಂದಾಗಿ ಕಾಡಾನೆ ಸಮಸ್ಯೆ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಇದನ್ನು ಬೇರ ಸ್ವರೂಪಕ್ಜೆ ಕೊಂಡೂಯ್ಯುವುದು ಬೇಡ ಎಂದು ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್ ಮತ್ತು ಸುರೇಂದ್ರ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ೧೦-೧೫ ವರ್ಷಗಳಿಂದ ಕಾಡಾನೆ ಮತ್ತು ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿ ನಡೆಯುತ್ತಿದ್ದು, ಮಾನವ-ಆನೆ ಸಂಘರ್ಷಕ್ಕೆ ಹಲವು ವರ್ಷಗಳಿಂದ ನೂರಾರು ಬಲಿಯಾಗಿವೆ. ಕಾಫಿ ತೋಟಗಳನ್ನೇ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಬೆಳೆಹಾನಿ, ಜೀವಹಾನಿ ಮಾಡುತ್ತಿವೆ ಎಂದರು.

ಆನೆಗಳ ಸಂತತಿಯು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮಲೆನಾಡಿನಲ್ಲಿ ಆತಂಕದ ಛಾಯೆ ಮನೆಮಾಡಿದೆ. ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾಫಿ ಬೆಳೆಗಾರ ಸಂಘಟನೆಗಳು ನಿರಂತರವಾಗಿ ಹೋರಾಟ ನೆಡೆಸುತ್ತಿವೆ. ಆದರೂ ಸಹ ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.

ಫೆಬ್ರವರಿ ೧೩ ರಂದು ಬೇಲೂರು ತಾಲ್ಲೂಕು ಆರೇಹಳ್ಳಿ ಹೋಬಳಿ, ಬೆಳ್ಳಾವರ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಈ ವಿಚಾರವಾಗಿ ಶಾಸಕರು ಈ ಭಾಗದ ಜನಸಾಮಾನ್ಯರ ಮೇಲೆ ಹೊಂದಿರುವ ಕಾಳಜಿ ಹಾಗೂ ಕಾಡಾನೆ ಸಮಸ್ಯೆಯ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಏರುಧ್ವನಿಯಲ್ಲಿ ಮಾತನಾಡಿರುವುದು ಅತಿಶಯೋಕ್ತಿಯಲ್ಲ. ಒಬ್ಬ ಜನಪ್ರತಿನಿಧಿಗೆ ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಾಗರೀಕ ಸಮುದಾಯದಿಂದ ಹೆಚ್ಚಿನ ಒತ್ತಡ ಇರುವುದರಿಂದ ಹಾಗೂ ಜನತೆಯಿಂದ ಆಯ್ಕೆಯಾದ ಪ್ರತಿನಿಧಿ, ಜನರ ಪರವಾಗಿ ಧ್ವನಿಯೆತ್ತಬೇಕಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಮನವಿ ಸಲ್ಲಿಸಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳು ಒಟೊಟ್ಟಾಗಿ ಸಮಾನ ಮನಸ್ಥಿತಿಯಿಂದ ಸಾಗಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅಭಿವೃದ್ಧಿ ಪತದತ್ತ ಸಾಗಲು ಸಾಧ್ಯ. ಹಾಗಾಗಿ ಕಾಡಾನೆ ಸಮಸ್ಯೆಯ ವಿಚಾರವಾಗಿ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಗೆ ಗಂಭೀರ ಸ್ವರೂಪ ನೀಡದೆ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಹೆಚ್ಚು ಆಧ್ಯತೆ ನೀಡಿ ಮುಂದುವರೆಯಬೇಕಾಗಿದೆ. ಕೆಲವೊಮ್ಮೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಾಗ ಜನಪ್ರತಿನಿಧಗಳು, ಮಾಧ್ಯಮಗಳು ಕಠಿಣ ನಿಲುವು ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಈ ಘಟನೆಯ ಬಗ್ಗೆ ಬೇರೆ ಬೇರೆ ಸ್ವರೂಪಕ್ಕೆ ಕೊಂಡೊಯ್ಯುವ ಅವಶ್ಯಕತೆಯಿಲ್ಲವೆಂಬುದು ಸಂಘಟನೆಯ ನಿಲುವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜು, ಸಂಜಯ್, ಸುರೇಂದ್ರ, ಮಂಜುನಾಥ್ ಶೆಟ್ಟಿ ಇತರರು ಉಪಸ್ಥಿತರಿದ್ದರು.

