Connect with us

Hassan

ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹಿಂದೆ ರಾಜಕೀಯ

Published

on

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವರ್ಗಾವಣೆ

ನಾಲ್ಕೇ ತಿಂಗಳಿಗೆ ವರ್ಗಾವಣೆ ಮಾಡಿದ ಸರ್ಕಾರ

ಚಂದ್ರಶೇಖರ್ ವರ್ಗಾವಣೆಗೊಂಡ ಆಯುಕ್ತ

ರಮೇಶ್ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತ

ಕಳೆದ ಹದಿಮೂರು ವರ್ಷಕ್ಕಿಂತ ಹೆಚ್ಚು ಕಾಲ ಹುಡಾ ಆಯುಕ್ತರಾಗಿದ್ದ ರಮೇಶ್

ಕಳೆದ ನಾಲ್ಕು ತಿಂಗಳ ಹಿಂದೆ ತುಮಕೂರಿಗೆ ವರ್ಗಾವಣೆಗೊಂಡಿದ್ದ ರಮೇಶ್

ಮತ್ತೆ ಅದೇ ಜಾಗಕ್ಕೆ ವರ್ಗಾವಣೆಗೊಂಡಿರುವ ರಮೇಶ್

ಇನ್ನೊಂದೆಡೆ ಹಿಮ್ಸ್ ನಿರ್ದೇಶಕರ ಆಯ್ಕೆ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನಾಲ್ಕು ವಾರಗಳಲ್ಲಿ ಡಾ.ವೆಂಕಟೇಶ್.ಡಿ.ಟಿ. ಡೀನ್ ಆಗುವ ಅರ್ಹತೆ ಹೊಂದಿದ್ದರೆ ಅವರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಡಾ.ವೆಂಟೇಶ್.ಡಿ.ಟಿ. ಅವರನ್ನು ಹಿಮ್ಸ್ ನಿರ್ದೇಶಕರಾಗಿ ನೇಮಕ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲರಿಗೆ ಶಿಫಾರಸ್ಸು ಪತ್ರ ಬರೆದಿದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ

ಡಾ.ಸಂತೋಷ್.ಎಸ್.ವಿ. ಸಂತೋಷ್ ಅವರನ್ನು ಹಿಮ್ಸ್ ನಿರ್ದೇಶಕರನ್ನಾಗಿ ನೇಮಕ ಮಾಡುವಂತೆ ಸಿಎಂಗೆ ಶಿಫಾರಸ್ಸು ಪತ್ರ ಬರೆದಿದ್ದ ಕೋಡಿಮಠದ ಶ್ರೀಗಳು

ಕೋಡಿಮಠದ ಶ್ರೀಗಳ ಮನವಿ ಮೇರೆಗೆ ಡಾ.ಸಂತೋಷ್.ಎಸ್.ವಿ. ಅವರನ್ನು ಹಿಮ್ಸ್‌‌ನ ಪ್ರಾಂಶುಪಾಲರು ಮತ್ತು ಡೀನ್ ಮತ್ತು ನಿರ್ದೇಶಕರ ಹುದ್ದೆಗೆ ಹೆಚ್ಚುವರಿ ಪ್ರಭಾರ ಹುದ್ದೆಗೆ ನೇಮಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ವೈದ್ಯಕೀಯ ಶಿಕ್ಷಣ ಇಲಾಖೆ ಇವರಿಗೆ ಶಿಫಾರಸ್ಸು ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ

ಡಿ.23 ರಂದು ಹಿಮ್ಸ್‌ನ ಡೀನ್ ಹಾಗೂ ನಿರ್ದೇಶಕರಾಗಿ ನೇಮಗೊಂಡಿದ್ದ ಡಾ.ಸಂತೋಷ್.ಎಸ್.ವಿ.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಾ.ವೆಂಕಟೇಶ್.ಡಿ.ಟಿ.

