Connect with us

Crime

ಹಾಸನ- ಆಗಸ್ಟ್ 9 ರಂದು ನಡೆದಿದ್ದ ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಆರೋಪಿಗಳ ಬಂಧನ

Published

on

ಐದು ತಿಂಗಳ ಬಳಿಕ ಪ್ರಕರಣ ದ ಪ್ರಮುಖ ಆರೋಪಿಗಳನ್ನು ಬಂದಿಸಿದ ಫೊಲೀಸರು..

ಎ1 ಯೋಗಾನಂದ(38), ಎ2 ಅನಿಲ್(32) ಬಂಧನ

ಹಣಕಾಸು ವಿಚಾರದಲ್ಲಿ ವೈಶಮ್ಯದಿಂದ ಸುಫಾರಿ ಕೊಟ್ಟು ಕೊಲೆ ಮಾಡಿಸಿಧ್ದ ಆರೋಪಿ ಯೋಗಾನಂದ

ಕೊಲೆ‌ ಎಂಬಂಧ 14. ಆರೋಪಿಗಳ ವಿರುದ್ದ ಕೇಸ್ ದಾಖಲಿಸಿದ್ದ ಪೊಲೀಸರು

12 ಆರೋಪಿಗಳ ಬಂಧನವಾಗಿದ್ದರೂ ತಲೆ ಮರೆಸಿಕೊಂಡಿದ್ದ ಪ್ರಕರಣ ದ ಪ್ರಮುಖ ಆರೋಪಿಗಳು

ನೆನ್ನ ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನ ಬಂದಿಸಿದ ಸಿಐಡಿ ಹಾಗು ಹಾಗು ಹಾಸನ ಪೊಲೀಸರು.

ಎರಡು ತಿಂಗಳ ಹಿಂದೆ ಪ್ರಕರಣ ವನ್ನು ಸಿಐಡಿಗೆ ವಹಿಸಿದ್ದ ರಾಜ್ಯ ಸರ್ಕಾರ

ಹಾಸನ ಹೊರವಲಯದ ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಹಾಡು ಹಗಲೇ ನಡೆದಿದ್ದ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಮಾಡಿದ್ದ ಹಂತಕರು

ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳು

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಿದ ಪೊಲೀಸರು..

ಸಿಐಡಿ ಹಾಗು ಹಾಸನ ಪೊಲೀಸರಿಂದ ಜಂಟೀ ಆಪರೇಷನ್

ಪೊಲೀಸರ ಬಂಧನದ ವೇಳೆ ಮೈ ಮೇಲೆ‌ ವಿಷ ಸುರಿದುಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಲು ಯತ್ನ

ಘಟನೆ ಸಂಬಂದ ತುರುವೆಕೆರೆ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಹಾಗು ಆತ್ಮಹತ್ಯೆ ಯತ್ನ ಕೇಸ್ ದಾಖಲು

ವಿಷ ಕುಡಿದಂತೆ ನಾಟಕ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿರೊ ಪೊಲೀಸರು..

ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆ ಕೇಸ್ ಬೇದಿಸಿದ ಪೊಲೀಸರು

ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು

Continue Reading
Click to comment

Leave a Reply

Your email address will not be published. Required fields are marked *

Crime

ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಾಪತ್ತೆ

Published

on

ನಾಪೋಕ್ಲು: ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢವಾಗಿ ನಾಪತ್ತೆ ಆಗಿರುವ ಘೋರ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಗೆ ವೈದ್ಯರು ಡೆಲಿವರಿ ಡೇಟ್ ನೀಡಿದ್ದರು. ಆದರೆ ಎರಡು ದಿನ ಮುಂಚಿತವಾಗಿಯೇ ಬಾಲಕಿ ರಹಸ್ಯವಾಗಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಹೆರಿಗೆಯಾಗಿ 4 ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು ಬಾಲಕಿಯ ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೆರಿಗೆಯ ನಂತರ ಚಿಕಿತ್ಸೆ ಇಲ್ಲದೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಹದಗೆಟ್ಟ ನಂತರ ಅಧಿಕಾರಿಗಳು ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ನಾಪತ್ತೆಯಾಗಿರುವ ನವಜಾತ ಶಿಶುವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಪತ್ತೆ ಹಚ್ಚದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಬಾಲಕಿ ಗರ್ಭಿಣಿಯಾಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿಯ ಹೇಳಿಕೆಯ ಪ್ರಕಾರ ಓರ್ವ ಬಾಲಕನ ವಿರುದ್ಧ ಎಫ್ಐಆರ್ ದಾಖಲಾಗಿ ಬಾಲಕ ಬಂಧನವಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದು ಬಾಲಕಿ ಮಗುವಿಗೆ ಜನ್ಮ ನೀಡಿದ್ದು ಮಗು ನಾಪತ್ತೆಯಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಶಿಶುವಿನ ಡಿಎನ್ಎ ಪರೀಕ್ಷೆ ನಡೆಸುವಂತೆ ಬಾಲಕನ ಪೋಷಕರು ಒಂದೆಡೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ ನಾಪತ್ತೆಯಾಗಿರುವ ಮಗುವನ್ನು ಪತ್ತೆ ಹಚ್ಚಿ ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಬಾಲಕಿ ಗರ್ಭಿಣಿಯಾಗಲು ಕಾರಣರಾದ ಮತ್ತು ಈಗ ನವಜಾತ ಶಿಶು ನಾಪತ್ತೆಯಾಗಲು ಕಾರಣರಾದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Continue Reading

