Connect with us

Hassan

ಹಾಸನದವರು ಶಾಂತಿಯುತ ದೃಷ್ಠಿ ಇರುವವರು ವಿಧ್ಯೆಯನ್ನು ದಾನ ಮಾಡಿದ್ರೆ ಅದಕ್ಕೆ ಮಹತ್ವ: ಶ್ರವಣಬೆಳಗೊಳದ ಶ್ರೀಗಳ ನುಡಿ

Published

on

ಹಾಸನ: ನಾವು ಪ್ರಥಮವಾಗಿ ಹಾಸನಕ್ಕೆ ಆಗಮಿಸಿದ್ದು, ಇಲ್ಲಿನ ಜನರು ಎಂರೇ ಶಾಂತಿಯುತ ದೃಷ್ಠಿ ಇರುವವರು ಆಗಿದ್ದು, ಮನುಷ್ಯರಾದ ನಾವು ಕಲಿತ ವಿಧ್ಯೆಯನ್ನು ದಾನ ಮಾಡಿದರೇ ಮಾತ್ರ ಅದಕ್ಕೆ ಮಹತ್ವ ಬರುತ್ತದೆ ಎಂದು ಶ್ರವಣಬೆಳಗೊಳದ ಶ್ರೀ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನುಡಿದರು.

