State
ಹಾಸನ- ದಸರಾ ಆನೆ ಕ್ತಾಫ್ಟನ್ ಅರ್ಜುನ ವೀರ ಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್
ಕಾಡಾನೆ ಕಾರ್ಯಾಚರಣೆ ಕಾರ್ಯಪಡೆ ತಂಡದಿಂದ ಚಿತ್ರಕರಣ ಮಾಡಿದ್ದ ವೀಡಿಯೋ ವೈರಲ್
ಇಟಿಎಫ್ ಹೆಸರಿನಲ್ಲಿ ವೀಡಿಯೋ ಎಡಿಟ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..
ರಕ್ತ ಸುರಿಯುತ್ತಿದ್ದರೂ ಹಂತಕ ಸಲಗದ ಜೊತೆ ಕಾದಾಡಿರೊ ಅರ್ಜುನ್
ಅರ್ಜುನನ ಮೇಲೆಕುಳಿತು ಕಮಾಂಡ್ ಮಾಡಿರೊ ಅಭಿಮನ್ಯು ಮಾವುತನ ಸಹಾಯಕ ಅನಿಲ್ ಹಾಗು ಮತ್ತೋರ್ವ
ಮದವೇರಿದ ಕಾಡಾನೆ ಜೊತೆಗೆ ಏಕಾಂಗಿಯಾಗಿ ವೀರಾವೇಶದಿಂದ ಹೋರಾಡಿರೊ ವೀರ ಅರ್ಜುನ
ಬಲಿಷ್ಟ ಕಾಡಾನೆ ದಾಳಿಗೆ ತೀವೃವಾಗಿ ಗಾಯಗೊಂಡು ಕಡೆಗೂ ಸಾವಿಗೀಡಾಗಿರೊ ದಸರಾ ಆನೆ

ಡಿಸೆಂಬರ್ 4.ರಂದು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ನಡೆದಿದ್ದ ಕಾದಾಟ
ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಏಕಾ ಏಕಿ ಬಂದಿ ದಾಳಿ ಮಾಡಿದ್ದ ಒಂಟಿ ಸಲಗ
ಮದವೇರಿದ ಕಾಡಾನೆ ಬರುತ್ತಲೇ ಸ್ಥಳದಿಂದ ಹೆದರಿ ಓಡಿದ್ದ ಬೇರೆ ಸಾಕಾನೆಗಳು
ಕಾಡಾನೆ ದಾಳಿಗೆ ಮುಂದಾದಾಗ ಎದೆಕೊಟ್ಟು ಹೋರಾಟ ನಡೆದಿದ್ದ ಅರ್ಜುನ
ಅರ್ಜುನನ ರಣ ರೋಚಕ ಫೈಟ್ ನ ಕೊನೇ ಕ್ಷಣದ ವೀಡಿಯೋ ವೈರಲ್
ಎರಡು ತಿಂಗಳ ಬಳಿಕ ರೋಚಕ ವೀಡಿಯೋ ವೈರಲ್
ಇಟಿಎಫ್ ಸಿಬ್ಬಂದಿ ಪ್ರವೀಣ್ ಎಂಬುವವರು ಸೆರೆ ಹಿಡಿದಿರೊ ವೀಡಿಯೋ
ಕೋಟಿ ಕೋಟಿ ಜನರ ಪ್ರೀತಿಯ ಅರ್ಜುನನ ಏಕಾಂಗಿ ಹೋರಾಟ ದ ವೀಡಿಯೋ ಎಲ್ಲೆಡೆ ವೈರಲ್
https://www.facebook.com/janamitrakannada/videos/1039927460603509
Mysore
ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
ಉಡುಪಿ: ಕಾರೊಂದು ಬಸ್ ನಿಲ್ದಾಣಕ್ಕೆ ಢಿಕ್ಕಿಯಾ್ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಕಾಪು ವಿದ್ಯಾನಿಕೇತನ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಗಾಯಗೊಂಡವರನ್ನು ಕಾರು ಚಲಾಯಿಸುತ್ತಿದ್ದ ಕೊಪ್ಪಲಂಗಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್ ಅವರನ್ನು ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಜಲಾಲುದ್ದೀನ್ ಉಚ್ಚಿಲ ಹಾಗೂ ಹಮೀದ್ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
State
ನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
ಬೆಳಗಾವಿ: ನಾಳೆಯಿಂದ ನಡೆಯಲಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿದಂತೆ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಈಗಾಗಲೇ 3 ಸಾವಿರ ರೂಮ್ ಬುಕ್ ಆಗಿದ್ದು, ಸಿಎಂ ಮತ್ತು ಡಿಸಿಎಂಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆ.