Continue Reading

Hassan

ಈ ನಾಡಿನ ಜನ ನನಗೆ ಪೂರ್ಣಾವಧಿ ಸಿಎಂ ಆಗಲು ಅವಕಾಶ ಕೊಡಲಿಲ್ಲ: ಹೆಚ್.ಡಿ. ಕುಮಾರಸ್ವಾಮಿ

Published

on

ಹಾಸನ: ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮವಹಿಸಿ ದೇಶ ಸೇವೆ ಮಾಡುವವರನ್ನು ಮರೆಯಬಾರದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಸಹಕಾರದಲ್ಲಿ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಗಮನಸೆಳೆದು ಸ್ಪಂದಿಸುವ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.

ನಗರದ ಹೊರವಲಯ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಅರೆಸೇನಾ ಯೋಧರು, ದೇಶ ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ. ಅರೆಸೇನಾ ಪಡೆಯ ಕಾರ್ಯವನ್ನು, ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು. ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ. ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ. ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು.

ನನಗೆ ಸಿಎಂ ಆಗಿ ಅದಿಕಾರ ನಡೆಸಲು ಎರಡು ಬಾರಿ ಅವಕಾಶ ಸಿಕ್ಕಿದ್ದು, ಬಹಳ ಕಡಿಮೆ ಸಮಯ ಈ ನಾಡಿನ ಜನ ನನಗೆ ಪೂರ್ಣ ಅವದಿ ಕೊಡಲಿಲ್ಲ. ಕೊಟ್ಟಿದ್ದರೆ. ಪೂರ್ಣವಧಿಯಾಗಿ ಈ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಿ ತೋರಿಸುತ್ತಿದ್ದೆ. ನಮ್ಮ ಪಕ್ಷ ಮುಗಿದೆ ಹೋಯ್ತು ಅಂದ್ರು. ಈಗ ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದಾನೆ. ಆಂಧ್ರದಲ್ಲಿ ಮುಚ್ಚೇ ಹೋಗಿದ್ದ ಒಂದು ಫ್ಯಾಕ್ಟರಿ ಮರು ಆರಂಭ ಮಾಡಿದೆನೆ. ಅಲ್ಲಿ ಜನ ನನ್ನ ಫೋಟೊಗೆ ಹಾಲಿನ ಅಭಿಷೇಕ ಮಾಡ್ತಾರೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಫ್ಯಾಕ್ಟರಿ ಉಳಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

ಈ ರಾಜ್ಯ ಸರ್ಕಾರ ೨.೧೦ ಲಕ್ಷ ಕೋಟಿ ಸಾಲ ಮಾಡಿಯಾಗಿದ್ದು, ಕೇವಲ ೧೮ ತಿಂಗಳಲ್ಲಿ ಇಷ್ಟು ಸಾಲ ಆಗಿದೆ. ರಾಜ್ಯದಲ್ಲಿ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ತಿಂಗಳಿಗೆ ಎರಡು ಸಾವಿರ ಹಣವನ್ನು ಮಹಿಳೆಯರಿಗೆ ಕೊಡ್ತಾರೆ. ಇದರಿಂದ ಕುಟುಂಬ ನಡೆಸೋಕೆ ಸಾದ್ಯವೇ? ಈಗಲೂ ಕೂಡ ಹಲವು ಹೆಣ್ಣು ಮಕ್ಕಳು ನೆರವಿಗಾಗಿ ನಮ್ಮ ಮನೆ ಹತ್ರ ಬರ್ತಾರೆ. ಎರಡು ಸಾವಿರದಲ್ಲಿ ಜೀವನ ನಡೆಯಿದಾಗಿದ್ರೆ ಅವರು ಯಾಕೆ ಬರ್ತಾರೆ! ಸರ್ಕಾರ ೭ ಲಕ್ಷ ಕೋಟಿ ಸಾಲ ಮಾಡಿ ಅರಾಮಾಗಿ ಓಡಾಡ್ತಾರೆ. ನೀವು ಒಂದೊ ಎರಡು ಲಕ್ಷ ಸಾಲ ಮಾಡಿ ಯಾಕೆ ಹೆದರ್ ತೀರಾ ಧೈರ್ಯದಿಂದ ಓಡಾಡಿ ಈ ಮೈಕ್ರೋ ಫೈನಾನ್ಸ್ ಕಿರುಕುಳ ಅಂತ ಹೆದರಬೇಡಿ. ಸಾಲ ಮಾಡಿ ಮನೆ ಕಟ್ಟಿ, ಮಕ್ಕಳನ್ನು ಓದಿಸಿದರೆ ಆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ, ರಾಜ್ಯ ಸರ್ಕಾರದ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ಅವರೇ ನಾಚಿಕೊಳ್ಳುತ್ತಿಲ್ಲ. ನೀವು ಯಾಕೆ ಆತ್ಮಹತ್ಯೆ ಮಾಡುಕೊಳ್ಳುತ್ತೀರಾ ಎಂದು ಸಾಲಗಾರರಿಗೆ ಧೈರ್ಯದ ಮಾತನ್ನು ತಿಳಿಸಿದರು.