ನಗರದ ದೊಡ್ಡ ಬಸದಿಯಲ್ಲಿ ಹಾಸನ ಜೈನ ಸಂಘ, ಎಲ್ಲಾ ಜೈನ ಸಮಸ್ರ ದಿಗಂಬರ ಜೈನ ಸಮಾಜದವರು ಮಹಾಸ್ವಾಮಿಗಳ ಪುರಪ್ರವೇಶ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವಹಿಸಿ ಮಾತನಾಡಿದ ಅವರು, ಶಾಂತಿಯುತವಾದ ದೃಷ್ಟಿ ಇರುವವರು ಹಾಸನದವರು. ಶುಭ ಚಿಂತನೆ ಮಾಡಿದರೆ ಮನಸ್ಸಿಗೆ ಶೋಭೆ. ಯಾವುದೇ ಕಾರ್ಯದಲ್ಲಿ ಆಭರಣ ಹಾಕ್ಕೋತಿವಿ. ನಮ್ಮ ಮನಸ್ಸಿನಲ್ಲಿರುವ ಅಹಂಕಾರ ದೇವರ ಪ್ರಾರ್ಥನೆಯಲ್ಲಿ ಅಡ್ಡಿಯಾಗುತ್ತದೆ. ದೇಹಕ್ಕೆ ಶೋಭೆ ತರುತ್ತೆ ಹೊರತು ಭಕ್ತಿಗೆ ಅಲ್ಲ. ಆಸ್ತಿ, ಸಂಪತ್ತು ದಾನ ಮಾಡಿದರಷ್ಟೇ ಭೂಷಣ. ಯಾರಿಗೂ ಕೊಡದಿದ್ದರೆ ಅದು ವ್ಯರ್ಥ. ವಿದ್ಯೆಯನ್ನು ದಾನ ಮಾಡಿದರಷ್ಟೇ ಅದಕ್ಕೆ ಮಹತ್ವ ಎಂದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಮಾತನಾಡುತ್ತಾ, ಹಿಂದಿನ ಭಟ್ಟಾರಕ ಸ್ವಾಮೀಜಿಯವರು ಸಾಹಿತ್ಯ ಕೃಷಿ ಮಾಡಿದವರು. ಅವರು ತಮ್ಮದೆಯಾದ ಪ್ರೀತಿ ಹೊಂದಿದ್ದರು. ಶ್ರವಣ ಬೆಳಗೊಳದ ಎನ್ನುವ ಒಂದು ಮಠ ಇತಿಹಾಸ ಹೊಂದಿದೆ. ನಾವು ನಂಬಿಕೆ ಇಟ್ಡಕೊಂಡರೇ ಮಾತ್ರ ಧರ್ಮ ನಮ್ಮನ್ನು ನಡೆಸಿಕೊಂಡು ಹೋಗುತ್ತದೆ. ದಯದ ಧರ್ಮ, ಪ್ರೀತಿಯ ಧರ್ಮವಿತ್ತು. ಬಲಿ ಚಕ್ರವರ್ತಿ ಮೀರಿಸುವ ಸಾಲಿಗೆ ಶ್ರವಣಬೆಳಗೊಳದ ಸ್ವಾಮೀಜಿ ಅಂತಹ ತ್ಯಾಗಿಗಳು. ಎಲ್ಲವನ್ನೂ ತ್ಯಾಗ ಮಾಡಿದರು. ಹಾಲಿನೊಳಗೆ ಇರುವ ಸಿಹಿ ಎಂದರೆ ಬಾಲಗಂಗಾಧರ ನಾಥ ಸ್ವಾಮೀಜಿ ಮತ್ತು ಚಾರುಕೀರ್ತಿ ಸ್ವಾಮೀಜಿಯವರೆಂದು ಇದೆ ವೇಳೆ ಬಣ್ಣಿಸಿದರು. ಗುರುವಿನ ಆಶೀರ್ವಾದ ಇಲ್ಲದೆ ಯಾವ ಅಭಿವೃದ್ಧಿ ಕೆಲಸ ಮಾಡಲು ಸಾದ್ಯವಿಲ್ಲ. ಸಮುದ್ರದಲ್ಲಿ ಒಂದು ಉದಾಹರಣೆ ತೀರ್ಥತೆಗೆದುಕೊಂಡು ಮಾತನಾಡಿದ್ದೇನೆ ಎಂದರು. ಎಲ್ಲೆಲ್ಲಿ ಕರ್ಮ ಇದೆ ಹೋಗಲಾಡಿಸುವುದು ಸನ್ಯಾಸಿ ಧರ್ಮ. ಪರರಿಗೆ ಎಷ್ಟು ಧರ್ಮ ಮಾಡುತ್ತೇವೆ ಅಲ್ಲಿ ಪುಣ್ಯ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ಬಿಡುಗಡೆಗೊಂಡ ಧರ್ಮ ಗ್ರಂಥವನ್ನು ಇದೆ ವೇಳೆ ನೂತನ ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳಿಗೆ ನೀಡಿದರು. ಇದೆ ವೇಳೆ ಪಾದಪೂಜೆ ಇತರೆ ಕಾರ್ಯಕ್ರಮಗಳು ಜರುಗಿತು. ಇದಕ್ಕೆ ಮೊದಲು ನಗರದ ಡೈರಿ ವೃತ್ತದಲ್ಲಿ ಸ್ವಾಮೀಜಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಅಭೂತಪೂರ್ವ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಕರೆತರಲಾಯಿತು. ನಂತರ ಚಿಕ್ಕಬಸದಿ ಮತ್ತು ದೊಡ್ಡ ಬಸದಿ ತಲುಪಿ ಇದೆ ವೇಳೆ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕವನ್ನು ಪುರೋಹಿತ ವರ್ಗ ದೊಡ್ಡ ಬಸದಿಯ ಚಂದ್ರಪ್ರಸಾದ್ ಇಂದ್ರ, ಮಹಾವೀರ ಜಿನ ಮಂದಿರದ ಹೆಚ್. ನರಾಜೇಂದ್ರ ಹಾಗೂ ಚಿಕ್ಕಬಸದಿಯ ಪದ್ಮಪ್ರಸಾದ್ ನಡೆಸಿಕೊಟ್ಟರು.

ಇದೆ ಸಂದರ್ಭದಲ್ಲಿ ಶ್ರೀ ಮಹಾವೀರ ಅಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ. ಧನಪಾಲ್, ಜೈನ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ. ಅಜಿತ್ ಕುಮಾರ್, ಶ್ರೀ ಕಾಳಲದೇವಿ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಸುಪ್ರಭ ಅಭಿನಂದನ್, ಹಾಸನ ಜೈನ ಸಂಘದ ಅಧ್ಯಕ್ಷರಾದ ಹೆಚ್.ಬಿ. ಶಾಂತೀಶ್, ಪ್ರಭು, ಸಹ ಕಾರ್ಯದರ್ಶಿ ಹೆಚ್.ಕೆ. ಜೀವೆಂದ್ರ, ನಿರ್ದೇಶಕರಾದ ಹೆಚ್.ಎಂ. ಸುನೀಲ್ ಕುಮಾರ್, ಭರತ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಶ್ಯಾಮನೂರು ಶಿವಶಂಕರಪ್ಪ ನಿಧನ: ವೀರಶೈವ ಲಿಂಗಾಯಿತ ಮಹಾಸಭಾದಿಂದ ಸಂತಾಪ