6 ಸಾವಿರ ಪೊಲೀಸ್ ಭದ್ರತೆ
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಬಳಿಕ ಎಚ್ಚೆತ್ತುಕೊಳ್ಳಲಾಗಿದ್ದು, ಅಧಿವೇಶನದ ವೇಳೆ ನಿಗಾ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
Special
ಕರ್ನಾಟಕದಲ್ಲಿ 2.93 ಲಕ್ಷ ಹೊಸ BPL ಕಾರ್ಡ್ ಬಿಡುಗಡೆ : ನಿಮ್ಮ ಹೆಸರು ಹೊಸ ಪಟ್ಟಿಯಲ್ಲಿ ಇದೆಯೇ?
ಕರ್ನಾಟಕ ಸರ್ಕಾರದಿಂದ ಬಡ ಕುಟುಂಬಗಳ ಸಹಾಯಕ್ಕಾಗಿ ಹೊಸ BPL (Below Poverty Line) ಕಾರ್ಡ್ ವಿತರಣೆ ಕಾರ್ಯ ನಡೆದಿದೆ. ರಾಜ್ಯದಾದ್ಯಂತ ಸುಮಾರು 2.93 ಲಕ್ಷ ಹೊಸ BPL ಕಾರ್ಡ್‌ಗಳು ಮಂಜೂರಾಗಿದ್ದು, ಅರ್ಜಿ ಸಲ್ಲಿಸಿದ ಕುಟುಂಬಗಳು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಈಗಲೇ ಪರಿಶೀಲಿಸಬಹುದು.
ಹೊಸ BPL ಕಾರ್ಡ್ ಪಡೆಯಲು ಅರ್ಹರು:
•ಆರ್ಥಿಕವಾಗಿ ದುರ್ಬಲ ಮತ್ತು ಬಡ ಕುಟುಂಬಗಳು
•ಆದಾಯ ಮಿತಿ ಸರ್ಕಾರ ನಿಗದಿಪಡಿಸಿರುವ ಮಾನದಂಡಕ್ಕೆ ಒಳಪಡುವವರು
•ಹಿಂದಿನಿಂದಲೂ BPL ಕಾರ್ಡ್ ಸಲ್ಲಿಸಿದರೂ ಮಂಜೂರಾಗದ ಕುಟುಂಬಗಳು
•ಪರಿಶೀಲನಾ ಹಂತದಲ್ಲಿ ತಪ್ಪಾಗಿ APL ಪಟ್ಟಿಗೆ ಸೇರಿಸಲ್ಪಟ್ಟ ಕುಟುಂಬಗಳು
ಪಟ್ಟಿ ಪರಿಶೀಲನೆ ಮಾಡುವುದು ಹೇಗೆ?
•ಅಧಿಕೃತ ಸಾರ್ವಜನಿಕ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಆಯ್ಕೆ ಮಾಡಿ
•ಕುಟುಂಬದ ಮುಖ್ಯಸ್ಥರ ಹೆಸರು ಅಥವಾ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ
•‘Search’ ಒತ್ತಿದರೆ ಪಟ್ಟಿಯಲ್ಲಿ ನಿಮ್ಮ ವಿವರಗಳು ಕಾಣಿಸುತ್ತವೆ

ಈ ಹೊಸ ಹಂತದ ಮಹತ್ವ:
ಮುನ್ನಡೆಯ ವರ್ಷಗಳಲ್ಲಿ BPL ಕಾರ್ಡ್‌ಗಳ ಸಂಖ್ಯೆಯಲ್ಲಿ ಗೊಂದಲ, ಅನರ್ಹರ ಸೇರ್ಪಡೆ, ಅರ್ಹರು ಹೊರಬೀಳುವ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ವಿಮರ್ಶೆ ನಡೆಸಿ ಹೊಸ ವ್ಯವಸ್ಥೆ ತರಲಾಗಿದೆ.
BPL ಕಾರ್ಡ್ ಪಡೆಯುವ ಪ್ರಯೋಜನಗಳು:
•ಅನ್ನಭಾಗ್ಯ ಯೋಜನೆಯಡಿ ಉಚಿತ/ಕಡಿಮೆ ದರದ ಧಾನ್ಯ
•ಸಿಲಿಂಡರ್, ಆರೋಗ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅನೇಕ ಸರ್ಕಾರಿ ಯೋಜನೆಗಳ ಸೌಲಭ್ಯ
•ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳಿಗೆ ಅರ್ಹತೆ
ಅರ್ಹ ಕುಟುಂಬಗಳು ಯಾವುದೇ ವಿಳಂಬವಿಲ್ಲದೆ ಪಡಿತರ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬಹುದು.ಕರ್ನಾಟಕದ 2.93 ಲಕ್ಷ ಹೊಸ BPL ಕಾರ್ಡ್ ವಿತರಣೆಯು ಹಲವು ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣ.
-
Chamarajanagar24 hours agoಕಠಿಣ ಶ್ರಮದಿಂದ ಗೆಲುವು ಖಚಿತ: ಡಾ. ಶಾಂತರಾಜು
-
Mysore24 hours agoಪಠ್ಯದಿಂದ ಡಾ.ಅಂಬೇಡ್ಕರ್ ಹೊರಗಿಡುವ ಹುನ್ನಾರ: ಪ್ರೊ.ಪ್ರಸನ್ನಕುಮಾರ್ ಕೆರಗೋಡು ಶಂಕೆ
-
Mysore15 minutes agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Mysore24 hours agoಕಳಲೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್
-
Hassan23 hours agoಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.
-
Mandya24 hours agoಮಂಡ್ಯ ಇತಿಹಾಸದಲ್ಲಿ ಮೈಶುಗರ್ ಶಾಲೆಗೆ ವಿಶೇಷ ಸ್ಥಾನವಿದೆ : ಎಲ್ಲರೂ ಸೇರಿ ಶಾಲೆ ಉಳಿಸೋಣ – ಹೆಚ್ಡಿಕೆ
-
Chikmagalur19 minutes agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
-
Chikmagalur36 minutes agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