Continue Reading
Click to comment

Leave a Reply

Your email address will not be published. Required fields are marked *

Hassan

ಮಗ್ಗೆ ರಾಯರಕೊಪ್ಪಲು ರಸ್ತೆಯಲ್ಲಿರುವ ಶ್ರೀ ಬನಶಂಕರಮ್ಮ ದೇಗುಲದಲ್ಲಿ ನವರಾತ್ರಿ ಉತ್ಸವ ಆರಂಭ

Published

on

ಆಲೂರು: ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಗ್ಗೆ ರಾಯರಕೊಪ್ಪಲು ರಸ್ತೆಯಲ್ಲಿರುವ ವೈ ಎನ್ ಪುರದ ಶ್ರೀ ಬನಶಂಕರಮ್ಮ ದೇವಸ್ಥಾನದಲ್ಲಿ ಗುರುವಾರ ದಸರಾ ಹಬ್ಬದ ಸಂಪ್ರದಾಯದಂತೆ ನವರಾತ್ರಿ ಆಚರಣೆಯ ಕಾರ್ಯಕ್ರಮಗಳು ಆರಂಭವಾಗಿವೆ.

ಗುರುವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮಹಾಅಭಿಷೇಕ, ಹೂವಿನ ಅಲಂಕಾರ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ದೇವಿಯ ಗರ್ಭಗೃಹದಲ್ಲಿ ನವರಾತ್ರಿ ಉತ್ಸವದ ಘಟಸ್ಥಾಪನೆ ಮಾಡಿ ಗಂಧದ ಅಲಂಕಾರ ಮಾಡಲಾಗಿತ್ತು. ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.

ಅ,12 ರ ವರೆಗೆ ಪ್ರತಿದಿನ ದೇವಿಗೆ ಭಕ್ತರಿಂದ ಶೋಡೋಪಚಾರ ಪೂಜೆ ಸಹಿತ ಸಹಸ್ರ ಕುಂಕುಮಾರ್ಚನೆ, ನೈವೇದ್ಯ, ಮಹಾಮಂಗಳಾರತಿ ಮತ್ತು ಮಂತ್ರಪುಷ್ಪ ಸೇವೆ ಕಾರ್ಯಕ್ರಮಗಳು ನಡೆಯಲಿವೆ ಅ. 4 ರ ಶುಕ್ರವಾರಂದು ಆಶ್ವಯುಜ ಶುದ್ಧ ದ್ವಿತೀಯನವಿಲಿನ ಅಲಂಕಾರ, ಅ. 5 ರಂದು ಶನಿವಾರ, ಆಶ್ವಯುಜ ಶುದ್ಧ ತೃತೀಯ ಸಂತಾನ ಲಕ್ಷ್ಮೀ ಅಲಂಕಾರ, ಅ.6 ರಂದು ಭಾನುವಾರ, ಆಶ್ವಯುಜ ಶುದ್ಧ ಚತುರ್ಥಿ ಹೂವಿನ ಅಲಂಕಾರ, ಅ.07 ರಂದು ಸೋಮವಾರ, ಆಶ್ವಯುಜ ಶುದ್ಧ ಪಂಚಮಿ ನವರಂಗಿ ಅಲಂಕಾರ, ಅ.08 ರಂದು ಮಂಗಳವಾರ ಆಶ್ವಯುಜ ಶುದ್ಧ ಷಷ್ಠಿ ಅರಿಶಿನ ಕುಂಕುಮ ಅಲಂಕಾರ, ಅ. 09 ರಂದು ಬುಧವಾರ ಆಶ್ವಯುಜ ಶುದ್ಧ ಸಪ್ತಮಿ ಸರಸ್ವತಿ ಅಲಂಕಾರ, ಅ.10 ರಂದು ಗುರುವಾರ, ಆಶ್ವಯುಜ ಶುದ್ಧ ಅಷ್ಟಮಿದುರ್ಗಾ ಅಲಂಕಾರ, ಅ.11 ರಂದು ಶುಕ್ರವಾರ, ಅಶ್ವಯುಜ ಶುದ್ಧ ನವಮಿ ಬಳೇಯ ಅಲಂಕಾರ, ಅ.12 ರಂದು ಶನಿವಾರ ದಸರಾ ಹಬ್ಬದ ದಿನ ದೇವಸ್ಥಾನದ ಆವರಣದಲ್ಲಿ ಅಶ್ವಯುಜ ಶುದ್ಧ ದಶಮಿ (ಬನ್ನಿಗಿಡ) ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಬನಶಂಕರಮ್ಮ ದೇವಾಲಯ ಭಾವಸಾರ ಕ್ಷತ್ರಿಯ ಮಂಡಲಿ ಚಾರಿಟಬಲ್ ಟ್ರಸ್ಟ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ವರದಿ:  ಸತೀಶ್ ಚಿಕ್ಕಕಣಗಾಲು