Published

on

ಹಾಸನ: ಮಾಜಿ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ನಿಧನರಾಗಿರುವುದಕ್ಕೆ ನಗರದ ಹೇಮಾವತಿ ಪ್ರತಿಮೆ ಬಳಿ ಸೋಮವಾರದಂದು ವೀರಶೈವ ಲಿಂಗಾಯಿತ ಮಹಾಸಭಾದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಜವೆನಹಳ್ಳಿ ಮಠದ ಮಠಾಧೀಶರಾದ ಸಂಗಮೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯಿತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಹಾಗೂ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಶ್ಯಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಅವರು ಸುಮಾರು 60 ವರ್ಷಗಳ ಕಾಲ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅಜಾತಶತ್ರು ನಾಯಕರೆಂದು ಸ್ಮರಿಸಿದರು. ಶಾಸಕರಾಗಿದ್ದರೂ ಪಕ್ಷಭೇದವಿಲ್ಲದೆ ಸಮಾಜದ ಹಿತಕ್ಕಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಗುಣ ಹೊಂದಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯಿತ ರಾಷ್ಟ್ರೀಯ ಮಟ್ಟದ ಮಹಾಸಭೆಗೆ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸಂಘಟಿಸಿದ ಮಹಾನ್ ನಾಯಕರು ಎಂದು ಪ್ರಶಂಸಿಸಿದರು. ಅವರ ಸೇವೆ ಅನನ್ಯ ಹಾಗೂ ಸ್ಮರಣೀಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪುನಿತ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚಂದ್ರಮತಿ ಪುಟ್ಟಸ್ವಾಮಿ, ತಾಲೂಕು ಘಟಕದ ಅಧ್ಯಕ್ಷೆ ಮಮತಾ ಪಟೇಲ್, ಉಪಾಧ್ಯಕ್ಷೆ ಗಿರಿಜಂಬಿಕೆ, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ನಿರ್ದೇಶಕ ಶೋಭನ್ ಬಾಬು, ರಾಜ್ಯ ಸಮಿತಿ ನಿರ್ದೇಶಕ ಶಿವಕುಮಾರ್, ಖಜಾಂಚಿ ಎಸ್. ಜಯಶಂಕರ್, ಉಪಾಧ್ಯಕ್ಷೆ ಗೀತ ಪುಟ್ಟಸ್ವಾಮಿ, ಸಹಕಾರ್ಯದರ್ಶಿ ಮಲ್ಲಿಕ್, ನಿರ್ದೇಶಕಿ ಮಯೂರಿ ಲೋಕೇಶ್, ನಂದೀಶ್, ಜಗದೀಶ್, ಶೈಲಾ ಮಧನ್, ಸಮಾಜದ ಮುಖಂಡರಾದ ನಾಗೇಶ್, ಸರಸ್ವತಿ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Continue Reading

