Connect with us

Chikmagalur

ಹಾವು ಕಚ್ಚಿ ಮಹಿಳೆ ಸಾವು

Published

on

ಚಿಕ್ಕಮಗಳೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡವಾನೆ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅಂಡವಾನೆ ಗ್ರಾಮದ ಸುಜಾತ (50) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ತೋಟದಲ್ಲಿ ಕೆಲಸ ಮಡುವಾಗ ಹಾವು ಕಚ್ಚಿದೆ ಎನ್ನಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

Published

on

ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ.

ಅಡಿಕೆ ಮರದಲ್ಲಿ ಗೊನೆ ಕೊಯ್ಯುವಾಗ ಬಿದ್ದು ಸಾವಪ್ಪಿದ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ.

ಮಂಜು (35) ಮೃತ ದುರ್ದೈವಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದ  ಕೆ.ಎಸ್.ಗೋಪಾಲಕೃಷ್ಣ

Published

on

ಚಿಕ್ಕಮಗಳೂರು: ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೆಂಪನಹಳ್ಳಿ ಕನಕ ಗೆಳೆಯರ ಬಳಗದಿಂದ ನಗರ ಸಮೀಪ ಆಯೋಜಿಸಿದ್ಧ ಎರಡನೇ ವರ್ಷದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬುಧವಾರ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.


ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಪ್ರಥಮ ಹಾ ಗೂ ದ್ವಿತೀಯ ಹೆಚ್.ಎಫ್. ಡಿಲಕ್ಸ್ ಬೈಕ್, ತೃತೀಯ 25 ಸಾವಿರ ನಗದು ಟ್ರೋಫಿ ಮತ್ತು ಚತುರ್ಥ ವಿಜೇತರಿಗೆ 20 ಸಾವಿರ ನಗದು ಆಕರ್ಷಕ ಟ್ರೋಫಿ ವಿತರಿಸಲಾಗುವುದು ಎಂದು ಸ್ಪರ್ಧೆಯ ಆಯೋಜಕ ಕೆಂಪನಹಳ್ಳಿ ಸುನೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಲಕ್ಷ್ಮಣ್, ಎಲ್.ಬಿ.ಎಸ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರತೀಪ್, ಕೆಂಪನಹಳ್ಳಿ ಗ್ರಾಮಸ್ಥರಾದ ಚರಣ್, ಹರೀಶ್, ರಾಕೇಶ್, ಶಶಾಂಕ್, ಸಚಿನ್, ಕಾರ್ತೀಕ್ , ವರುಣ್, ಡಿಂಪು, ವಸಂತ್, ದರ್ಶನ್ ಮತ್ತಿತರರು ಹಾಜರಿದ್ದರು.

Continue Reading

Chikmagalur

ಅಸ್ಸಾಂನಿಂದ ಬಂದಿರುವ ಕಾರ್ಮಿಕನಿಂದ ಕಾಫಿ ತೋಟದಲ್ಲಿ ಗೋ ಹತ್ಯೆ

Published

on

ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಗೋ ಹತ್ಯೆ ಮಾಡಿದ ಘಟನೆ ನಡೆದಿದ್ದು, ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿರುವ ಕಾರ್ಮಿಕರಿಂದ ಕೃತ್ಯ ನಡೆದಿದೆ.

ಗೋವುಗಳನ್ನು ಕದ್ದು ತೋಟದಲ್ಲಿ ಹತ್ಯೆ ಮಾಡಲಾಗಿದೆ.ಖಚಿತ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ ನಡೆದಿದ್ದು ಆರೋಪಿಗಳು-ಗೋಮಾಂಸ ಪಕ್ಷಕ್ಕೆ ಪಡೆಯಲಾಗಿದೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರಿನ ಕಾಫಿ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು,ಎರಡು ದನಗಳನ್ನು ಹತ್ಯೆ ಮಾಡಿ, ಮಾಂಸ ಹಂಚಿಕೆ ವೇಳೆಯಲ್ಲಿ ದಾಳಿ ಆಗಿದೆ.

ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.ಪಿ.ಎಸ್.ಐ. ರವೀಶ್ ನೇತೃತ್ವದಲ್ಲಿ ದಾಳಿ ನಡೆಸಿಆರೋಪಿಗಳಾದ ಅನ್ಸರ್, ಮಜೀದ್, ಮುಜಾಮಿಲ್ ನನ್ನು ಬಂಧಿಸಿದ್ದಾರೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Continue Reading

Trending

error: Content is protected !!