Crime
ಹಾಸನ : ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಹಾಸನ : ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಗೆಳತಿಯನ್ನೇ ಕೊಲೆಗೈದು ತಲೆಮರೆಸಿಕೊಂಡಿಧ್ದ ಪಾಪಿ ಗೆಳೆಯ
ನಿಗೂಢವಾಗಿ ಸಾವನ್ನಪ್ಪಿದ್ದ ಶಿವಮ್ಮ ಮಕ್ಕಳಾದ ಪವನ್ (10) ಹಾಗೂ ಸಿಂಚನ (7)
ಜ.2 ರಂದು ಹಾಸನ ನಗರದ ದಾಸರಕೊಪ್ಪಲಿನಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣ
ಐದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ತನಿಖೆ ವೇಳೆ ಮೂವರ ಸಾವಿನ ಸತ್ಯ ಬಯಲು
ಪ್ರಿಯತಮೆ ಸೇರಿ ಆಕೆಯ ಇಬ್ಬರು ಮಕ್ಕಳನ್ನು ಕೊಲೆಗೈದಿದ್ದ ಆರೋಪಿ ಅಂದರ್
ವಿಜಯಪುರ ಮೂಲದ ನಿಂಗಪ್ಪ ಕಾಗವಾಡಿ (36) ಬಂಧಿತ ಆರೋಪಿ
ಕೆಲ ತಿಂಗಳ ಹಿಂದೆ ಬಿಜಾಪುರದಲ್ಲಿ ಬೇಕರಿ ನಡೆಸುತ್ತಿದ್ದ ಶಿವಮ್ಮ ಪತಿ ತೀರ್ಥಪ್ರಸಾದ್
ಆ ಸಂದರ್ಭದಲ್ಲಿ ಶಿವಮ್ಮಳಿಗೆ ಪರಿಚಯವಾಗಿದ್ದ ನಿಂಗಪ್ಪ
ಶಿವಮ್ಮ ಮತ್ತು ನಿಂಗಪ್ಪ ಕಾಗವಾಡಿ ನಡುವೆ ಬೆಳೆದಿದ್ದ ಸ್ನೇಹ
ಇದೇ ಕಾರಣಕ್ಕೆ ಆಗಾಗ ಶಿವಮ್ಮ ಮನೆಗೆ ಬಂದು ಹೋಗುತ್ತಿದ್ದ ನಿಂಗಪ್ಪ
ಶಿವಮ್ಮ ಜೊತೆ ಸಲುಗೆಯಿಂದ ಇದ್ದುದ್ದಲ್ಲದೇ ಹೆಚ್ಚು ದಿನ ಹಾಸನದ ಮನೆಯಲ್ಲೇ ಉಳಿಯುತ್ತಿದ್ದ ನಿಂಗಪ್ಪ
ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಸಲುಗೆಯಿಂದಿದ್ದ ಶಿವಮ್ಮ
ಕಾರು ಚಾಲಕ ಎಂದು ಗೆಳೆಯನ ಪರಿಚಯ ಮಾಡಿಕೊಡುತ್ತಿದ್ದ ಶಿವಮ್ಮ
ತುಮಕೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡು ಅಲ್ಲೇ ಉಳಿದಿದ್ದ ತೀರ್ಥಪ್ರಸಾದ್
ಜನವರಿ 1 ರಂದು ಸಂಜೆ ಮನೆಗೆ ಬರುವುದಾಗಿ ಪತ್ನಿ ಶಿವಮ್ಮಗೆ ಪೋನ್ ಮಾಡಿದ್ದ ಪತಿ ತೀರ್ಥಪ್ರಸಾದ್
ಅದೇ ದಿನ ತೀರ್ಥಪ್ರಸಾದ್ ಮನೆಗೆ ಬರುವ ವಿಷಯ ತಿಳಿದಿದ್ದ ನಿಂಗಪ್ಪ
ಹೊಸ ವರ್ಷದ ಮೊದಲ ದಿನವೂ ಶಿವಮ್ಮ ಮನೆಯಲ್ಲಿ ಇದ್ದ ನಿಂಗಪ್ಪ
ಜ.1 ರಂದು ಶಿವಮ್ಮನನ್ನು ಕತ್ತುಹಿಸುಕಿ ಕೊಂದು ನಂತರ ಇಬ್ಬರು ಮಕ್ಕಳನ್ನು ಕತ್ತುಹಿಸುಕಿ ನಿರ್ದಯವಾಗಿ ಕೊಲೆ ಮಾಡಿದ್ದ ದುಷ್ಕರ್ಮಿ
ಅನಂತರ ಸಿಲಿಂಡರ್ ಪೈಪ್ ಕಿತ್ತು ಅನಿಲ ಸೋರಿಕೆ ಹಾಗೂ ವಿಷಾನಿಲ ಸೇವನೆಯಿಂದ ತಾಯಿ-ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಿದ್ದ ಹಂತಕ
ಕೊಲೆ ಮಾಡಿದ ನಂತರ ಶಿವಮ್ಮ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಚಿನ್ನದ ತಾಳಿ, ಕಾಸು, ಕಾಲು ಚೈನು, ಮತ್ತು ವಿವೋ ಮೊಬೈಲ್ ದೋಚಿಕೊಂಡು ಹೊರಗಡೆಯಿಂದ ಡೋರ್ ಲಾಕ್ ಮಾಡಿ ಕೀ ತೆಗೆದುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದ ಆರೋಪಿ
ಜ.1 ರಂದು ಸಂಜೆ ಮನೆಗೆ ಬಂದಿದ್ದ ತೀರ್ಥಕುಮಾರ್
ಮನೆಯಲ್ಲಿ ಮಡದಿ ಮಕ್ಕಳಿಲ್ಲದ ಬಗ್ಗೆ ಅನುಮಾನ
ಮರುದಿನ ಬೇರೆ ಕೀ ಬಳಸಿ ಬೀಗ ತೆಗೆದು ಒಳಹೋದಾಗ ಬಯಲಾಗಿದ್ದ ಕೃತ್ಯ
ಮೂವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಿವಮ್ಮ ತಾಯಿ ಹುಲಿಯಮ್ಮ ಹಾಗೂ ಪತಿ ತೀರ್ಥ ಪ್ರಸಾದ್
ಚಿನ್ನಾಭರಣದ ಆಸೆಗೆ ಮೂವರನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗ
ಗೆಳೆಯನ ಜೊತೆ ಹೊಸ ವರ್ಷಾಚರಣೆಗೆ ಕರೆಸಿಕೊಂಡು ಬಲಿಯಾದ ಮಹಿಳೆ
ಆರೋಪಿ ನಿಂಗಪ್ಪ ಕಾಗವಾಡಿಯನ್ನು ಬಂಧಿಸಿದ ಪೊಲೀಸರು
ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ
Crime
ಹಾಸನ: ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ದುರುಳ