ತಪ್ಪುಗಳು ಆಗುತ್ತವೆ, ಆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ, ನಮಗೆ ಸಿಕ್ಕಿರುವ ಈ ಅವಕಾಶವನ್ನು ಜನರಿಗೆ ಧಾರೆ ಎರೆಯುತ್ತೇನೆ, ದುರುಪಯೋಗ ಪಡಿಸಿ ಕೊಳ್ಳುವುದಿಲ್ಲ. ನನ್ನನ್ನು ಮನೆಯ ಮಗ, ಕುಟುಂಬದ ಸದಸ್ಯ ಎಂದು ಸ್ವೀಕಾರ ಮಾಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ದೇವೇಗೌಡರು ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ನೇರಳೆ, ಹುಣಸೆ, ಹಲಸು ಬೆಳೆಯುವ ರೈತರಿಗಾಗಿ ನಿಗಮ ಮಾಡುವಂತೆ ರಾಜ್ಯ ಸಭೆಯಲ್ಲಿ ದೇವೇಗೌಡರು ಮನವಿ ಮಾಡಿದ್ದಾರೆ. ನಮ್ಮ ತಂದೆ ಬದುಕಿರುವ ಒಳಗೆ ಈ ದೇಶ, ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನುಡಿದರು.

ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣರ ಆಶಿರ್ವಾದದಿಂದ ಇಂದು ಸೈನಿಕರ ಭವನ ಉದ್ಘಾಟನೆಗೊಂಡಿದೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ೧೧ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಬೇರೆ ಬೇರೆ ದೇಶಗಳಿಗೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಮುಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಪತ್ರವನ್ನು ಕುಮಾರಸ್ವಾಮಿ ಅವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ.ಮಂಜು, ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಜಿಪಂ ಮಾಜಿ ಅಧ್ಯಕ್ಷ, ಸ್ವಾಮಿಗೌಡ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ದಿನೇಶ್, ಬಿದರಿ ಕೆರೆ ಜಯರಾಂ, ಜೆಡಿಎಸ್. ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅರೆ ಸೇನಾಪಡೆ ಜಿಲ್ಲಾಧ್ಯಕ್ಷ ಪಿ.ವಿ. ನಾಗೇಶ್, ದೆಹಲಿಯ ಸಿ.ಎ.ಪಿ.ಎಫ್. ಜನರಲ್ ಸೆಕ್ರಟ್ರಿ ರಣಬೀರ್ ಸಿಂಗ್, ಹೆಚ್.ಆರ್. ಸಿಂಗ್, ಎಂಪಿಎಲ್. ರೆಡ್ಡಿ, ರಾಮೇಗೌಡ, ಉಪಾಧ್ಯಕ್ಷ ಎಂ.ಜಿ. ರಮೇಶ್ ಅರೆಸೇನಾ ಪಡೆಯ ಸಂಘದ ಗೌರವಾಧ್ಯಕ್ಷ ನವಾಬ್ ಖಾನ್, ಉಪಾಧ್ಯಕ್ಷ ಎಂ.ಜಿ. ರಮೇಶ್, ನಾಗಪ್ಪ, ಯು. ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!