Crime

ಹಣಕಾಸು ಸಂಸ್ಥೆಯಿಂದ ಗ್ರಾಹಕರಿಗೆ ಮೋಸ

Published

on

ಕುಶಾಲನಗರ : ಜಿಲ್ಲೆಯ ಗೋಣಿಕೊಪ್ಪ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಛೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಗಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಛೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಕುರಿತು ಗೋಣಿಕೊಪ್ಪ, ವಿರಾಜಪೇಟೆ ನಗರ ಹಾಗೂ ಕುಶಾಲನಗರ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಆದ್ದರಿಂದ ಸಾರ್ವಜನಿಕರು ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಲ್ಲಿ ದಾಖಲಾತಿಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಕೋರಲಾಗಿದೆ.


ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನಪೇಟೆಯಲ್ಲಿರುವ “ಮಲಬಾರ್ ಮಲ್ಟಿಸ್ಟೇಟ್ ಆಗೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್” ಯಲ್ಲಿ ಬೈಲುಕುಪ್ಪೆ ನಿವಾಸಿ ಚಂದ್ರಹಾಸ ಕೆ.ಟಿ (52) ಸದರಿ ಸೂಸೈಟಿಯಲ್ಲಿ ಪಿಗ್ಗಿ ಕಟ್ಟಲು ಪ್ರಾರಂಭಿಸಿ 2024ನೇ ಸಾಲಿನ ಫೆಬ್ರವರಿ ತಿಂಗಳ ವರೆಗೆ ರೂ. 99,500 ಗಳ ಹಣವನ್ನು ಪಿಗ್ಗಿ ಕಟ್ಟಿದ್ದು, ಸದರಿ ಹಣವನ್ನು ಹಣ ಹಿಂತಿರುಗಿಸದೆ ಮಾರ್ಚ್-2024 ನೇ ತಿಂಗಳಿನಿಂದ ಕಛೇರಿಯನ್ನು ಮುಚ್ಚಿರುತ್ತಾರೆ. ಮಲಬಾರ್ ಮಲ್ಟಿ ಸ್ಟೇಟ್ ಆಗೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್‌ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ & ಇತರರು ಸೇರಿ ವಂಚನೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 406 420 3/2 34 2.2. 2 : 21. 22. 23 Banning of Unregulated Deposit Scheems Act- 2019 (BUDS Act) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

Continue Reading

Crime

ನಿಟ್ಟೂರು ಕಾರ್ಮಾಡುವಿನಲ್ಲಿ ಜೇನುಹುಳ ದಾಳಿಗೆ ವ್ಯಕ್ತಿ ಬಲಿ

Published

on

ಗೋಣಿಕೊಪ್ಪಲು : ಜೇನುಹುಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ.

ನಿಟ್ಟೂರು ಕಾರ್ಮಾಡು ಗ್ರಾಮದವರಾದ ಕೊಟ್ಟಂಗಡ ಪೂಣಚ್ಚ ಮಂಗಳವಾರ ಸಂಜೆ ಕಾಲಭೈರವ ದೇವಸ್ಥಾನ ರಸ್ತೆಯಲ್ಲಿ ಬಸ್ಸ್ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳಿಯರು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿರುತ್ತಾರೆ. ಇವರ ಅಂತ್ಯಕ್ರೀಯೆ ನಾಳೆ ಅಪರಾಹ್ನ ನಿಟ್ಟೂರು ಕಾರ್ಮಾಡು ವಿನ ಸ್ವಗೃಹದಲ್ಲಿ ನಡೆಯಲಿದೆ

Continue Reading

Trending

error: Content is protected !!