Continue Reading

Hassan

ಇಂಜಿನಿಯರಿಂಗ್ ಮುಗಿದ ಮೇಲೆ ಹೆಚ್ಚೆಚ್ಚು ಅರ್ಜಿ ಹಾಕಿ ಕೆಲಸಕ್ಕೆ ಸೇರಿ : ಡಾ. ಎ.ಜೆ. ಕೃಷ್ಣಯ್ಯ ಸಲಹೆ

Published

on

ಹಾಸನ: ಇಂಜಿನಿಯರಿಂಗ್ ಪದವಿ ಪಡೆದ ಮೇಲೆ ಉದ್ಯೋಗ ಪಡೆಯಲು ಹೆಚ್ಚಿನ ರೀತಿ ವಿವಿಧ ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಲು ಪ್ರಯತ್ನ ಪಡಬೇಕು ಎಂದು ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ ತಿಳಿಸಿದರು.

ನಗರದ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ಲೇಸ್ಮೆಂಟ್ ವಿಭಾಗದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ಆಯ್ಕೆಯಾಗಬೇಕಾದರೆ ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬೆಂಗಳೂರಿನ. ಇನ್ಫೋಸಿಸ್ ಫಿನಾಕ್ಲ್ ರವರಿಂದ ಮಾಹೀತಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್ ಪದವಿಯನ್ನು ಪಡೆದ ಮೇಲೆ ಉದ್ಯೋಗ ಪಡೆಯಲು ಸಾಕಷ್ಟು ಪ್ರಮಾಣದಲ್ಲಿ ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಲು ಪ್ರಯತ್ನ ಪಡಬೇಕು. ಅಂತಿಮ ವರ್ಷದ ಪದವಿ ಪಡೆಯಲು ಒಂದು ವರ್ಷ ಇದ್ದಾಗಲೆ ಮೂರನೆ ವರ್ಷದ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ತಯಾರಿ ನಡೆಸಬೇಕಾಗುತ್ತದೆ ಎಂಬ ಮಾಹಿತಿಯನ್ನು ಇನ್ಫೋಸಿಸ್ ಫಿನಾಕ್ಲ್ ಕಂಪನಿಯ ಪ್ರತಿನಿಧಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಲಾಗುತ್ತಿದೆ ಎಂದರು.

ಇನ್ಫೋಸಿಸ್ ಫಿನಾಕ್ಲ್ ಕಂಪನಿಯ ಉಪಾಧ್ಯಕ್ಷರಾದ ನರೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭೆ ಮುಖ್ಯವಾಗಿರುತ್ತದೆ. ತಮ್ಮ ಟ್ಯಾಲೆಂಟ್ ಅಕ್ವನೇಶನ್ ಜೊತೆಗೆ ಜನರಲ್ ನಾಲೇಡ್ಜ್ ತಿಳಿವಳಿಕೆ ಪ್ರಮುಖವಾಗಿರುತ್ತದೆ. ಉದ್ಯೋಗ ಪಡೆಯಲು ನಿಮ್ಮ ಆಸಕ್ತಿಯ ಮೂಲಕ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫಿನಾಕ್ಲ್ ಕಂಪನಿಯ ಅಧಿಕಾರಿಗಳಾದ ಕಾರ್ತಿಕೆಯನ್ ಹಾಗೂ ಅರುಣ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಯ್ಕೆಯ ಹಂತ ಮತ್ತು ತರಬೇತಿಯ ಮಾಹೀತಿ ನೀಡಿದರು ಹಾಗೂ ವಿದ್ಯಾರ್ಥಿಗಳ ಸಂದೇಹಗಳನ್ನು ಉದಾಹರಣೆ ನಿಡುವ ಮೂಲಕ ಉದ್ಯೋಗ ಮಾಹಿತಿ ನೀಡಿದರು.

ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಡಿನ್ ಕಂಪ್ಯೂಟರ್ ಅಪ್ಯೆರ್ಸ್‌ನ ಮುಖ್ಯಸ್ಥರಾದ ಡಾ ಗೀತಾ ಕಿರಣ್ ರವರು ಕಾಲೇಜಿನ ಮೂರನೆ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ಲೇಸ್ಮೆಂಟ್ ಅಧೀಕಾರಿ ಹಾಗೂ ಪ್ರಾಧ್ಯಾಪಕರಾದ ಬಿ.ಬಿ. ನಿಲಕಂಠಪ್ಪ, ಸಾರ್ವಜನಿಕ ಸಂಪರ್ಕ ಅಧಿಕಾರಿ ರಜನಿ ಹಾಗೂ ಕಾಲೇಜಿನ ಪ್ಲೇಸ್ಮೆಂಟ್ ಕೋ ಅರ್ಡಿನೇಟರ್ಸ್ಗಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Hassan

ಜಿ.ಟಿ. ದೇವೇಗೌಡರು ಸಿಎಂ ಅವರನ್ನು ಖುಷಿ ಪಡಿಸಲು ಮಾತಾಡಿದ್ದಾರಾ! ಶಾಸಕ ಎ. ಮಂಜು ವ್ಯಂಗ್ಯ

Published

on

ಹಾಸನ: ಮೂಡಾ ಹಗರಣ ವಿಚಾರವಾಗಿ ಶಾಸಕ ಜಿ.ಟಿ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸಿಎಂ ಅವರನ್ನು ಖುಷಿ ಪಡಿಸಲು ಮಾತಾಡಿದಾರೊ, ಇಲ್ಲಾ ಕೆಲಸ ಮಾಡಿಸಿಕೊಳ್ಳಲು ಮಾತಾಡಿದಾರೊ ಗೊತ್ತಿಲ್ಲ! ಎಂದು ಜಿ.ಟಿ. ದೇವೇಗೌಡ ವಿರುದ್ಧ ಶಾಸಕ ಎ. ಮಂಜು ಹರಿಹಾಯ್ದ ಪ್ರಸಂಗ ನಡೆಯಿತು.

ನಗರದ ಡಿಸಿ ಕಛೇರಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜಿ.ಟಿ. ದೇವೇಗೌಡ ಅವರು ಏನು ಮಾತಾಡಿದಾರೆ ಉದ್ದೇಶ ಏನು ನಮಗೆ ಗೊತ್ತಿಲ್ಲ. ಮಾಧ್ಯಮಗಳಿಂದಲೇ ವಿಚಾರ ಗೊತ್ತಾಗಿದೆ. ಮುಡಾದಲ್ಲಿ ಇವರು ೧೪. ಸೈಟ್ ವಾಪಸ್ ಕೊಟ್ಟಿದ್ದಾರೆ. ಮುಡಾದಲ್ಲಿ ಐದು ಸಾವಿರ ಕೋಟಿಗೂ ಅಧಿಕ ಅವ್ಯವಹಾರ ಆಗಿದೆ ಎನ್ನೋದು ಮಾಧ್ಯಮಗಳಿಂದಲೇ ಚರ್ಚೆ ಆಗಿದ್ದು, ಸಿದ್ದರಾಮಯ್ಯ