Hassan

ನಾಳೆ ಪತ್ರ ಬರಹಗಾರರ ಲೇಖನ ಸ್ಥಗಿತಗೊಳಿಸಿ “ಬೆಳಗಾವಿ ಚಲೋ” ಪ್ರತಿಭಟನೆ

Published

on

ಹಾಸನ: ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಪತ್ರ ಬರಹಗಾರರ ಒಕ್ಕೂಟದ ನಿರ್ಣಯದಂತೆ, ಕಾವೇರಿ-2 ತಂತ್ರಾಂಶ ಜಾರಿಯ ಪರಿಣಾಮ ಉಂಟಾದ ತಾಂತ್ರಿಕ ಗೊಂದಲಗಳು, ಸಾರ್ವಜನಿಕರಿಗೆ ಎದುರಾಗುತ್ತಿರುವ ಅನಾಹುತ ಹಾಗೂ ಪತ್ರ ಬರಹಗಾರರ ವೃತ್ತಿ ಭದ್ರತೆಯ ಸಂಕಟ ವಿರೋಧಿಸಿ ಮಿನಿ ವಿಧಾನ ಸೌDದ ಆವರಣದಲ್ಲಿ ಒಕ್ಕೂಟದಿಂದ ಸೋಮವಾರ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪತ್ರ ಬರಹಗಾರರ ಒಕ್ಕೂಟದ ಸಂಘಟಕ ಜಿ. ಕೃಷ್ಣ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರವು ಪಾರದರ್ಶಕತೆ, ವೇಗ ಹಾಗೂ ಡಿಜಿಟಲೀಕರಣದ ಹೆಸರಿನಲ್ಲಿ ಜಾರಿಗೆ ತಂದಿರುವ ಕಾವೇರಿ-2 ತಂತ್ರಾಂಶ, ಅದರಲ್ಲೂ ವಿಶೇಷವಾಗಿ ಸಿಟಿಜನ್ ಲಾಗಿನ್ ವಿಧಾನವು ಸಾರ್ವಜನಿಕರಿಗೆ ಹಾಗು ಅನುಭವಸಂಪನ್ನ ಪತ್ರ ಬರಹಗಾರರಿಗೆ ಭಾರೀ ತೊಂದರೆ ಸೃಷ್ಟಿಸಿದೆ. ಆಸ್ತಿ ನೋಂದಣಿ ಎಂಬುದು ಸಾಮಾನ್ಯ ನಾಗರಿಕರಿಗೆ ಜೀವನದಲ್ಲಿ ಬರುವ ಕೆಲಸವಾಗಿದ್ದರೂ, ಅದರ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ಗೊಳಿಸಿರುವ ಹಿನ್ನೆಲೆಯಲ್ಲಿ, ಶೇ.80 ರಷ್ಟು ಸಾರ್ವಜನಿಕರು, ಅವಿದ್ಯಾವಂತರು, ರೈತರು, ಕೂಲಿ ಕಾರ್ಮಿಕರು ದೊಡ್ಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ದುಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವಂತೆ, ಸರ್ಕಾರವು ಮುಂದಿನ ದಿನಗಳಲ್ಲಿ ಕಾವೇರಿ-3 ಮೂಲಕ ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ನೋಂದಣಿ ಜಾರಿಗೊಳಿಸಲು ಯತ್ನಿಸುತ್ತಿರುವುದು ಸಾರ್ವಜನಿಕರಲ್ಲಿ ಹಾಗೂ ಪತ್ರ ಬರಹಗಾರರಲ್ಲಿ ಆತಂಕ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಸಿಟಿಜನ್ ಲಾಗಿನ್ ಬಳಸಿ ಆನ್‌ಲೈನ್ ನೋಂದಣಿ ಮಾಡಿಕೊಡುವ ಹೆಸರಿನಲ್ಲಿ ಅನಭಿಜ್ಞ ಡಿಟಿಪಿ/ಸೈಬರ್ ಸೆಂಟರ್‌ಗಳು ದಸ್ತಾವೇಜು ತಯಾರಿಸುವ ಅನಾಹುತ ಸಾಮಾನ್ಯ. ತಪ್ಪು ದತ್ತಾಂಶ ಅಪ್‌ಲೋಡ್ ಆಗುವುದರಿಂದ ಸರ್ಕಾರಕ್ಕೆ ಸೂಕ್ತ ಮುದ್ರಾಂಕ ಶುಲ್ಕ ಬರುತ್ತಿಲ್ಲ, ಸಾರ್ವಜನಿಕರು ಮೋಸಕ್ಕೆ ಒಳಗಾಗುತ್ತಿದ್ದಾರೆ, ನೋಂದಣಿಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ದಸ್ತಾವೇಜು ನೋಂದಣಿ ಕ್ಷೇತ್ರದ ಗಂಭೀರ ಸಮಸ್ಯೆಯಾಗಿದೆ ಎಂದರು.