ದೇವೇಗೌಡ (70), ಮಂಜುನಾಥ್ (50) ಕೊಲೆಯಾದವರು
ಮೋಹನ್ (47) ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ಆರೋಪಿ
ಹಾಸನ- ಆಸ್ತಿ ವಿಚಾರಕ್ಕೆ ಸಹೋದರನಿಂದ ತಂದೆ ಮತ್ತು ಅಣ್ಣನ ಬರ್ಬಕೊಲೆ
ಬರ್ಬರವಾಗಿ ಕೊಚ್ಚಿ ಕೊಲೆಗೈದ ಪಾಪಿ ಸಹೊದರ
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ
ದೇವೇಗೌಡರ, ಮಂಜುನಾಥ ಕೊಲೆಯಾದ ತಂದೆ ಮಗ
ದೇವೇಗೌಡ ಪುತ್ರ ಮೋಹನ್ ನಿಂದಲೇ ಕೃತ್ಯ ಆರೋಪ
ಜೋಡಿ ಕೊಲೆಗೆ ಬೆಚ್ಚಿಬಿದ್ದ ಜನತೆ
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Crime
ಕಲ್ಲು ಗಣಿಗಾರಿಕೆ ವೇಳೆ ಸ್ಫೋಟ,ಮೂರಕ್ಕೂ ಹೆಚ್ಚು ಕಾರ್ಮಿಕರ ಸಾವಿನ ಶಂಕೆ

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ದೂಮಗೆರೆ ಗ್ರಾಮದ ಕಲ್ಲು ಕ್ವಾರಿಯಲ್ಲಿ ಬೃಹತ್ ಸ್ಫೋಟ ನಡೆದು ಈ ಘಟನೆಯಲ್ಲಿ ಮೂವರು ಮೃತಪಟ್ಟಿರುವ ಶಂಕೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸದ್ಯ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅದರಲ್ಲಿ ಒಬ್ಬನ ಪರಿಸ್ಥಿತಿ ಚಿಂತಾಜನಕವಾಗಿದೆ. ವಿಷಯ ತಿಳಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಉಪವಿಭಾಗಾಧಿಕಾರಿ ಮಾರುತಿ ಇವರು ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ ಸಿ.ಸತ್ಯಭಾಮ ಕ್ವಾರಿ ಗುತ್ತಿಗೆ ಪಡೆದಿರುವ ಮಾಲೀಕ ದೇವರಾಜು ವಿರುದ್ಧ ಹರಿಹಾಯ್ದರು. ಮಾಹಿತಿ ಮುಚ್ಚಿಟ್ಟ ಆರೋಪದಡಿ ದೇವರಾಜ್ ವಿರುದ್ಧ ಎಫ್ ಐಆರ್ ದಾಖಲಿಸಲು ಡಿಸಿ ಸೂಚಿಸಿದರು.
Crime
ಸಂಭ್ರಮಾಚರಣೆ ವೇಳೆ RCB ಅಭಿಮಾನಿಗೆ ಚಾ*ಕು ಇರಿತ

ಬೆಂಗಳೂರು, ಜೂನ್ 4: ಆರ್ಸಿಬಿ (RCB) ತಂಡ ಚೊಚ್ಚಲ ಐಪಿಎಲ್ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳ ಗುಂಪು ಕ್ರೌರ್ಯ ಮೆರೆದಿದೆ. ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮಾಚರಣೆ ನೆರವೇರಿದೆ. ವಿವಿಧೆಡೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya10 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar16 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar10 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore11 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu10 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
State9 hours ago
ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು: ಸುರೇಶ್ ಬಾಬು