ಅವರು ಅವರ ಪತ್ನಿ ಹೆಸರಿನ ಸೈಟ್ ವಾಪಸ್ ಕೊಟ್ಟಿದ್ದಾರೆ. ವಾಪಸ್ ಕೊಟ್ಟ ಬಳಿಕ ಅವರೇ ತಪ್ಪು ಒಪ್ಪಿಕೊಂಡಂತೆ ಆಗಿದೆ. ಮೊದಲು ನಾವು ರಾಜೀನಾಮೆ ಕೇಳಿರಲಿಲ್ಲ. ರಾಜ್ಯಪಾಲರು ಆದೇಶ ಮಾಡಿದ್ದಕ್ಕೆ ತನಿಖೆಗೆ ಅವಕಾಶ ನೀಡಿ ಎಂದು ಹೇಳಿದ್ದೆವು. ಆದರೆ ಈಗ ರಾಜೀನಾಮೆ ನೀಡಬೇಕು ಎಂದು ಕೇಳ್ತಾ ಇದ್ದೀವಿ. ಅವರ ಮೇಲೆ ಎಫ್.ಐ.ಆರ್. ಆದ ಮೇಲೆ ನೈತಿಕವಾಗಿ ಅವರು ಇರಬಾರದು ಆಗೇ ನಾವು ಹಿಂದೆ ರಾಜಕಾರಣದಲ್ಲಿ ನೋಡಿದ್ದೇವೆ ಎಂದರು. ಕೇಸು ದಾಖಲಾದಗ ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ಬಂಗಾರಪ್ಪ ಎಲ್ಲರೂ ರಾಜೀನಾಮೆ ಕೊಟ್ಟಿದ್ದರು. ಆದರೆ ಇವರು ನಾವು ತಪ್ಪೇ ಮಾಡಿಲ್ಲ, ಕೊಟ್ಟ ಸೈಟ್ ವಾಪಸ್ ಕೊಟ್ಟಿದ್ದೇವೆ ಅಂತಾರೆ! ಅದ್ಯಾರೊ ರಘುನಂದನ್ ಮೂಲಕ ಕೊಟ್ಟು ಕಳಿಸಿದ್ದಾರೆ. ರಘುನಂದನ್ ಅವರೇ ದೊಡ್ಡ ಕಳ್ಳ. ಒಂದೇ ದಿನ ೮೬೪

ಸೈಟ್ ಬದಲಾವಣೆ ಮಾಡಿದ್ದರು. ನಮ್ಮ ಪಕ್ಷದ ಜಿ.ಟಿ. ದೇವೇಗೌಡ ಯಾವ ಅರ್ಥದಲ್ಲಿ ಮಾತಾಡಿದಾರೊ ಗೊತ್ತಿಲ್ಲ. ಸಿಎಂ ಅವರನ್ನು ಖುಷಿ ಪಡಿಸಲು ಮಾತಾಡಿದಾರೊ, ಇಲ್ಲಾ ಕೆಲಸ ಮಾಡಿಸಿಕೊಳ್ಳಲು ಮಾತಾಡಿದಾರೊ ಗೊತ್ತಿಲ್ಲ! ಎಂದು ಜಿ.ಟಿ. ದೇವೇಗೌಡ ವಿರುದ್ಧ ಎ. ಮಂಜು ಹರಿಹಾಯ್ದ ಪ್ರಸಂಗ ನಡೆಯಿತು. ಅವರು ನಮ್ಮ ಪಕ್ಷದ ಶಾಸಕರು ನಮ್ಮ ಪಕ್ಷದ ಪರವಾಗಿ ಇರ್ತಾರೆ. ಈ ಬಗ್ಗೆ ಅವರ ಹೇಳಿಕೆ ಪೂರ್ಣ ನೋಡಿ ನಾಳೆ ಉತ್ತರ ಕೊಡಲಾಗುವುದು. ನಾವು ರಾಜೀನಾಮೆ ಕೇಳ್ತಿರೊದು ಅವರು ಸೈಟ್ ವಾಪಸ್ ಕೊಟ್ಟ ಬಳಿಕ. ಮೇಲ್ನೋಟಕ್ಕೆ ಅವರು ತಪ್ಪು ಒಪ್ಪಿಕೊಂಡಂತೆ ಆಗಿದೆ. ಮುಡಾದಲ್ಲಿ ನಡೆದ ಸಂಪೂರ್ಣ ಹಗರಣ ತನಿಖೆ ಆಗಬೇಕು. ಸರ್ಕಾರದ ಬೊಕ್ಕಸ ಯಾರು ಕದಿಯಬಾರದು. ನನ್ನ ಸೈಟ್ ಇರಲಿ, ಜಿಟಿ ಸೈಟ್ ಇರಲಿ ಸೂಕ್ತ ತನಿಖೆ ನಡೆಯಲಿ. ಐದು ಸಾವಿರ ಕೋಟಿ ಹಗರಣ ಆಗಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.

Continue Reading

Trending

error: Content is protected !!