ಸಾರ್ವಜನಿಕರ ನೋವಿಗೆ ಪರಿಹಾರ ಸಿಗದಿರುವುದು ಹಾಗೂ ಪತ್ರ ಬರಹಗಾರರ ವೃತ್ತಿ ಭದ್ರತೆಯ ಕೊರತೆಯಿಂದ ಕೊನೆಗೂ ರಾಜ್ಯವ್ಯಾಪಿ ಹೋರಾಟ ಅನಿವಾರ್ಯಗೊಂಡಿದೆ. ನಾಳೆ (ಡಿ.16)ರಂದು “ಬೆಳಗಾವಿ ಚಲೋ” ಎಂಬ ದೊಡ್ಡ ಮಟ್ಟದ ಪ್ರತಿಭಟನೆಗೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪತ್ರಬರಹಗಾರರ ಪ್ರಮುಖ ಬೇಡಿಕೆಗಳೆಂದರೇ ರಾಜ್ಯದ ಎಲ್ಲಾ ಪರವಾನಗಿ ಪಡೆದ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಬೇಕು. ನೋಂದಾಯಿಸಲ್ಪಡುವ ಪ್ರತಿ ದಸ್ತಾವೇಜಿಗೆ ಪತ್ರ ಬರಹಗಾರ ಅಥವಾ ವಕೀಲರ ಬಿಕ್ಕಳಂ ಕಡ್ಡಾಯ ಮಾಡಬೇಕು. ಎಲ್ಲಾ ಪತ್ರ ಬರಹಗಾರರಿಗೆ ರಾಜ್ಯದಾದ್ಯಂತ ಏಕ ಮಾದರಿ ಗುರುತಿನ ಚೀಟಿ ನೀಡಬೇಕು. ಪತ್ರ ಬರಹಗಾರರ ವೃತ್ತಿ ಉಳಿಯಲಿ, ಸಾರ್ವಜನಿಕರಿಗೆ ಸುಗಮ ಹಾಗೂ ಸುರಕ್ಷಿತ ನೋಂದಣಿ ಪ್ರಕ್ರಿಯೆ ಸಿಗಲಿ ಎಂಬ ಉದ್ದೇಶದಿಂದ ಈ ಹೋರಾಟ ಮಾಡಲಾಗುತ್ತಿದೆ ಎಂದರು.

ಹೋರಾಟದ ಹಿನ್ನಲೆ ನೋಂದಣಿ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಸಾರ್ವಜನಿಕ ಸೇವೆಯ ಗುಣಮಟ್ಟ, ವೃತ್ತಿ ಭದ್ರತೆ ಹಾಗೂ ನ್ಯಾಯಯುತ ಆಡಳಿತ ಕ್ರಮಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಪತ್ರಬರಹಗಾರರ ಒಕ್ಕೂಟದ ಪರಮೇಶ್, ತುಳಸಿದಾಸ್, ರೇಖಾ ಪ್ರಸಾದ್, ರಾಜಮ್ಮ, ತುಳಸಿ ಪ್ರಸಾದ್ ಇತರರು ಉಪಸ್ಥಿತರಿದ್ದರು.

Continue Reading

Hassan

ಕ್ಯಾಂಟರ್ ಗಾಡಿಗೆ ಹಿಂಭಾಗದಲ್ಲಿ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

Published

on

ಅರಸೀಕೆರೆ:  ತಾಲೂಕಿನ ಹಳೆ ಕನ್ನ ನಾಯಕನಹಳ್ಳಿ, ಕಾಟಿಕೆರೆ ಮಧ್ಯೆ ಇರುವ ಶಿವಮೊಗ್ಗಕ್ಕೆ ಹಾದು ಹೋಗುವ ಬೈಪಾಸ್ ರಸ್ತೆಯಲ್ಲಿ ಬೀರೂರಿಗೆ ಸಂಚರಿಸುತ್ತಿದ್ದ ಕ್ಯಾಂಟರ್ ಗಾಡಿಗೆ ಹಿಂಭಾಗದಲ್ಲಿ ಬರುತ್ತಿದ್ದ ಇನ್ನೋವಾ ಗಾಡಿಯೊಂದು ಓವರ್ ಟೆಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ಹೊರೆಯ ವಲಯದಲ್ಲಿರುವ ಬೆಂಗಳೂರು- ಶಿವಮೊಗ್ಗ ಬೈಪಾಸ್ ರಸ್ತೆಯು ಸಾವಿಗೆ ಆಹ್ವಾನ ನೀಡುತ್ತಿದ್ದು, ದಿನ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುತ್ತಿರುತ್ತವೆ. ಹಾಗೆಯೇ ಇಂದು ಇನ್ನೋವಾ ಕಾರು, ಕ್ಯಾಂಟರ್‌ ಗಾಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಮಗುಚಿಬಿದ್ದಿದ್ದೆ. ಅಲ್ಲದೇ ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಇನ್ನೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಹಾಗೂ ಕ್ಯಾಂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಮತ್ತು ನಿರ್ವಾಹಕರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಗಾಯಾಳುಗಳನ್ನು ಆಂಬ್ಯುಲೆಸ್ಸ್‌ನ ಮೂಲಕ ಅರಸೀಕೆರೆಯಲ್ಲಿರುವ  ಸಾರ್ವಜನಿಕ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ಒಳಪಡಿಸಲಾಗಿದ್ದು,  ಪ್ರಾಣಪಾಯದಿಂದ ಪಾರಾಗಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ.

Continue Reading

Trending

error: Content is protected !!